ಹಾಸನ l ಭಾರತ್ ಒನ್ ಜನಸಂಪರ್ಕ ಕೇಂದ್ರದಿಂದ ಜನರಿಗೆ ಸಹಾಯ: ಶಾಸಕ ಸಿಮೆಂಟ್ ಮಂಜು

Date:

Advertisements

ಬೆಂಗಳೂರು ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಎನ್‌ಎಚ್‌75ನ ಸಕಲೇಶಪುರ ತಾಲೂಕು ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಮಹಲ್ ಗ್ರಾಮದಲ್ಲಿ ಭಾರತ್ ಒನ್ ಜನಸೇವಾ ಸಂಪರ್ಕ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು.

“ಆನೆಮಹಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇವಾ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಈ ಸೇವಾ ಕೇಂದ್ರದಿಂದ ಸುತ್ತಮುತ್ತಲಿನ 4 ಪಂಚಾಯಿತಿಗಳಾದ ಕ್ಯಾಮನಳ್ಳಿ, ಕ್ಯಾನಳ್ಳಿ, ಹೆಬ್ಬಸಾಲೆ ಹಾಗೂ ಬ್ಯಾಕರವಳ್ಳಿ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿದೆ” ಎಂದು ಹೇಳಿದರು.

“ಭಾರತ್ ಒನ್ ಜನಸಂಪರ್ಕ ಸೇವಾ ಕೇಂದ್ರ ಮಾಡಿರುವುದರಿಂದ ರೈತರಿಗೆ ಬೇಕಾಗುವ ಕೃಷಿಗೆ ಸಂಬಂಧಪಟ್ಟ ಸಲಕರಣೆಗಳು, ಎಲ್ಲ ರೀತಿಯ ಸಬ್ಸಿಡಿಯ ಉಪಕರಣಗಳು, ಆನ್‌ಲೈನ್‌ ಸೇವೆಗಳಾದಂತಹ ಪಹಣಿ, ಅರ್‌ಟಿಸಿ ಸರ್ವಿಸ್ ಪರ್ಸನಲ್ ಲೋನ್ಸ್, ಹಲವು ರೀತಿಯ ಉದ್ದಿಮೆದಾರರಿಗೆ ಸಿಗಬೇಕಾದಂತ ಹಣಕಾಸು ಸಹಾಯದ ಅರ್ಜಿಗಳು, ಜನರಿಗೆ ಬೇಕಾದ ಹೆಲ್ತ್ ಕಾರ್ಡ್‌ಗಳು ಹೀಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ” ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

Advertisements

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l  ಕಾಡುಕೋಣ ದಾಳಿ: ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ

“ನಮ್ಮ ಈ ಭಾರತ್‌ ಒನ್‌ ಜನಸಂಪರ್ಕ ಸೇವೆಯನ್ನು ಒದಗಿಸಲಾಗಿದೆ. ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಇದರ ಸದುಪಯೋಗಗಳನ್ನು ಪಡೆದುಕೊಳ್ಳಬೇಕು” ಎಂದು ನಾಗೇಶ್ ಎಂ ಎಚ್ ಮಾಗೇರಿ ತಿಳಿಸಿದರು.

ಈ ವೇಳೆ ತಾಲೂಕು ಒನ್ ಅಧಿಕಾರಿ, ಭಾರತ್ ಒನ್ ಜನಸಂಪರ್ಕ ಕೇಂದ್ರದ ಸಂಪರ್ಕ ಅಧಿಕಾರಿಗಳು, ಜಾನಕೆರೆ ಲೋಕೇಶ್ ಮತ್ತು ಗ್ರಾಮಸ್ಥರು ಇದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X