ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್‌ನ ಒಂದು ಆನೆ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದ ಬಳಿ ನಡೆದಿದೆ.
ಕಳೆದ 3ರಿಂದ 4ದಿನಗಳಿಂದ ಬೀಟಮ್ಮ ಗ್ಯಾಂಗ್‌ನ 17 ಕಾಡಾನೆಗಳು ಹಿಂಡುಗಟ್ಟಲೇ ತುಡುಕೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮೀಪ ಇದ್ದವು. ರೈತರು ಬೆಳೆದಿರುವ ಸಾಕಷ್ಟು ಬೆಳೆಗಳನ್ನು ನಾಶ ಮಾಡಿವೆ. ಈ 17 ಕಾಡಾನೆಗಳಲ್ಲಿ ಒಂದು ಕಾಡಾನೆ ಕಾಫಿ ತೋಟದಲ್ಲಿ ಸಂಚರಿಸುವಾಗ ಕಾಫಿ ತೋಟದ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದೆ, ವಿದ್ಯುತ್ ಶಾಕ್‌ನಿಂದ ಸ್ಥಳದಲ್ಲೇ ಸಾವನ್ನಪ್ಪಿದೆ.
ಇದನ್ನೂ ಓದಿದ್ದೀರಾ?ಜಮೀರ್‌ನನ್ನು ಆಲದಮರಕ್ಕೆ ನೇಣು ಹಾಕಿ: ಮುತಾಲಿಕ್ ಪ್ರಚೋದನಾಕಾರಿ ದ್ವೇಷ ಭಾಷಣ
ಮಾಹಿತಿ ತಿಳಿದ ಕೂಡಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
