ಹಾಸನ | ಶ್ರವಣಬೆಳಗೊಳದ ಜೈನ ಮಠಕ್ಕೆ ಆಗಮಶಾಸ್ತ್ರಿ ಇಂದ್ರಜೈನ್‌ ಉತ್ತರಾಧಿಕಾರಿ

Date:

Advertisements
  • ಇಂದ್ರಜೈನ್‌ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು
  • ಜೈನ ಮಠದ ಸ್ವಾಮೀಜಿಗಳು, ಟ್ರಸ್ಟಿಗಳು ಹಾಗೂ ಮುಖಂಡರಿಂದ ಆಯ್ಕೆ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ಜೈನ ಮಠದ ಉತ್ತರಾಧಿಕಾರಿಯಾಗಿ ಆಗಮಶಾಸ್ತ್ರಿ ಇಂದ್ರಜೈನ್‌ ನೇಮಕವಾಗಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವಾರದ ಇಂದ್ರಜೈನ್, 22 ವರ್ಷ ಹರೆಯದವರಾಗಿದ್ದು, ಬಿಕಾಂ ಪದವಿ ಪಡೆದಿದ್ದಾರೆ.

ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಾವನ್ನಪ್ಪಿದ್ದರಿಂದ ಶ್ರವಣಬೆಳಗೊಳ ಜೈನ ಮಠದ ಉತ್ತರಾಧಿಕಾರಿ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಇಂದ್ರಜೈನ್ ಅವರನ್ನು ನೇಮಕ ಮಾಡಲಾಗಿದೆ.

ಚಾರುಕೀರ್ತಿ ಸ್ವಾಮೀಜಿಯ ಆರೋಗ್ಯ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆಯೇ ಶ್ರವಣಬೆಳಗೊಳದ ಜೈನ ಮಠದ ಉತ್ತರಾಧಿಕಾರಿ ನೇಮಕದ ಕುರಿತು ಚರ್ಚೆ ನಡೆಸಲಾಗಿತ್ತು. ಮಠಕ್ಕೆ ಇಂದ್ರ ವಂಶಸ್ಥರೇ ಸ್ವಾಮೀಜಿಯರಾಗುವ ಪರಂಪರೆಯಿರುವುದರಿಂದ ಆ ಬಗ್ಗೆ ಹಲವು ಜೈನಮಠದ ಸ್ವಾಮೀಜಿಯವರು, ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಟ್ರಸ್ಟಿಗಳು, ಜೈನ ಸಮುದಾಯದ ಮುಖಂಡರು ಸೇರಿ ಚರ್ಚಿಸಿದ್ದರು. ಎಲ್ಲರೂ ಒಮ್ಮತದಿಂದ ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿದ್ದರು.

Advertisements

ಆಗಮಶಾಸ್ತ್ರಿ ಇಂದ್ರಜೈನ್‌ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡ ನಂತರ ಅವರಿಗೆ ಜೈನ ಧರ್ಮದ ಕ್ಷುಲ್ಲಕ ದೀಕ್ಷೆ ನೀಡಲಾಗಿತ್ತು. ಕಳೆದ 20 ದಿನಗಳಿಂದಲೂ ಶ್ರವಣಬೆಳಗೊಳ ಮಠದಲ್ಲಿ ಆಗಮಶಾಸ್ತ್ರಿ ಇಂದ್ರಜೈನ್‌ ಅವರಿಗೆ ಮಠದ ಪರಂಪರೆ, ಆಚಾರ–ವಿಚಾರ, ಮಠದ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

ಕಲಬುರಗಿ | ಬೆಳೆ ಹಾನಿ: ಎಕರೆಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಎಐಕೆಕೆಎಂಎಸ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ...

ಚಿಕ್ಕಬಳ್ಳಾಪುರ | ಮಂತ್ರಾಲಯದಲ್ಲಿ ಡಾ.ಕೈವಾರ ಶ್ರೀನಿವಾಸ್‌ರವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರದಾನ

ಮಂತ್ರಾಲಯದ ಸದ್ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪ್ರಪ್ರಥಮ ಅಂತಾರಾಜ್ಯ ಕನ್ನಡ...

ಕೋಲಾರ | ರಸ್ತೆ ವಿಸ್ತರಣೆಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ; ಕುರ್ಕಿ ರಾಜೇಶ್ವರಿ ಆರೋಪ

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ...

Download Eedina App Android / iOS

X