ಸಾರ್ವಜನಿಕರಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ನೆರವು ಮತ್ತು ಸಲಹೆಯನ್ನು ನೀಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಕಾನೂನು ಸೇವೆಗಳ ಉಪಯೋಗ ಪಡೆಯಬೇಕು ಎಂದು ಕಾನೂನು ಸೇವೆಗಳ ಪೆನಲ್ ವಕೀಲೆ ಬಿ ಎಫ್ ಹೊಸಮನಿ ಧಾರವಾಡದ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಮತದಾರರ ಸಾಕ್ಷರತಾ ಕ್ಲಬ್, ರಾಜ್ಯಶಾಸ್ತ್ರ ವಿಭಾಗ, ದಿನಗಳ ದಿನಾಚರಣೆ ಮತ್ತು ಎನ್ಎಸ್ಎಸ್ ಘಟಕಗಳ ಸಂಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿ ಮತ್ತು ದೇಶವನ್ನು ಬಲಿಷ್ಠ ಗೊಳಿಸಲು ನಾವು ಮುಂದಾಗಬೇಕಿದೆ. ಸಾಧ್ಯವಾದಷ್ಟು ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಸಂತೋಷದಿಂದ ಜೀವನ ಮಾಡಬೇಕು ಎಂದರು.
ಡಾ. ಆಸ್ಮಾ ನಾಜ್ ಬಳ್ಳಾರಿ ಅಧ್ಯಕ್ಷತೆಯ ಸಮಾರೋಪವಾಗಿ ಮಾತನಾಡಿ, ಉಚಿತ ಕಾನೂನು ಸಲಹೆ, ರಾಜಿ ಸಂಧಾನ, ಜನತಾ ನ್ಯಾಯಾಲಯ, ವಾಜ್ಯಪೂರ್ವ ಸಮಸ್ಯೆಗಳ ಪರಿಹಾರ, ಕಾನೂನು ಸಾಕ್ಷರತೆ ಸೇವೆಗಳನ್ನು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶಗಳು ಆಗಿವೆ. ಇದರ ಲಾಭವನ್ನು ಸಾರ್ವಜನಿಕರು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಧಾರವಾಡ | ತಿಪ್ಪೆತೊಟ್ಟಿಯಂತಾದ ಇಂದಿರಾ ಗಾಜಿನ ಮನೆ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ
ಕಾರ್ಯಕ್ರಮದಲ್ಲಿ ಡಾ. ಏನ್ ಬಿ. ನಾಲತವಾಡ, ಡಾ. ನಾಗರಾಜ್ ಗುದಗನವರ, ಡಾ. ತಾಜುನ್ನಿಸ್ಸಾ, ಉಪಸ್ಥಿತರಿದ್ದರು. ಅತಿಥಿಗಳನ್ನು ಪ್ರೊ. ನಾಗರಾಜ ಕನಕಣಿ ಸ್ವಾಗತಿಸಿದರು. ಡಾ. ಸೌಭಾಗ್ಯ ಜಾದವ್ ನಿರೂಪಿಸಿದರು.