ಮಠಗಳಿಗೆ, ದೇವಸ್ಥಾನಗಳಿಗೆ ಸಿಕ್ಕ ಕಾನೂನಿನ ಅವಕಾಶ ಮುಸ್ಲಿಮರ ವಕ್ಫ್ ಗೆ ಇಲ್ಲವೇ? ವಕ್ಫ್ ಗೆ ಬಂದಿರುವ ಜಮೀನುಗಳು ಕೂಡಾ ಇಸ್ಲಾಮಿಕ್ ಭಕ್ತರಿಂದ ಬಂದಿರುವ ದಾನದ ಜಮೀನುಗಳೇ ಆಗಿವೆ. ಮುಸಲ್ಮಾನರು ದಾನ ಮಾಡಿದ ಆಸ್ತಿ ಯಾವುದೂ ಕೂಡ ಅವರ ಹೆಸರಲ್ಲಿ ಇರಲ್ಲ. ಸರ್ಕಾರದ ವಕ್ಫ್ ಬೋರ್ಡ್ ಹೆಸರಲ್ಲಿ ಇರುತ್ತೆ. ಮುಸ್ಲಿಂ ಜನಸಾಮಾನ್ಯರು ತಮ್ಮ ದುಡಿಮೆಯಿಂದ ದಾನವಾಗಿ ಕೊಟ್ಟ ಆಸ್ತಿಯೇ ವಕ್ಫ್ ಆಸ್ತಿ!
ಉಡುಪಿಯ ಶಿವಳ್ಳಿ ಗ್ರಾಮದ ಜಿ ಅನಂತ ಭಟ್ಟ ಎಂಬವರಿಗೆ ಯಾವುದೋ ಕಾಲದಲ್ಲಿ ಉಡುಪಿ ಅದಮಾರು ಮಠದ ಜಮೀನನ್ನು ಗೇಣಿಗೆ ನೀಡಲಾಗಿತ್ತು. ಇಂದಿರಾ ಗಾಂಧಿ-ದೇವರಾಜ ಅರಸುರವರು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಾಗ ಜಿ ಅನಂತ ಭಟ್ಟರೂ ಅರ್ಜಿ ಸಲ್ಲಿಸಿದರು. ಯಾವುದೋ ಕಾಲದಲ್ಲಿ ಅನಂತ ಭಟ್ಟ ಕುಟುಂಬಕ್ಕೆ ನೀಡಲಾದ ಭೂಮಿಯನ್ನು ಈಗ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅನಂತ ಭಟ್ಟ ಅನುಭವಿಸುತ್ತಿರುವ ಭೂಮಿ ಅದಮಾರು ಮಠಕ್ಕೇ ಸೇರಬೇಕು ಎಂದು ಅದಮಾರು ಮಠ ತಗಾದೆ ತೆಗೆಯಿತು. ಆಗ ಈ ವಿವಾದ ಭೂನ್ಯಾಯ ಮಂಡಳಿಯ ಮೆಟ್ಟಿಲೇರಿತು. ಭೂ ನ್ಯಾಯಮಂಡಳಿಯು ವಿಸ್ತೃತ ವಿಚಾರಣೆ ನಡೆಸಿತು. ಅದಮಾರು ಮಠದ ದಾಖಲೆಗಳನ್ನೂ ಪರಿಶೀಲಿಸಿ ‘ಭೂ ಸುಧಾರಣಾ ಕಾಯ್ದೆಯ ಪ್ರಕಾರ ಭೂಮಿ ಜಿ ಅನಂತ ಭಟ್ಟ ಕುಟುಂಬಕ್ಕೆ ಸೇರಿದ್ದು’ ಎಂದು ಆದೇಶ ಹೊರಡಿಸಿತು.
ಭೂ ನ್ಯಾಯ ಮಂಡಳಿಯ ಆದೇಶವನ್ನು ಪ್ರಶ್ನಿಸಿ ಅದಮಾರು ಮಠವು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತು. ವಾದ ವಿವಾದ ಆಲಿಸಿದ ಹೈಕೋರ್ಟ್ ಅದಮಾರು ಮಠದ ಪರವಾಗಿ ಆದೇಶ ನೀಡಿದೆ. ಆದೇಶದಲ್ಲಿ ಹೈಕೋರ್ಟ್ ಹೀಗೆ ಹೇಳಿದೆ. ‘‘ಗೇಣಿದಾರ ಅನುಭವಿಸುತ್ತಿರುವ ಜಮೀನು ಮಠದ ಜಮೀನಾಗಿದೆ. ಮಠ ಎನ್ನುವುದು ಧಾರ್ಮಿಕ ಮತ್ತು ದತ್ತಿ ಸಂಸ್ಥೆಯಾಗಿದೆ. ಧಾರ್ಮಿಕ ಚಟುವಟಿಕೆಗಳನ್ನು ನಡೆಸಲೆಂದೇ ಭಕ್ತರು ಮಠಕ್ಕೆ ಭೂಮಿಯನ್ನು ದಾನವಾಗಿ ನೀಡಿರುತ್ತಾರೆ. ಹಾಗಾಗಿ ಮಠಕ್ಕೆ ದಾನವಾಗಿ ಬಂದ ಭೂಮಿಯ ಲಾಭ ಮಠಕ್ಕೇ ಸಲ್ಲಬೇಕು’’ ಎಂದು ಸ್ಪಷ್ಟವಾಗಿ ಹೇಳಿದೆ. (Sri. Admar Mutt Rep By Its Manager vs Smt. Yashoda W/O Late G Anantha Bhatta WRIT APPEAL NO.15198/2011)
ಅದಮಾರು ಮಠದ ಗೇಣಿದಾರ ಆಗಿದ್ದ ರಾಮಶೆಟ್ಟಿ ಎಂಬವರು ಭೂಸುಧಾರಣಾ ಕಾಯ್ದೆಯಡಿ ಅರ್ಜಿ ಹಾಕಿದ್ದರು. ಭೂ ನ್ಯಾಯಮಂಡಳಿಯ ಆದೇಶದ ಪ್ರಕಾರ ಅದಮಾರು ಮಠದ ಹೆಸರಿನಲ್ಲಿದ್ದ ಭೂಮಿ ರೈತ ರಾಮ ಶೆಟ್ಟಿ ಎಂಬವರಿಗೆ ಸೇರಬೇಕು. ಭೂನ್ಯಾಯ ಮಂಡಳಿಯ ಆದೇಶ ಪ್ರಶ್ನಿಸಿ ಅದಮಾರು ಮಠವು ಹೈಕೋರ್ಟ್ ಗೆ ಅರ್ಜಿ ಹಾಕಿತ್ತು. ಹೈಕೋರ್ಟ್ ತೀರ್ಪು ಮಠದ ಪರವಾಗಿ ತೀರ್ಪು ನೀಡಿತ್ತು. ‘‘ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯ ಹಕ್ಕುದಾರಿಕೆಯ ಮನವಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಸರಿಯಾದ ದಾಖಲೆಗಳಿಲ್ಲದೇ ಧಾರ್ಮಿಕ ಸಂಸ್ಥೆಗಳ ಭೂಮಿಯನ್ನು ಗೇಣಿದಾರರಿಗೆ /ಬಾಡಿಗೆದಾರರಿಗೆ ನೀಡಬಾರದು. ಯಾಕೆಂದರೆ ಧಾರ್ಮಿಕ ಸಂಸ್ಥೆಗಳ ಅಭಿವೃದ್ದಿಗಾಗಿಯೇ ಭಕ್ತರು ಭೂಮಿಯನ್ನು ದಾನ ಮಾಡಿರುತ್ತಾರೆ. ಆ ದಾನದ ಆಶಯಗಳಿಗೆ ಚ್ಯುತಿ ತರಬಾರದು ಎಂಬ ಎಚ್ಚರಿಕೆ ಮಂಡಳಿಗೆ ಇರಬೇಕು’’ ಎಂದು ಆದೇಶ ನೀಡಿದೆ. ಓದಿ : SRI ADMAR MUTT, UDUPI AND ANOTHER vs. RAMA SHETTY (DEAD) ಅದಮಾರು ಮಠದ ಮತ್ತೊಂದು ಭೂಮಿ ವಿವಾದ ಆಗಿರುವ ಅದಮಾರು ಮಠ ವರ್ಸಸ್ ಶ್ಯಾಮ್ ಪ್ರಭು ಮತ್ತು ಪ್ರೆಸಿಲ್ಲ ವಿನೇಜಸ್ ಮತ್ತಿತರರು ಪ್ರಕರಣದಲ್ಲೂ ಹೈಕೋರ್ಟ್ ಇದನ್ನೇ ಹೇಳಿದೆ.
‘ಭಕ್ತರು ದೇವಸ್ಥಾನಗಳಿಗೆ ದಾನವಾಗಿ ನೀಡಿದ ಭೂಮಿಯನ್ನು ಧಾರ್ಮಿಕ ಸಂಸ್ಥೆಗಳು ಕಳೆದುಕೊಳ್ಳಬಾರದು. ದೇವಾಲಯಗಳು ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಭಕ್ತರಿಂದ ಭೂಮಿಯನ್ನು ದಾನವಾಗಿ ಪಡೆಯುತ್ತವೆ. ಹಾಗಾಗಿ ರೈತರಿಗೆ ದೇವಾಲಯದ ಭೂಮಿಯನ್ನು ನೀಡುವಾಗ ಅಧಿಕಾರಿಗಳು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ಅದನ್ನು ಗಮನದಲ್ಲಿ ಇಟ್ಟುಕೊಂಡು ರೈತ/ಅರ್ಜಿದಾರ ದೇವಾಲಯದ ದಾನದ ಭೂಮಿಯನ್ನು ಪಡೆಯಲು ಅರ್ಹತೆ ಹೊಂದಿದ್ದಾನೆಯೇ ಎಂದು ನೋಡಬೇಕು’ ಎಂದು ಹೈಕೋರ್ಟ್ SRI ANJANEYASWAMY TEMPLE, THINDLU, BANGALORE vs. STATE OF KARNATAKA AND OTHERS ಪ್ರಕರಣದಲ್ಲಿ ಹೇಳುತ್ತದೆ.

ಮಠಗಳಿಗೆ, ದೇವಸ್ಥಾನಗಳಿಗೆ ಸಿಕ್ಕ ಕಾನೂನಿನ ಅವಕಾಶ ಮುಸ್ಲಿಮರ ವಕ್ಫ್ ಗೆ ಇಲ್ಲವೇ? ವಕ್ಫ್ ಗೆ ಬಂದಿರುವ ಜಮೀನುಗಳು ಕೂಡಾ ಇಸ್ಲಾಮಿಕ್ ಭಕ್ತರಿಂದ ಬಂದಿರುವ ದಾನದ ಜಮೀನುಗಳೇ ಆಗಿವೆ. ಮುಸಲ್ಮಾನರು ದಾನ ಮಾಡಿದ ಆಸ್ತಿ ಯಾವುದು ಕೂಡ ಅವರ ಹೆಸರಲ್ಲಿ ಇರಲ್ಲ. ದಾನ ಮಾಡಿದ ಭೂಮಿ ಸರ್ಕಾರದ ವಕ್ಫ್ ಬೋರ್ಡ್ ಹೆಸರಲ್ಲಿ ಇರುತ್ತೆ. ಮುಸ್ಲಿಂ ಜನಸಾಮಾನ್ಯರು ತಮ್ಮ ದುಡಿಮೆಯಿಂದ ದಾನವಾಗಿ ಕೊಟ್ಟ ಆಸ್ತಿಯೇ ವಕ್ಫ್ ಆಸ್ತಿ! ಈ ರೀತಿ ತನ್ನ ದುಡಿಮೆಯ ಆಸ್ತಿಯನ್ನು ದಾನ ಮಾಡಿದರೆ ನಮ್ಮ ಪೂರ್ವಜರಿಗೆ ಮತ್ತು ನಮಗೆ ದೇವರು ಒಳ್ಳೆಯದು ಮಾಡುತ್ತಾನೆ ಎಂಬ ಭಾವನೆ ಇದೆ. ಮಸೀದಿ, ಮದರಸ, ಶಿಕ್ಷಣ, ಇಸ್ಲಾಂ ಧರ್ಮದ ಚಟುವಟಿಕೆಗಳಿಗಾಗಿ ಮುಸ್ಲಿಮರು ಭೂದಾನ ಮಾಡುತ್ತಾರೆ. ಹಾಗಾಗಿ ಹೈಕೋರ್ಟ್ ಆದೇಶದ ಪ್ರಕಾರ ವಕ್ಫ್ ಆಸ್ತಿ ವಕ್ಫ್ ಗೇ ಸೇರಬೇಕು ತಾನೆ? ದಾನದ ಆಶಯ ಮಠಕ್ಕೂ, ವಕ್ಫ್ ಗೂ ಒಂದೇ ತಾನೆ?
ಇಷ್ಟಕ್ಕೂ ವಕ್ಫ್ ಎನ್ನುವುದು ಸರ್ಕಾರಿ ಮಂಡಳಿ. ಸರ್ಕಾರ ರೈತರಿಗೆ ನೋಟಿಸ್ ಕೊಟ್ಟಾಗ ಅದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬಹುದಾದ ಅವಕಾಶ ಇದೆ. ‘ನಿಮ್ಮ ಆಸ್ತಿ ವಕ್ಫ್ ಹೆಸರಿನಲ್ಲಿದೆ. ಹಾಗಾಗಿ ಇದು ನಿಮ್ಮದೇ ಆಸ್ತಿ ಎನ್ನುವುದಕ್ಕೆ ದಾಖಲೆ ಕೊಡಿ’ ಎಂದು ವಕ್ಫ್ ನೋಟಿಸ್ ನೀಡಿದ್ದರಿಂದ ರೈತರು ತಮ್ಮ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿದಂತಾಗಿದೆ. ಆದರೆ ಮಠಗಳದ್ದು ಹಾಗಲ್ಲ. ಈಗಲೂ ಊರಿಗೂರೇ ಮಠಗಳ ಹೆಸರಿನಲ್ಲಿ ಜಮೀನುಗಳಿವೆ. ಮಠ ಎನ್ನುವುದು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲೂ ಬರುವುದಿಲ್ಲ. ಹಾಗಾಗಿ ಪ್ರಭಾವಿಗಳಾಗಿರುವ, ಹಣವಂತರಾಗಿರುವ ಮಠಗಳ ಜೊತೆ ಬಡ ರೈತರು ಕಾನೂನು ಸಂಘರ್ಷ ಮಾಡಬೇಕಿದೆ. ಹಾಗೆ ಕಾನೂನು ಸಂಘರ್ಷ ನಡೆಸಿದ ರೈತರ ಪೈಕಿ ಯಾರೂ ಮಠದ ಮುಂದೆ ಗೆದ್ದವರಿಲ್ಲ! ಆದರೆ ವಕ್ಫ್ ನಿಂದ ರೈತರಿಗೆ ನೋಟಿಸ್ ಪ್ರಕರಣ ಹಾಗಲ್ಲ! ವಕ್ಫ್ ಆಸ್ತಿಗಳ ವಿವಾದಗಳ ನ್ಯಾಯ ತೀರ್ಮಾನಕ್ಕೆ ಟ್ರಿಬ್ಯುನಲ್ ಇದೆ. ಜಿಲ್ಲಾ ನ್ಯಾಯಾಧೀಶರೊಬ್ಬರು ಈ ಟ್ರಿಬ್ಯುನಲ್ ನಲ್ಲಿ ನ್ಯಾಯಾಧೀಶರಾಗಿ ಇರುತ್ತಾರೆ. ಸರ್ಕಾರದಿಂದ ನಿಯುಕ್ತಿಗೊಂಡ ಸಿಬ್ಬಂದಿಗಳೇ ಈ ಟ್ರಿಬ್ಯುನಲ್ ನಲ್ಲಿ ಇರ್ತಾರೆ. ಜಮೀನು ರೈತರದ್ದಾದರೆ ಅವರು ಕಟ್ಟಿರುವ ತೆರಿಗೆ, ಗ್ರಾಪಂ ದಾಖಲೆಗಳು, ಅನುಭವಿಸಿಕೊಂಡು ಬಂದ ವರ್ಷಗಳ ಬಗೆಗಿನ ದಾಖಲೆಗಳನ್ನು ಹಾಜರುಪಡಿಸಿದರೆ ರೈತರ ಭೂಮಿ ರೈತರಿಗೆ ಉಳಿಯುತ್ತದೆ. ರೈತನ ಆರ್‌ಟಿಸಿ (ಪಹಣಿ) ಯ ಹಕ್ಕುಗಳು ಕಾಲಂ ನಲ್ಲಿ ನಮೂದಾಗಿದ್ದ ‘ವಕ್ಫ್ ಆಸ್ತಿ’ ಎಂಬ ಉಲ್ಲೇಖವೂ ಮಾಯವಾಗುತ್ತದೆ. ಆ ಮೂಲಕ ರೈತನ ದಾಖಲೆಯೂ ಪಕ್ಕಾ ಆಗುತ್ತದೆ!
ಆದರೆ ಕರಾವಳಿಯ ಮಠಗಳ ಹೆಸರಿನಲ್ಲಿರುವ ರೈತನ ಜಮೀನಿನ ಕತೆ ಏನು? ಈಗಲೂ ಕರಾವಳಿಯ ನೂರಾರು ಎಕರೆ ರೈತರ ಜಮೀನುಗಳ ಪಹಣಿಯಲ್ಲಿ ಮಠಗಳ ಹೆಸರಿದೆ. ವಕ್ಫ್ ವಿವಾದದ ಬಗ್ಗೆ ಮಾತನಾಡುವ ಈ ಮಠಾಧೀಶರು ‘ಮಠಗಳ ಹೆಸರಿನಲ್ಲಿರುವ ರೈತರ ಜಮೀನುಗಳು ರೈತರಿಗೇ ಸೇರಿದ್ದು. ಈಗಲೇ ದಾಖಲೆಗಳನ್ನು ರೈತರ ಹೆಸರಿಗೆ ಮಾಡಿಕೊಳ್ಳಿ. ಮಠ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದು ಘೋಷಿಸುತ್ತದೆಯೇ? ಇಲ್ಲ ತಾನೆ?
ಇದನ್ನೂ ಓದಿ ಬಾಗಲಕೋಟೆ | ದೇವಸ್ಥಾನದ ಕಾರ್ಯಕ್ರಮದಲ್ಲಿ ‘ವಕ್ಫ್’ ವಿಚಾರ: ಶಾಸಕ ಯತ್ನಾಳ್‌ಗೆ ಸಾರ್ವಜನಿಕರಿಂದ ಛೀಮಾರಿ
ಎಲ್ಲಕ್ಕಿಂತ ಮುಖ್ಯವಾಗಿ ಕಾನೂನು ಎಲ್ಲರಿಗೂ ಒಂದೇ. “ದಾನವಾಗಿ ಧಾರ್ಮಿಕ ಸಂಸ್ಥೆಗಳಿಗೆ ಬಂದ ಭೂಮಿ ರೈತರೂ ಸೇರಿದಂತೆ ಯಾರೇ ಹಕ್ಕುದಾರರಾಗಿದ್ದರೂ ಅದನ್ನು ಸರಿಯಾಗಿ ವಿಮರ್ಶಿಸಬೇಕು. ಸುಲಭವಾಗಿ ಧಾರ್ಮಿಕ ಸಂಸ್ಥೆಗಳು ಕಳೆದುಕೊಳ್ಳಬಾರದು. ಭೂ ಹಕ್ಕು ಪ್ರತಿಪಾದಕರ ದಾಖಲೆಯನ್ನು ಪರಿಶೀಲಿಸಿ ಭೂಮಿಯನ್ನು ನೀಡಬೇಕು” ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಮಠಗಳಿಗೆ, ದೇವಸ್ಥಾನಗಳಿಗೆ ದಾನವಾಗಿ ಬಂದ ಭೂಮಿಯನ್ನು ಉಳಿಸಿದೆ. ಹೈಕೋರ್ಟ್ ಹೇಳಿದಂತೆ ‘ದಾನದ ಭೂಮಿಗಿರುವ ಮಹತ್ವ’ ಮಠಕ್ಕೂ ವಕ್ಫ್ ಗೂ ಒಂದೇ ಆಗಿದೆ. ಹಾಗಾಗಿ ಮಠಗಳ ಪರವಾಗಿನ ತೀರ್ಪು ವಕ್ಫ್ ಗೂ ಅನ್ವಯವಾಗುತ್ತದೆ ತಾನೆ?

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ
Court is there to give justice. Notice to Farmers is not fair enough as all these years as there was nothing like this heard before.
Mangya court verdict gu waqf tribunal verdict gu vyatyasa gottilla andare neenenta lekhaka kano?
ಹುಚ್ಚ ಲೇಖಕನೆ, ಮಠ ಮತ್ತು wakhf ಒಂದೆಯೇ, ಮಠದ ಪವಿತ್ರತೆ ಆಗಲಿ, ಉದ್ದೇಶ ಗಳ 1℅ ಆದರು wakhf ಇದೆಯ, ಪೆನ್ ಇದೆ ಅಂತ ತಲೆ ಬಾಲ ಇಲ್ಲದೆ ಏನಾದರು ಬರೆಯುವುದು ಇಂತಹ ಬರಹಗಳನ್ನು ಪ್ರಕಟಿಸಲು ಡಬ್ಬ ಮಧ್ಯಮಗಳು
ಉತ್ತಮ ಬರಹ ಸರ್. ನೀವು ಸತ್ಯದ ಪ್ರತಿಪಾದಕರು. ದೇವರ ಕೃಪೆ ನಿಮ್ಮ ಮೇಲಿರಲಿ.
The actuality is different.For Hindus there is no seperate court or tribunal.Waque board there is no seperate tribunal/ court.For claiming agriculturists land waquue board need not submit any documents to tahasildar.But agriculturists has to submit and prove.Further waque board court and tribunal is managed by Muslim community. Waque board while claiming agriculturists land should submit documents and proof to revenue authority.
ಲೇಖಕನಿಗೆ ಮಾಹಿತಿ ಕೊರತೆಯಿದೆ.
Don’t write the articles when you are drunken
Don’t write time pass article, do some homework and write with supporting documents and proof.
This is Trump and modi era, you leftees time over. Go and hide in the home safely.
ಇನ್ಯಾವುದೋ ವಿತಂಡವಾದಿ ಅಲ್ಪ ವಿಧ್ಯೆ ಮಹಾಗರ್ವಿ ಈ ಲೇಖನ ಬರೆದಿದ್ದಾನೆ, ಮಠಕ್ಕೆ ದಾನ ಕೊಟ್ಟಿರುವ ದಾಖಲೆಗಳಿವೆ ಹಾಗೆ ಜಾಗ ಮಠದ್ದೊ ಜನರದ್ದೊ ಅಂತ ತಿರ್ಮಾನಿಸಲು ಕೋರ್ಟ್ ಇದೆ ಹಾಗೆಯೇ ವಕ್ಫ್‌ಗೆ ಭೂಮಿಯನ್ನು ದಾನ ಕೊಟ್ಟಿದ್ದರ ಬಗ್ಗೆ ವಕ್ಫ್ ದಾಖಲೆಗಳನ್ನ ತೋರಿಸಬೇಕು ಮತ್ತು ಜಾಗ ರೈತರಿಗೆ ಸೇರಿದ್ದೊ ಅಥವಾ ವಕ್ಫ್‌ಗೆ ಸೇರಿದ್ದೊ ಅಂತ ನ್ಯಾಯಾಲಯ ತೀರ್ಪು ಕೊಡಬೇಕೆ ಹೊರತು ವಕ್ಫ್ ಬೋರ್ಡ್ ಅಲ್ಲಿ, ಮಠದ ನ್ಯಾಯಾಲಯಕ್ಕೆ ಹೋಗುವ ಕಾನೂನು ಇರ್ಬೇಕಾದ್ರೆ ವಕ್ಫ್ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಅವಕಾಶ ಕೊಡದೆ ಸಾಬಿಗಳೆ ತುಂಬಿರುವ ವಕ್ಫ್ ಟ್ರಿಬ್ಯುನಲ್‌ನಲ್ಲೆ ಬಗೆಹರಿಸಬೆಕಾ? ವಕ್ಫ್ ವಿರುದ್ಧ ನ್ಯಾಯಾಲಯಕ್ಕೆ ಹೋಗ್ಲಿ ಬಿಡಿ ನ್ಯಾಯಾಲಯ ತಿರ್ಮಾನಿಸಲಿ
💯%✅
ಇನ್ಯಾವುದೋ ವಿತಂಡವಾದಿ ಅಲ್ಪ ವಿಧ್ಯೆ ಮಹಾಗರ್ವಿ ಈ ಲೇಖನ ಬರೆದಿದ್ದಾನೆ, ಮಠಕ್ಕೆ ದಾನ ಕೊಟ್ಟಿರುವ ದಾಖಲೆಗಳಿವೆ ಹಾಗೆ ಜಾಗ ಮಠದ್ದೊ ಜನರದ್ದೊ ಅಂತ ತಿರ್ಮಾನಿಸಲು ಕೋರ್ಟ್ ಇದೆ ಹಾಗೆಯೇ ವಕ್ಫ್‌ಗೆ ಭೂಮಿಯನ್ನು ದಾನ ಕೊಟ್ಟಿದ್ದರ ಬಗ್ಗೆ ವಕ್ಫ್ ದಾಖಲೆಗಳನ್ನ ತೋರಿಸಬೇಕು ಮತ್ತು ಜಾಗ ರೈತರಿಗೆ ಸೇರಿದ್ದೊ ಅಥವಾ ವಕ್ಫ್‌ಗೆ ಸೇರಿದ್ದೊ ಅಂತ ನ್ಯಾಯಾಲಯ ತೀರ್ಪು ಕೊಡಬೇಕೆ ಹೊರತು ವಕ್ಫ್ ಬೋರ್ಡ್ ಅಲ್ಲಿ, ಮಠದ ನ್ಯಾಯಾಲಯಕ್ಕೆ ಹೋಗುವ ಕಾನೂನು ಇರ್ಬೇಕಾದ್ರೆ ವಕ್ಫ್ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಅವಕಾಶ ಕೊಡದೆ ಸಾಬಿಗಳೆ ತುಂಬಿರುವ ವಕ್ಫ್ ಟ್ರಿಬ್ಯುನಲ್‌ನಲ್ಲೆ ಬಗೆಹರಿಸಬೆಕಾ? ವಕ್ಫ್ ವಿರುದ್ಧ ನ್ಯಾಯಾಲಯಕ್ಕೆ ಹೋಗ್ಲಿ ಬಿಡಿ ನ್ಯಾಯಾಲಯ ತಿರ್ಮಾನಿಸಲಿ. ವಕ್ಫ್ ವಿರುದ್ಧ ನ್ಯಾಯಾಲಯಕ್ಕೆ ಹೋಗದಂತೆ ತಡೆಯುವುದು ರೈಟ್ ಟು ಜಸ್ಟಿಸ್ ಮೂಲಭೂತ ಹಕ್ಕುಗಳನ್ನ ಕಸಿದಂತೆ