- ಕಾರು ಜಖಂ, ಪೊಲೀಸರ ರಕ್ಷಣೆಯಲ್ಲಿ ತೆರಳಿದ ಸಿಮ್ಸ್ ಡೀನ್
- ಹೊರಗುತ್ತಿಗೆ ನೌಕರರು ಸಂಬಳ ಕೇಳಲು ಹೋದಾಗ ನಿಂದನೆ
ಡಾ. ಬಿ ಆರ್ ಅಂಬೇಡ್ಕರ್ ನಿಂದನೆ ಮಾಡಿದ್ದಾರೆಂಬ ಆರೋಪದ ಮೇಲೆ ಚಾಮರಾಜನಗರ ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಮ್ಸ್)ಯ ಡೀನ್ ವಿರುದ್ಧ ಪ್ರತಿಭಟನೆ ನಡೆದಿದ್ದು, ಈ ವೇಳೆ ಡೀನ್ ಕಾರು ಜಖಂಗೊಂಡಿದೆ.
ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಸಂಬಳ ಕೇಳಲು ಹೋಗಿದ್ದ ವೇಳೆ ಡೀನ್ ಸಂಜೀವ್ ರೆಡ್ಡಿ ಅವರು ಅಂಬೇಡ್ಕರ್‌ಗೆ ನಿಂದನೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಡಾ. ಸಂಜೀವ್ ರೆಡ್ಡಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರ ಆಕ್ರೋಶಕ್ಕೆ ಡೀನ್ ಸಂಜೀವ್ ರೆಡ್ಡಿ ಕಾರಿನ ಗಾಜು ಪುಡಿಪುಡಿಯಾಗಿದೆ. ಡೀನ್ ಮುಖಕ್ಕೆ ಮಸಿ ಬಳಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಬೊಮ್ಮಾಯಿ ಮಾಮನ ದುರಹಂಕಾರ: ನೋವು ತೋಡಿಕೊಂಡ ಪವನ್ ಕುಮಾರ