ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್ ಸೋಮು ತಾಳಿಕೋಟಿ ಹತ್ಯೆಯಾಗಿರುವ ಘಟನೆ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಪಟ್ಟಣ ಗ್ರಾಮದ ಕುಖ್ಯಾತ ರೌಡಿಶೀಟರ್ ಸೋಮು ತಾಳಿಕೋಟಿ(40) ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಕೊಲೆ ಮಾಡಿದೆ. ನಂತರ ದಾಳಿಕೋರರು ಅವನ ಶವವನ್ನು ಆಳಂದ ರಸ್ತೆಯ ರೈಲ್ವೆ ಹಳಿಗಳ ಬಳಿ ಎಸೆದು ಹೋಗಿದ್ದಾರೆ.
“ರೌಡಿ ಶೀಟರ್ ಸೋಮು ತಾಳಿಕೋಟಿ ಹಲವು ತಿಂಗಳ ಹಿಂದೆ ಪಟ್ಟಣ ಗ್ರಾಮದ ಡಾಬಾ ಮಾಲೀಕರೊಂದಿಗೆ ಜಗಳವಾಡಿದ್ದ. ಆ ಘಟನೆಯ ಸಮಯದಲ್ಲಿ, ಅವನು ಮತ್ತು ಅವನ ಸಹಚರರು ಡಾಬಾ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿಂದಿನ ದ್ವೇಷವು ರೌಡಿಶೀಟರ್ ಸೋಮು ಹತ್ಯೆಗೆ ಕಾರಣವಾಗಿರಬಹುದು” ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರವಾರ | ನೌಕಾನೆಲೆ ಬಳಿ ಜಿಪಿಎಸ್ ಟ್ಯಾಗ್ ಮಾಡಿದ ರಣಹದ್ದು ಪತ್ತೆ!
ಕಲಬುರಗಿ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.