ಬಿಷ್ಣೋಯ್ ಹೆಸರು ಇರುವ ಹಾಡಿನ ವಿಚಾರದಲ್ಲಿ ಸಲ್ಮಾನ್ ಖಾನ್ ಅವರಿಗೆ ಬಂದ ಜೀವ ಬೆದರಿಕೆ ಪ್ರಕರಣಕ್ಕೆ ತಿರುವು ಲಭಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಮುಂಬರುವ ಸಿನಿಮಾದ ಗೀತರಚನೆಕಾರ, ರಾಯಚೂರು ಯುವಕನನ್ನು ಬಂಧಿಸಲಾಗಿದೆ.
ಬಿಷ್ಣೋಯ್ ಹೆಸರು ಇರುವ ಗೀತ ರಚನೆಕಾರ ಮತ್ತು ನಟ ಸಲ್ಮಾನ್ ಖಾನ್ ಉಳಿಯಬೇಕಾದರೆ ಐದು ಕೋಟಿ ರೂಪಾಯಿ ಪಾವತಿ ಮಾಡುವಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಟ ಮತ್ತು ಗೀತೆರಚನೆಕಾರ 24 ವರ್ಷದ ಸೊಹೈಲ್ ಪಾಷಾಗೆ ಕೊಲೆ ಬೆದರಿಕೆ ಬಂದಿತ್ತು. ಆದರೆ ತನಿಖೆ ನಡೆಸಿದ ಪೊಲೀಸರು ಸೊಹೈಲ್ ಪಾಷಾ ಅವರನ್ನು ಬಂಧಿಸಿದ್ದಾರೆ.
ಗೀತ ರಚನೆಕಾರ ಬಿಷ್ಣೋಯ್ ಹೆಸರು ಉಲ್ಲೇಖಿಸಿರುವ ತನ್ನ ಹಾಡಿಗೆ ಪ್ರಚಾರ ಸಿಗಬೇಕು ಮತ್ತು ತಾನು ಪ್ರಸಿದ್ಧಿ ಪಡೆಯಬೇಕು ಎಂಬ ಕಾರಣಕ್ಕೆ ಮುಂಬೈ ಸಂಚಾರ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಗ್ಯಾಂಗ್‌ನಿಂದ ಮತ್ತೊಮ್ಮೆ ಕೊಲೆ ಬೆದರಿಕೆ
ನವೆಂಬರ್ 7ರಂದು ನಗರದ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಸಂದೇಶ ಬಂದಿದೆ. 5 ಕೋಟಿ ರೂಪಾಯಿ ನೀಡದಿದ್ದರೆ ‘ಮೈನ್ ಸಿಕಂದರ್ ಹನ್’ ಹಾಡಿನಲ್ಲಿರುವ ಸಲ್ಮಾನ್ ಖಾನ್ ಮತ್ತು ಆ ಹಾಡಿನ ಗೀತರಚನೆಕಾರನನ್ನು ಕೊಲೆ ಮಾಡುವುದಾಗಿ ಉಲ್ಲೇಖಿಸಲಾಗಿತ್ತು. ಈ ಸಂದೇಶ ಬಂದ ಕೆಲವೇ ದಿನಗಳಲ್ಲಿ ಪೊಲೀಸರು ರಾಯಚೂರಿನಲ್ಲಿ ಸೊಹೈಲ್ ಪಾಷಾ ಅವರನ್ನು ಬಂಧಿಸಿದ್ದಾರೆ.

“ಇನ್ನು ಮುಂದೆ ಹಾಡು ಬರೆಯಲಾಗದ ಸ್ಥಿತಿಗೆ ಗೀತರಚನೆಕಾರ ತಲುಪುತ್ತಾರೆ. ಸಲ್ಮಾನ್ ಖಾನ್ ಅವರಿಗೆ ಧೈರ್ಯವಿದ್ದರೆ ಅವರನ್ನು ಉಳಿಸಿ” ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಆರಂಭದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಸಂಖ್ಯೆಯ ನೋಂದಾವಣಿ ಪರಿಶೀಲಿಸಿ ವೆಂಕಟೇಶ್ ನಾರಾಯಣ್ ಎಂಬ ವ್ಯಕ್ತಿಯ ವಿಚಾರಣೆ ನಡೆಸಲಾಗಿತ್ತು. ಅದಾದ ಬಳಿಕ ಆ ವ್ಯಕ್ತಿಯ ಬಳಿ ವಾಟ್ಸಾಪ್ ಇಲ್ಲದಿರುವುದು ಗಮನಕ್ಕೆ ಬಂದಿದೆ. ತನಿಖೆ ಮುಂದುವರಿಸಿದ ಪೊಲೀಸರು ಗೀತರಚನೆಕಾರನ ಬಂಧಿಸಿದ್ದಾರೆ.
1998ರ ಕೃಷ್ಣಮೃಗ ಬೇಟೆ ಪ್ರಕರಣದ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬರುತ್ತಿದೆ. ಏಪ್ರಿಲ್‌ನಲ್ಲಿ ಮುಂಬೈನಲ್ಲಿರುವ ಅವರ ಮನೆಯ ಹೊರಗೆ ಗುಂಡು ಹಾರಿಸಲಾಗಿದೆ. ಇದಾದ ಬಳಿಕ ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ.
