ಬಾಗಲಕೋಟೆ | ಕೇವಲ ₹12 ರೂಪಾಯಿಯಲ್ಲಿ ಬಡವರ ಹಸಿವು ನೀಗಿಸುತ್ತಿರುವ ಶಿಕ್ಷಕ ಬಸವರಾಜ್

Date:

Advertisements

ದೇಶದಲ್ಲಿ ತರಕಾರಿ ಸೇರಿದಂತೆ ಎಲ್ಲವೂ ತುಟ್ಟಿಯಾಗಿರುವಾಗ ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬಾಗಲಕೋಟೆಯ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಶಿಕ್ಷಕರೋರ್ವರು ಕೇವಲ 12 ರೂಪಾಯಿಯಲ್ಲಿ ಊಟ ಬಡಿಸುತ್ತಿದ್ದಾರೆ. ಆ ಮೂಲಕ ಸದ್ದಿಲ್ಲದೇ ಸಮಾಜ ಸೇವೆಯೊಂದನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ರಬಕವಿ-ಬನಹಟ್ಟಿಯ ಚಿಕ್ಕಪಡಸಲಗಿಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಬಸವರಾಜ ಜಾಲೋಜಿಯವರೇ ಈ ಕಾರ್ಯದಲ್ಲಿ ತೊಡಗಿರುವವರು. ಕಳೆದ ಮೂರು ವರ್ಷಗಳಿಂದ ಈ ರೀತಿಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿ ಬಿಸಿ ಜುನಕಾ, ಬಿಸಿ ರೊಟ್ಟಿ ನೀಡುವ ಕಾಯಕದಲ್ಲಿ ನಿರತವಾಗಿದ್ದಾರೆ. ಶಿಕ್ಷಕರಾಗಿರುವ ಬಸವರಾಜ ಜಾಲೋಜಿ ಯಾವುದೇ ಅಪೇಕ್ಷೆಯಿಲ್ಲದೆ, ಮತ್ತೊಬ್ಬರ ಸಹಾಯ- ಸಹಕಾರವಿಲ್ಲದೆ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿರುದ್ದೇವೆ ಎಂದು ತಿಳಿಸಿದರು.

Advertisements

12 ರೂಪಾಯಿಗೆ ಟಿ-ಕಾಫಿ ಸಿಗದ ಈ ಕಾಲದಲ್ಲಿ ಅಮ್ಮ ಫೌಂಡೇಶನ್‌ ಎಂಬ ಸಂಸ್ಥೆಯ ಮೂಲಕ ಬನಹಟ್ಟಿಯ ಮಂಗಳವಾರ ಪೇಟೆಯ ಈಶ್ವರಲಿಂಗ ಮೈದಾನ ಹತ್ತಿರವಿರುವ ಊಟದ ಮನೆಯಲ್ಲಿ ಕೇವಲ 12 ರೂ.ಗಳಲ್ಲಿ ಬಡವರ, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

WhatsApp Image 2024 11 13 at 1.51.36 PM

ಪ್ರಸ್ತುತ ದಿನಂಪ್ರತಿ 120 ರಿಂದ 150 ಜನರು ಆಹಾರ ಸೇವಿಸಲು ಬರುತ್ತಾರೆ. 2 ರೊಟ್ಟಿ, ಜುನುಕದೊಂದಿಗೆ ಉಳ್ಳಾಗಡ್ಡಿ, ಸೌತೆಕಾಯಿ ನೀಡುವ ಇವರು ಈ ಭಾಗದ ಬಡವರಿಗೆ ಭಾಗ್ಯದಾತರಾಗಿದ್ದಾರೆ.

ದಿನಂಪ್ರತಿ ಕೂಲಿ ಕಾರ್ಮಿಕರಿಗೆ, ಚಿಕ್ಕ ವೇತನ ದೊರಕುವ ಸಿಬ್ಬಂದಿಗೆ, ನಿರಾಶ್ರಿತರಿಗೆ ಈ ಊಟದ ಮನೆ ಸಂಜೀವಿನಿಯಾಗಿದೆ. ಇಂದಿನ ದಿನಮಾನದಲ್ಲಿ ಕೇವಲ 12 ರೂ.ಗೆ ದಿನಂಪ್ರತಿ 2 ರೊಟ್ಟಿ ಜತೆಗೆ ಸಾಕಾಗುವಷ್ಟು ಜುನಕಾ ಒದಗಿಸುತ್ತಿರುವುದು ವಿಶೇಷ.

ಈ ದಿನ.ಕಾಮ್ ದೊಂದಿಗೆ ಮಾತನಾಡಿದ ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಿಕ್ಷಕ ಬಸವರಾಜ ಜಾಲೋಜಿ, “ಬಡವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ 3 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇನೆ .12ರೂ.ಗೆ ರೊಟ್ಟಿ ಊಟ ನೀಡಲಾಗುತ್ತಿದೆ. ಎಲ್ಲಿಯವರೆಗೂ ಆ ದೇವರು ಶಕ್ತಿ ನೀಡುತ್ತಾನೋ, ಅಲ್ಲಿಯವರೆಗೂ ಈ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದಿದ್ದಾರೆ.

WhatsApp Image 2024 11 13 at 1.51.35 PM 1

ಕಳೆದೆರಡು ವರ್ಷಗಳಿಂದ ಇಲ್ಲಿಯೇ ನಿತ್ಯ ಊಟ ಮಾಡುತ್ತೇನೆ. ನಿತ್ಯ 80 ರಿಂದ 100 ರೂ. ಸಂಪಾದಿಸುತ್ತೇನೆ. ಕಡಿಮೆ ದರದಲ್ಲಿ ನಿತ್ಯ ಊಟ ದೊರಕುತ್ತಿರುವುದು ನನ್ನ ಪುಣ್ಯ ಎನ್ನುತ್ತಾರೆ ಬಸಪ್ಪ ಪೂಜಾರಿ.

ವೇತನ ಅಷ್ಟಕ್ಕಷ್ಟೇ ಇದ್ದರೂ ಬಡವರಿಗೆ ಊಟ ಒದಗಿಸುವದರಲ್ಲಿ ತೃಪ್ತಿ ಇದೆ. ನಿರಂತರ ಸೇವೆಯಲ್ಲಿ ನೆಮ್ಮದಿಯಿದೆ ಎನ್ನುತ್ತಾರೆ ಅಡುಗೆ ತಯಾರಕ ವಾಸಂತಿ ಮಠಪತಿ.

ಶಿಕ್ಷಕ ಬಸವರಾಜ ಜಾಲೋಜಿಯವರ ಈ ಸಮಾಜ ಸೇವೆ ಹೀಗೆಯೇ ಮುಂದುವರಿಯಲಿ ಎಂಬುದು ಊಟ ಸವಿಯುತ್ತಿರುವ ಬಡವರ ಹಾರೈಕೆ.

ರಮೇಶ್ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
+ posts

ವಿಜಯಪುರ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X