ಮೀಸಲಾತಿ ಎಂದರೆ ಬಡತನ, ಹಸಿವು ದೂರ ಮಾಡುವುದಲ್ಲ. ಮೀಸಲಾತಿ ಎಂದರೆ ಸಾಮಾಜಿಕ ಪ್ರಾತಿನಿಧ್ಯವಾಗಿದೆ. ಒಕ್ಕೂಟದಲ್ಲಿ ಮೀಸಲಾತಿ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಸತ್ಯ ಶೋಧಕ ಸಂಘದ ರಾಜ್ಯ ಘಟಕ ಅಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಬಸವ ಭವನದಲ್ಲಿ ಸತ್ಯ ಶೋಧಕ ಸಂಘದ ಆಶ್ರಯದಲ್ಲಿ ಛತ್ರಪತಿ ಶಾಹೂ ಮಹಾರಾಜ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ‘ಮೀಸಲಾತಿ ಅಂದರೆ ಸಾಮಾಜಿಕ ಪ್ರಾತಿನಿಧ್ಯ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಮೊಟ್ಟಮೊದಲು 102 ವರ್ಷಗಳ ಹಿಂದೆ ಛತ್ರಪತಿ ಶಾಹೂ ಮಹಾರಾಜರು ಮೀಸಲಾತಿ ಕಲ್ಪಿಸುವುದರ ಜೊತೆಗೆ, ಶೂದ್ರರ ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್ ವ್ಯವಸ್ಥೆ ಕೂಡ ಮಾಡಿದ್ದರು. ಶಾಹೂ ಮಹಾರಾಜರ ಮಿಸಲಾತಿಯ ಕನಸನ್ನು ಅಂಬೇಡ್ಕರ್ ದೇಶದ ಎಲ್ಲ ಹಿಂದುಳಿದ ಜನಾಂಗಕ್ಕೆ ಹಕ್ಕಾಗಿ ನೀಡುವ ಮೂಲಕ ನನಸು ಮಾಡಿದರು. ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಬರುವ ಡಿಸೆಂಬರ್‌ನಲ್ಲಿ ಬಾಗಲಕೋಟೆಯಲ್ಲಿ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಂಡ್ಯ | ಬೆಟ್ಟಿಂಗ್ ದಂಧೆಯ ನಿಯಂತ್ರಣಕ್ಕೆ ನಿರ್ದಿಷ್ಟ ಕಾಯ್ದೆ ಜಾರಿಗೆ ಬಿ ಟಿ ವಿಶ್ವನಾಥ್ ಆಗ್ರಹ
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೆಳಗಲಿ, ಸುಶೀಲಕುಮಾರ ಗಿರೀಶ ಕಡಕೋಳ, ಡಾ.ವಿನಯಕುಮಾರ ಬಬಲೇಶ್ವರ, ಪ್ರಶಾಂತ ಜಂಬಗಿ, ದಶರಥ ಮಾದರ, ವಿಜಯ ಹಲಗಿಮನಿ, ಪೀರ ಕೊಡತಿ, ಶರಣಪ್ಪ ಆರ್ಯವಗೋಳ ಇದ್ದರು.