ಎದುರಿಗೆ ಬಂದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಸ್ಸು ನುಗ್ಗಿದ ಘಟನೆ ದಾವಣಗೆರೆ ನಗರದ ಹೊರವಲಯದಲ್ಲಿ ನಡೆದಿದೆ.
ದಾವಣಗೆರೆ ನಗರದ ಹೊರವಲಯದಲ್ಲಿ ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಖಾಸಗಿ ಬಸ್ಸೊಂದು ಚಲಿಸುತ್ತಿದ್ದ ವೇಳೆ ಅಚಾನಕ್ಕಾಗಿ ಎದುರಾದ ಕಾರನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ರಸ್ತೆ ಬಿಟ್ಟು ಬದಿಯಲ್ಲಿನ ಹಳ್ಳದ ಕಡೆಗೆ ನುಗ್ಗಿದೆ. ಅಷ್ಟರಲ್ಲಿ ಎಚ್ಚೆತ್ತ ಚಾಲಕ ಬ್ರೇಕ್ ಹಾಕಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ.

ಎದುರಿಗೆ ಬಂದ ಕಾರು, ಬೈಕನ್ನು ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ, ಬಸ್ನಲ್ಲಿ 35-40 ಪ್ರಯಾಣಿಕರಿದ್ದರು. ಯಾರಿಗೂ ತೀವ್ರ ಸ್ವರೂಪದ ಗಾಯಗಳಾಗಿಲ್ಲ. ಅಷ್ಟಕ್ಕೆ ನಿಯಂತ್ರಿಸಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಕೇವಲ ಹದಿನೈದು ಇಪ್ಪತ್ತು ಅಡಿಗಳಷ್ಟು ಮುಂದೆ ಸಾಗಿದ್ದರೆ ಹಳ್ಳದ ಆಳದ ಕಮರಿಗೆ ಬಿದ್ದು ಸಾವುನೋವುಗಳು ಹೆಚ್ಚುತ್ತಿದ್ದವು ಎಂದು ಅಲ್ಲೇ ಹತ್ತಿರದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಧಾರವಾಡ | ನೆರೆಮನೆಗೆ ಆಟವಾಡಲು ಹೋದ ಮಗ, ಬಂದಿದ್ದು ಶವವಾಗಿ : ಹೂತಿದ್ದ ಶವ ಹೊರ ತೆಗೆಸಿದ್ದು ಯಾಕೆ?
ಬಸ್ ನ ಈ ಅವಘಡದಿಂದಾಗಿ ಜಗಳೂರು ರಸ್ತೆಯಲ್ಲಿ ಕೆಲಕಾಲ ರಸ್ತೆ ಓಡಾಟ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

