ಶ್ರೀಗಂಧ ಮರದ ತುಂಡುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಇಬ್ಬರು ಆಸಾಮಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬುರುಡುಗುಂಟೆ ಗ್ರಾಮದ ಮೌಲಾ ಬಿನ್ ಇಮಾಮ್(35), ಬಾಬಾಜಾನ್ ಫಕ್ರುದ್ದೀನ್(26) ಬಂಧಿತ ಆರೋಪಿಗಳು.

ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರಡಗುಂಟೆ ಗ್ರಾಮದ ವಾಸಿ ಬುಡು ಸಾಬಿ ಅವರ ಜಮೀನಿನ ಬಂಡೆಯ ಬಳಿ ಶ್ರೀಗಂಧದ ಮರದ ತುಂಡುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಾನೂನುಬಾಹಿರವಾಗಿ ದಾಸ್ತಾನು ಮಾಡಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪಿ.ಎಸ್.ಐ ಎಂ.ಶಿವಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಗುಂಡ ಅಲಿಯಾಸ್ ವೆಂಕಟರವಣ ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಪರಿಹಾರ ವಿಳಂಬ; ಎಸಿ ಕಚೇರಿಯ ಪೀಠೋಪಕರಣಗಳನ್ನೇ ಹೊತ್ತೊಯ್ದ ಸಂತ್ರಸ್ತರು
ಆರೋಪಿಗಳಿಂದ ಸುಮಾರು15 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿರುವ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.