ದೆಹಲಿ ಸಾರಿಗೆ, ಪರಿಸರ ಸಚಿವ ಮತ್ತು ಎಎಪಿ ನಾಯಕ ಕೈಲಾಶ್ ಗಹ್ಲೋಟ್ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಎಎಪಿಗೆ ರಾಜೀನಾಮೆ ನೀಡುವ ಬಗ್ಗೆ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಹಾಗೆಯೇ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಅವರು, ಮುಖ್ಯಮಂತ್ರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
“ಶೀಷ್ಮಾಮಹಲ್‌ನಂತಹ ಹಲವು ಮುಜುಗರದ ಮತ್ತು ವಿಚಿತ್ರವಾದ ವಿವಾದಗಳಿವೆ. ಇವೆಲ್ಲವೂ ಇಂದಿಗೂ ನಾವು ಆಮ್ ಆದ್ಮಿ ಪಕ್ಷವನ್ನು ನಂಬುತ್ತಿದ್ದೇವೆ ಎಂಬ ಅನುಮಾನವನ್ನು ಸೃಷ್ಟಿಸಿದೆ” ಎಂದು ಕೇಜ್ರಿವಾಲ್‌ಗೆ ಸಲ್ಲಿಸಿದ ಪತ್ರದಲ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಬಕಾರಿ ಸಚಿವರ ರಾಜೀನಾಮೆ ಪಡೆದು, ತನಿಖೆಗೆ ಆದೇಶಿಸಿ: ಸಿಎಂಗೆ ಮುಖ್ಯಮಂತ್ರಿ ಚಂದ್ರು ಪತ್ರ
“ದೆಹಲಿ ಸರ್ಕಾರವು ತನ್ನ ಬಹುಪಾಲು ಸಮಯವನ್ನು ಕೇಂದ್ರದ ವಿರುದ್ಧದ ಹೋರಾಟದಲ್ಲೇ ತೊಡಗಿಸಿರುವಾಗ ದೆಹಲಿಯ ನಿಜವಾದ ಪ್ರಗತಿ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿಸಿದೆ” ಎಂದಿದ್ದಾರೆ.
“ಹೀಗಾಗಿ ಎಎಪಿಯಿಂದ ಹಿಂದೆ ಸರಿಯುವುದನ್ನು ಬಿಟ್ಟು ನನಗೆ ಯಾವುದೇ ಆಯ್ಕೆಯಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದ್ದರಿಂದ ನಾನು ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಅದಾದ ಬಳಿಕ ದೆಹಲಿ ಸಾರಿಗೆ, ಪರಿಸರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Delhi Minister and AAP leader Kailash Gahlot resign from primary membership of Aam Aadmi Party; writes to party national convenor Arvind Kejriwal.
— ANI (@ANI) November 17, 2024
The letter reads, "There are many embarrassing and awkward controversies like the 'Sheeshmahal', which are now making everyone doubt… https://t.co/NVhTjXl1c2 pic.twitter.com/rOJnVlcX2q
