ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೆಳಗುಂಬದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗುರುಪ್ರಸಾದ್ ಮೈಲನಹಳ್ಳಿ ಕೊಪ್ಪಲು ಹಾಗೂ ಉಪಾಧ್ಯಕ್ಷರಾಗಿ ಚೇತನ ಬಿ ಜಿ ಹುಣಸೆಕಟ್ಟೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶುಭಕೋರಿ ಅಭಿನಂದಿಸಿದರು.
ಇದನ್ನೂ ಓದಿದ್ದೀರಾ? ಹಾಸನ l ನ.20ರಂದು ಜಿಲ್ಲಾ ಮಟ್ಟದ ಯುವಜನೋತ್ಸವ
ಈ ಸಂದರ್ಭದಲ್ಲಿ ನಿರ್ದೇಶಕರಾದ ಪುಟ್ಟು ಮಲ್ಲೇಗೌಡ, ಸಿದ್ದರಾಜು ಎ ಆರ್, ಕಾಂತರಾಜು, ರವೀಂದ್ರನಾಥ, ಕೆಂಪೇಗೌಡ, ನಾಗರಾಜು, ಮಲ್ಲಿಕಾರ್ಜುನಯ್ಯ, ಶೋಭಾ ಹಾಗೂ ಮುಖಂಡರಾದ ಜಯಣ್ಣ, ತೋಂಟದಾರ್ಯ, ಶಿವಕುಮಾರ ಸ್ವಾಮಿ, ಚರಣ್ ಪನ್ನಸಮುದ್ರ, ಮಹೇಶ್ ಕುಮಾರ್, ಎಚ್ ಟಿ ಶಿವಮೂರ್ತಿ, ಮಂಜುನಾಥ್ ಸಂಕೋಡನಹಳ್ಳಿ, ಜಯಕುಮಾರ್ ಅರಸೀಕೆರೆ, ಮಂಜು, ಜಗದೀಶ್ ಅಣ್ಣೇನಳ್ಳಿ ಸೇರಿದಂತೆ ಇತರರು ಇದ್ದರು.
