ಹುಬ್ಬಳ್ಳಿಯ ಎಸ್.ಎಂ.ಕೃಷ್ಣನಗರದಲ್ಲಿ ಕೌಟುಂಬಿಕ ಜಗಳ ವಿಕೋಪಕ್ಕೆ ತಿರುಗಿ ಮೈದುನನಿಂದ ಅತ್ತಿಗೆ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
38ವರ್ಷದ ಸಾಜೀದಾ ನಾಲಬಂದ ಹತ್ಯೆಯಾದ ಮಹಿಳೆಯಾಗಿದ್ದು, ತನ್ನ ಪತಿ ಮಹ್ಮದ್ ಹನೀಫ್ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈದುನ ನಾಸೀರ್ ನಾಲಬಂದ ಕೊಲೆಗೈದ ಆರೋಪಿಯಾಗಿದ್ದು, ಮನೆಯ ಜಗಳಕ್ಕೆ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡಿದ್ದ ಸಾಜೀದಾ ಅವರನ್ನು ಕಿಮ್ಸ್ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಘಟನೆ ಕುರಿತು ಮಾಹಿತಿಯ ಮೇರೆಗೆ ಡಿಸಿಪಿ ಮಹಾನಿಂಗ ನಂದಗಾವಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.