ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ 2024ನೇ ಸಾಲಿನ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಮತ್ತು ಸಂಘದ ಗೌರವ ಪ್ರಶಸ್ತಿಗೆ ಎಂಟು ಜನರು ಆಯ್ಕೆಯಾಗಿದ್ದಾರೆ.
ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ವೃತ್ತಿಪರ ಪತ್ರಕರ್ತರನ್ನು ಗುರುತಿಸಿ ಗೌರವಿಸಲು ಸಾಮಾಜಿಕ ನ್ಯಾಯಕ್ಕಾಗಿ, ದಲಿತರ ಸ್ವಾಭಿಮಾನ, ಹಕ್ಕುಗಳಿಗಾಗಿ ದುಡಿದ, ಹೋರಾಡಿದ ಮಹನೀಯರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮಾಜಿ ಸಚಿವ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಪ್ರೋ.ಬಿ.ಕೃಷ್ಣಪ್ಪ ಅವರ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ‘ಪ್ರೊ ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ’ಯನ್ನು ದಲಿತರು, ಶೋಷಿತರ ಪರ ಸಾಮಾಜಿಕ ಚಳವಳಿಯಲ್ಲಿ ಅವಿರತವಾಗಿ ದುಡಿಯುತ್ತಿರುವ ಚಳವಳಿಯ ಸಂಗಾತಿಗಳನ್ನು ಗುರುತಿಸಿ ಪ್ರದಾನ ಮಾಡಲಾಗುತ್ತಿದೆ.
ಪ್ರಧಾನ ದತ್ತಿ ಪ್ರಶಸ್ತಿಗಳೊಂದಿಗೆ ಪತ್ರಿಕೋದ್ಯಮದಲ್ಲಿ ನಾಲ್ವರು ಹಿರಿಯ ಸಾಧಕ ದಲಿತ ಸಮುದಾಯದ ಸಂಪಾದಕರುಗಳಿಗೆ ಸಂಘದ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ನವೆಂಬರ್ 29-2024ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯ ಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?
ದತ್ತಿ ಪ್ರಶಸ್ತಿ ಪುರಸ್ಕೃತರು
1 ಡಾ. ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ – ಜಿ ಎನ್ ಮೋಹನ್, ಹಿರಿಯ ಪತ್ರಕರ್ತ ಬೆಂಗಳೂರು
2 ಬಿ. ರಾಚಯ್ಯ ದತ್ತಿ ಪ್ರಶಸ್ತಿ- ಬಿ.ಎಂ ಹನೀಫ್, ಹಿರಿಯ ಪತ್ರಕರ್ತರು ಬೆಂಗಳೂರು
3 ಪ್ರೋ.ಬಿ. ಕೃಷ್ಣಪ್ಪ ದತ್ತಿ ಪ್ರಶಸ್ತಿ – ಮಾವಳ್ಳಿ ಶಂಕರ್ ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ
4 ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿ – ಮಂಜುಳಾ ಹುಲಿಕುಂಟೆ, ಪತ್ರಕರ್ತೆ ಬೆಂಗಳೂರು

ಗೌರವ ಪ್ರಶಸ್ತಿ ಪುರಸ್ಕೃತರು
1 ಕೆ. ಏಕಾಂತಪ್ಪ- ಸಂಪಾದಕರು, ಶಿವಮೊಗ್ಗ ಮಲ್ನಾಡ್‌ವಾಣಿ ಕನ್ನಡ ದಿನಪತ್ರಿಕೆ, ದಾವಣಗೆರೆ
2 ಸೊಗಡು ವೆಂಕಟೇಶ್ – ಸಂಪಾದಕರು, ‘ವಿಶಾಲವಾರ್ತೆ’ ಕನ್ನಡ ದಿನಪತ್ರಿಕೆ, ತುಮಕೂರು
3 ಮಂಜುಳಾ ಕಿರುಗಾವಲು – ಸಂಪಾದಕರು, ‘ಜನೋದಯ’ ಕನ್ನಡ ದಿನಪತ್ರಿಕೆ, ಮಂಡ್ಯ
4 ಸುರೇಶ್ ಸಿಂಧ್ಯ – ಹೈದ್ರಾಬಾದ್ ಕರ್ನಾಟಕ ಮುಂಜಾವು’ ಕನ್ನಡ ದಿನಪತ್ರಿಕೆ, ಗುಲ್ಬರ್ಗಾ
