ಹೊಸಕೋಟೆ | ಕನಕರು ಸಮಾಜದ ವೈರುಧ್ಯಗಳಿಗೆ ಸಮಾನತೆ ಒದಗಿಸಿದವರು : ಡಿಎಸ್‌ಎಸ್ ಮಾಸ್ಟರ್

Date:

Advertisements

ಕನಕರು ನಂಬಿಕೆಯಲ್ಲಿ ವಿಶ್ವಾಸ ಇಟ್ಟವರು. ಸಮಾಜದ ಹಲವು ವೈರುಧ್ಯಗಳಿಗೆ ಸಮಾನತೆಯ ಹಕ್ಕುಗಳನ್ನು ಒದಗಿಸಿದವರು. ದ್ವೇಷ ಇರುವಲ್ಲಿ ಪ್ರೀತಿಯ ಜೇನ ಹನಿಸಿದವರು ಎಂದು ನಿವೃತ್ತ ಶಿಕ್ಷಕ ಡಿಎಸ್‌ಎಸ್‌ ಮಾಸ್ಟರ್‌ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅತ್ತಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮಾತನಾಡಿದರು.

ಭಕ್ತಿ ಎನ್ನುವುದು ಆಡಂಬರವಾಗಬಾರದು. ದೇವಾಲಯಗಳು ವ್ಯಾಪಾರ ಕೇಂದ್ರಗಳಾಗಬಾರದು. ಪುರೋಹಿತರು ಜನಸಾಮಾನ್ಯರ ವಿರೋಧಿಗಳಾಗಬಾರದು. ದೇವರು ಧರ್ಮದ ಹೆಸರಿನಲ್ಲಿ ಕೇಡನ್ನು ಬಯಸುವ ಸಂಗತಿಗಳಿಂದ ಮುಕ್ತವಾದ ಮಾನವ ಸಮಾಜ ರೂಪಗೊಳ್ಳಬೇಕಾದ ಸಂಗತಿಗಳತ್ತ ಕನಕದಾಸರು ನಮ್ಮ ಗಮನ ಸೆಳೆಯುತ್ತಾರೆ. ಇಂಥ ಕನಕದಾಸರು ಪುರಾಣಗಳು ನಂಬಿಸಿದ ಹಲವು ಸಂಗತಿಗಳತ್ತ ತಮ್ಮ ಗಮನ ಹರಿಸುತ್ತಾರೆ. ಜನಕ ಹಿತದವನೆಂದು ನಂಬಬಹುದೇ, ಸಹೋದರನು ಮಮತೆ ಉಳ್ಳವನೆಂದು ನಂಬಬಹುದೇ, ಅದಿರಲಿ ದೇಹಾನುಬಂಧಗಳೇ ತನಗೆ ಬಂಧುಗಳೆಂದು ಮನದಿ ನಿಚ್ಚಳವಾಗಿ ನಂಬಬಹುದೇ, ಆರು ಹಿತದವರೆಂದು ನಂಬುವುದು? ಈ ಪ್ರಶ್ನೆಗಳನ್ನ ನಾವು ವರ್ತಮಾನದಲ್ಲೂ ಕೇಳಿಕೊಳ್ಳಬಹುದು ಎಂದು ಹೇಳಿದರು.

Advertisements
kanaka jayanti 1

ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ ಮಾತನಾಡಿ, ಪ್ರಭುತ್ವ, ಪ್ರಬಲ ವರ್ಗ, ಜಾತಿಗಳು ಹೇಗೆ ತಳ ಸಮುದಾಯಗಳ ಅಸ್ಮಿತೆಯನ್ನು ಕಲಕುತ್ತಿದ್ದವು ಎನ್ನುವ ಅರ್ಥದಲ್ಲಿ ಕನಕರು ಅಂದು ಮಾತನಾಡಿದ್ದು ಅಪಾರವಿದೆ. ಅವರ ರಾಮಧಾನ್ಯ ಚರಿತೆ ಒಂದೇ ಸಾಕು ಎಲ್ಲ ಕಾಲಮಾನಕ್ಕೂ ಕನ್ನಡಿ ಹಿಡಿಯಲು. ಅದರ ಸಣ್ಣ ಸಣ್ಣ ಬಿಂಬಗಳಂತೆ ಪ್ರಖರ ವೈಚಾರಿಕ ಚಿಂತನೆಯನ್ನು ಕನಕದಾಸರು ತಮ್ಮ ಹಲವು ಕೀರ್ತನೆಗಳಲ್ಲಿ, ಕೃತಿಗಳ ಒಡಲಲ್ಲಿ ಸಾರಿದ್ದಾರೆ ಎಂದು ತಿಳಿಸಿದರು.

ಅತ್ತೆ ಸೊಸೆಯಾಗುವ, ಸೊಸೆ ಅತ್ತೆಯಾಗುವ, ಪುತ್ರ ಪಿತನಾಗುವ, ಪಿತ ಪುತ್ರನಾಗುವ ಇಂತಹ ಕೌಟುಂಬಿಕ ಯಾಜಮಾನ್ಯ ವ್ಯವಸ್ಥೆಯ ನಡುವೆ ತಮ್ಮ ಅನ್ನ ವಸ್ತ್ರಗಳಿಂದ ಚೆನ್ನಾಗಿ ಬಾಳುವವರನ್ನೂ ಭಿನ್ನ ತಂತ್ರಗಳನ್ನು ಮಾಡಿ ಕೆಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಯ ಎಸ್ ಡಿ ಎಮ್ ಸಿ ಸದಸ್ಯ ನಾರಾಯಣಗೌಡ ಮಾತನಾಡಿ, ಕನಕರು ದೇವರಿಗೆ, ತಮ್ಮ ಆದಿಕೇಶವನಿಗೆ, ಉಡುಪಿಯ ಶ್ರೀಕೃಷ್ಣನಿಗೆ ಎಷ್ಟು ಪ್ರಿಯರೋ ಗೊತ್ತಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೂ ಹತ್ತಿರವಾಗಿ ಜೀವಪರವಾಗುವ, ಮನುಷ್ಯ ಸಮಾಜವನ್ನು ಜಾಗೃತಿಯಲ್ಲಿರಿಸುವ ಕಾರ್ಯವನ್ನು ಮಾಡಿದ್ದಾರೆ. ಅವರು ಸಾರಿದ ಬಹುದೊಡ್ಡ ಮಾತೃ ವಾತ್ಸಲ್ಯದ ಸಾದೃಶ್ಯ ತತ್ವವೆಂದರೆ- ಜಲವೇ ಸಕಲ ಕುಲಕ್ಕೂ ತಾಯಿ ಎಂಬುದು. ಜಲದಲ್ಲಿ ಕುಲವನರಸಬಾರದೆಂಬುದು. ಇಂತಹ ಸಮಾನತೆಯ ನಡೆ, ಆಶಯಗಳೇ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಉಸಿರ ತಂತಿಗಳಂತಿವೆ. ನಮ್ಮ ನುಡಿಯ ಇಂತಹ ಗುಡಿಗಾರರು ಇರುವುದರಿಂದಲೇ ಸಮಾಜ ಒಂದಿಷ್ಟು ಹಸನಾಗಿದೆ. ತಲೆಮಾರುಗಳನ್ನು ಸದಾ ಬಾಳಿಸುವ, ಎಲ್ಲರಿಗೂ ಸಮಬಾಳು ಸಮಪಾಲು ಎಂಬುವ ತತ್ವದ ಕ್ರಿಯೆಯನ್ನಿಡಿದು ಮುನ್ನಡೆಸುವ ಇಂತಹ ಅಂಬಲಿ ಧ್ಯಾನದ ಕನಕರಂತಹ ನಮ್ಮಜ್ಜಂದಿರು ಬೇಕು. ಯುದ್ಧದಾಹಿಯಾಗಿರುವ ಲೋಕದೊಡಲನ್ನು ತಣ್ಣಗಾಗಿರಿಸಲು ಇವರ ನುಡಿಮಮತೆ ಬೇಕು ಎಂದು ಹೇಳಿದರು.

ಇದೇ ವೇಳೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿ : ಚಿಕ್ಕಬಳ್ಳಾಪುರ | ರಾಗಿ, ಜೋಳ ಖರೀದಿ ಕೇಂದ್ರ; ನೋಂದಣಿಗೆ ಡಿ.ಸಿ ಮನವಿ

ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕಿಯರಾದ ವಸಂತ ಎಸ್.ವಿ, ಭವಾನಿ ಎಚ್ ಎನ್, ಸುಧಾಮಣಿ ಡಿ ಎಮ್ ಮತ್ತು ಎಸ್ ಡಿ ಎಂ ಸಿ ಸದಸ್ಯರಾದ ಲಕ್ಶ್ಮೀ ನಾರಾಯಣ, ಪವಿತ್ರ, ಪ್ರೇಮ ಹಾಗೂ ಗ್ರಾಮಸ್ಥರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X