ಮಹಾರಾಷ್ಟ್ರದಲ್ಲಿ ಮತ್ತೆ ಮಹಾಯುತಿ ಎಂದ ಚುನಾವಣೋತ್ತರ ಸಮೀಕ್ಷೆಗಳು

Date:

Advertisements

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಕೊನೆಯಾಗಿದೆ. ಇದಾದ ಬೆನ್ನಲ್ಲೇ ಹಲವು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ. ಕೆಲವು ಸಮೀಕ್ಷಾ ವರದಿ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರವೇ ಮುಂದುವರೆಯಲಿದೆ ಎಂದು ಹೇಳಿದರೆ, ಇನ್ನು ಕೆಲವು ಮಾಧ್ಯಮಗಳ ಸಮೀಕ್ಷೆಗಳು ಮಹಾಯುತಿ ಸರ್ಕಾರಕ್ಕೆ ಮಹಾ ವಿಕಾಸ್ ಅಘಾಡಿ ಪೈಪೋಟಿ ನೀಡಲಿದೆ, ಎಂವಿಎ ಸರ್ಕಾರ ರಚನೆಯಾಗಬಹುದು ಎಂದು ಹೇಳಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 25.75% ಮತ ಹಂಚಿಕೆಯೊಂದಿಗೆ 105 ಸ್ಥಾನಗಳನ್ನು ಗಳಿಸಿತ್ತು. ಶಿವಸೇನೆ 56 ಸ್ಥಾನಗಳನ್ನು (16.41% ಮತ ಹಂಚಿಕೆ), ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಕ್ರಮವಾಗಿ 54 (16.71%) ಮತ್ತು 44 (15.87%) ಸ್ಥಾನಗಳನ್ನು ಪಡೆದುಕೊಂಡಿವೆ. ಇತರೆ ಪಕ್ಷಗಳು 29 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ.

ಇದನ್ನು ಓದಿದ್ದೀರಾ? ಚುನಾವಣೋತ್ತರ ಸಮೀಕ್ಷೆ | ಜಾರ್ಖಂಡ್- ಇಂಡಿಯಾ ಒಕ್ಕೂಟದತ್ತ ಒಲವು

Advertisements

ಅದಾದ ಬಳಿಕ ಕಳೆದ ಐದು ವರ್ಷಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳು ಸಂಭವಿಸಿದೆ. ಐದು ವರ್ಷಗಳಲ್ಲಿ ಮೂರು ಸರ್ಕಾರಗಳನ್ನು ಮಹಾರಾಷ್ಟ್ರ ಕಂಡಿದೆ. ಶಿವಸೇನೆ, ಎನ್‌ಸಿಪಿ ಎರಡೂ ಕೂಡಾ ಇಬ್ಭಾಗವಾಗಿದೆ. ಎರಡು ಪಕ್ಷಗಳು ಶಿವಸೇನೆ ಶಿಂದೆ ಬಣ, ಶಿವಸೇನೆ ಉದ್ದವ್, ಎನ್‌ಸಿಪಿ ಅಜಿತ್ ಪವಾರ್ ಬಣ, ಎನ್‌ಸಿಪಿ ಶರದ್ ಪವಾರ್ ಬಣವಾಗಿ ನಾಲ್ಕು ಪಾಲಾಗಿದೆ, ಪರಸ್ಪರ ಸ್ಪರ್ಧಿಸಿದೆ.

ಚುನಾವಣೋತ್ತರ ಸಮೀಕ್ಷೆಗಳು

ಚಾಣಕ್ಯ: ಎನ್‌ಡಿಎ 152-160, ಎಂವಿಎ 130-138, ಇತರೆ 6-8
ದೈನಿಕ ಭಾಸ್ಕರ: ಎನ್‌ಡಿಎ 125-140, ಎಂವಿಎ 135-150, ಇತರೆ 20-25
ಎಲೆಕ್ಟೊರಲ್ ಎಡ್ಜ್: ಎನ್‌ಡಿಎ 118, ಎಂವಿಎ 150, ಇತರೆ 20
ಲೋಕನೀತಿ ಮರಾಠಿ-ರುದ್ರ: ಎನ್‌ಡಿಎ 128-142, ಎಂವಿಎ 125-140, ಇತರೆ 18-23
ಮ್ಯಾಟ್ರಿಜ್: ಎನ್‌ಡಿಎ 150-170, ಎಂವಿಎ 110-130, ಇತರೆ 8-10
ಪಿ-ಮಾರ್ಕ್: ಎನ್‌ಡಿಎ 137-157, ಎಂವಿಎ 126-146, ಇತರೆ 2-8
ಪೀಪಲ್ಸ್ ಪಲ್ಸ್: ಎನ್‌ಡಿಎ 175-195, ಎಂವಿಎ 85-112, ಇತರೆ 7-12
ಪೋಲ್ ಡೈರಿ: ಎನ್‌ಡಿಎ 122-186, ಎಂವಿಎ 69-121, ಇತರೆ 10-27
ಟೈಮ್ಸ್ ನೌ-ಜೆವಿಸಿ: ಎನ್‌ಡಿಎ 150-167, ಎಂವಿಎ 107-125, ಇತರೆ 13-14

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ: ಗೋಡೆ ಹತ್ತಿ ಆವರಣ ಪ್ರವೇಶಿಸಿದ ಯುವಕ

ಸಂಸತ್ ಭವನದಲ್ಲಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದ್ದು ವ್ಯಕ್ತಿಯೋರ್ವ ಶುಕ್ರವಾರ ಬೆಳಿಗ್ಗೆ ಮರವನ್ನು...

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

Download Eedina App Android / iOS

X