ಬಾಲಕಿಗೆ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 35 ವರ್ಷ ಜೈಲು ಶಿಕ್ಷೆ ವಿಧಿಸಿ ಕಲಬುರಗಿ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೊ) ನ್ಯಾಯಾಲಯ ತೀರ್ಪು ನೀಡಿದೆ.
ಮಹಾರಾಷ್ಟ್ರದ ಠಾಣಾ ಜಿಲ್ಲೆಯ ಭಿವಂಡಿಯ ಶಾಂತಿನಗರ ನಿವಾಸಿ ಬಟ್ಟೆ ವ್ಯಾಪಾರಿ ಮಹ್ಮದ್ ಗೌಸ್ ಮಹಿಮೂದ್ ಶೇಖ್ ಎಂಬಾತನಿಗೆ ಗೆ 35 ವರ್ಷ ಜೈಲು ಹಾಗೂ ₹20 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ಆದೇಶ ನೀಡಿದ್ದಾರೆ. ನೊಂದ ಬಾಲಕಿಗೆ ₹5 ಲಕ್ಷ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವಾಗಿ ಒಂದು ತಿಂಗಳು ಒಳಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದಿಸಿದ್ದಾರೆ.
ಕಲಬುರಗಿ ನಗರದ ಬಡಾವಣೆಯೊಂದರ ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಬಟ್ಟೆ ವ್ಯಾಪಾರಿ ಮಹ್ಮದ್ ಗೌಸ್ ಆಗಾಗ ಭೇಟಿ ಮಾಡುತ್ತಿದ್ದ. ನನ್ನೊಂದಿಗೆ ಬಂದರೆ ನನ್ನ ಹೆಂಡತಿಗೆ ವಿಚ್ಛೇಧನ ನೀಡುತ್ತೇನೆ ಎಂದು ನಂಬಿಸಿ ಮೂರ್ನಾಲ್ಕು ಬಾರಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮುಂದೆ 2023ರ ಅ.16ರಂದು ದೂರವಾಣಿ ಮುಖಾಂತರ ತಮ್ಮೂರಿಗೆ ಬರುವಂತೆ ಹೇಳಿದ್ದಾನೆ. ನಂತರ ಬಾಲಕಿಯನ್ನು ಮನೆಯಲ್ಲಿಟ್ಟು ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕುರಿತು ದೂರು ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮೋದಿ ಪಾಲಿಗೆ ಬಿಸಿ ತುಪ್ಪವಾದ ಅದಾನಿ
ಈ ಕುರಿತು ವಿಚಾರಣೆ ನಡೆಸಿದ ಇನ್ಸ್‍ಪೆಕ್ಟರ್ ಕುಬೇರ್ ರಾಯಮಾನೆ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.