ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು 2025 ಆರಂಭವಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯುತ್ತಿದೆ. ಹಾಲಿ ಚಾಂಪಿಯನ್ ಕೆಕೆಆರ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರು ಮೂರನೇ ಆಟಗಾರನಾಗಿ ಹರಾಜಿಗೆ ಬಂದರು.
ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಆರಂಭದಲ್ಲಿ ಪೈಪೋಟಿ ನಡೆಸಿತು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಬಿಡ್ಡಿಂಗ್ ನಡೆಸಿತು. ನಾಯಕನಿಗಾಗಿ ಎದುರು ನೋಡುತ್ತಿರುವ ಪಂಜಾಬ್ ಮತ್ತು ಡೆಲ್ಲಿ ತಂಡಗಳು ನಡುವೆ ಅಯ್ಯರ್ ಗಾಗಿ ಭಾರಿ ಪ್ರಯತ್ನಗಳು ನಡೆದವು. ಕೊನೆಗೆ ಬಲಗೈ ಆಟಗಾರ ಅಯ್ಯರ್ ದಾಖಲೆಯ ಬರೋಬ್ಬರಿ 26.75 ಕೋಟಿ ರೂ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು.
ಮತ್ತೊಬ್ಬ ಸ್ಫೋಟಕ ಆಟಗಾರ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 27 ಕೋಟಿಗೆ ಮಾರಾಟವಾದರು. ಇದು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಸ್ಟ್ರೇಲಿಯಾದಲ್ಲಿ ಹೊಸ ಇತಿಹಾಸ ಬರೆದ ರಾಹುಲ್ – ಜೈಸ್ವಾಲ್
ಈ ಮೂಲಕ ಅತಿ ಹೆಚ್ಚು ಹಣ ಪಡೆದ ಆಟಗಾರ ಎಂಬ ಐಪಿಎಲ್ ದಾಖಲೆ ಬರೆದರು. ಇದುವರೆಗೆ 24.75 ಕೋಟಿ ರೂ ಪಡೆದಿದ್ದ ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್ ನ ದುಬಾರಿ ಆಟಗಾರನಾಗಿದ್ದರು. ಈ ಬಾರಿಯ ಹರಾಜಿನ ಮೊದಲ ಆಟಗಾರನಾಗಿ ಅರ್ಶದೀಪ್ ಸಿಂಗ್ ಅವರು 18 ಕೋಟಿ ರೂ ಗೆ ಮತ್ತೆ ಪಂಜಾಬ್ ಕಿಂಗ್ಸ್ ಪಾಲಾದರು.
ಸನ್ ರೈಸರ್ಸ್‌ಹೈದರಾಬಾದ್ ನಡೆಸಿದ ಬಿಡ್ಡಿಂಗ್‌ಗೆ ಪಂಜಾಬ್ ಆರ್‌ಎಂಟಿ ಕಾರ್ಡ್ ಖರೀದಿಸಿ ವೇಗಿಯನ್ನು ತಮ್ಮಲ್ಲೇ ಉಳಿಸಿಕೊಂಡಿತು. ಆ ಬಳಿಕ ಮುಂಬಯಿ ಹಾಗೂ ಗುಜರಾತ್ ನಡುವೆ ಪೈಪೋಟಿ ನಡೆಯಿತು. 10 ಕೋಟಿ ಅಧಿಕ ಬೆಲೆಗೆ ಕಗಿಸೋ ಅವರ ಬೆಲೆ ಏರಿಕೆ ಆಯಿತು. ಕೊನೆಯದಾಗಿ 10.75 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡ ರಬಾಡ ಅವರನ್ನು ಖರೀದಿ ಮಾಡಿತು.
ಮತ್ತೊಬ್ಬ ಟೀಂ ಇಂಡಿಯಾ ಆಟಗಾರ ಕೆ ಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿಗೆ ಹರಾಜಿನಲ್ಲಿ ಖರೀದಿಸಿತು.
ಇಂಗ್ಲೆಂಡ್‌ನ ಜಾಸ್ ಬಟ್ಲರ್ ಅವರು ಗುಜರಾತ್ ಟೈಟಾನ್‌ಗೆ 15.75 ಕೋಟಿ ರೂ.ಗೆ ಹರಾಜಾದರು. ಆಸೀಸ್ ಬೌಲರ್ ಮಿಷಲ್ ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್‌ಗೆ 11.75 ಕೋಟಿ ರೂ.ಗೆ ಹರಾಜಾದರು. ಭಾರತೀಯ ಬೌಲರ್ ಮೊಹಮ್ಮದ್ ಶಮಿ ಹೈದರಾಬಾದ್ ತಂಡಕ್ಕೆ 10 ಕೋಟಿಗೆ ಹರಾಜಾದರು.
