ಬೆಳಗಾವಿ ಜಿಲ್ಲೆ ಸವದತ್ತಿ ಹೊರವಲಯದ ಟೋಲ್ ನಾಕಾ ಬಳಿಯ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ರೈತ ಶಿವಪ್ಪ ಜಯಪ್ಪ ಮುತಗೊಂಡ ಬೆಳೆದ ಸುಮಾರು 15 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಅಂದಾಜು ₹32 ಲಕ್ಷ ಮೌಲ್ಯದ ಕಬ್ಬು ಬೆಳೆಯಲಾಗಿತ್ತು. ಭಾನುವಾರ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ರೂ. 15 ಲಕ್ಷ ಮೌಲ್ಯದ ಬೆಳೆ ಬೆಂಕಿಗೆ ಆಹುತಿಯಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸಿ ಉಳಿದ ಬೆಳೆ ನಾಶವಾಗುವುದನ್ನು ತಡೆಯಲಾಗಿದೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಕಿಡಿಗೇಡಿಗಳು ತಾವು ಬೆಳೆದ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿದ್ದಾರೆ ಎಂದು ರೈತ ಶಿವಪ್ಪ ಅವರ ಪುತ್ರ ಶ್ರೀಶೈಲ ಮುತಗೊಂಡ ಆರೋಪಿಸಿದ್ದಾರೆ.