ಡೆಲ್ಲಿ ಕ್ಯಾಪಿಟಲ್ಸ್‌ ಮುನ್ನಡೆಸುವ ಆಟಗಾರರ ಹೆಸರು ಘೋಷಣೆ

Date:

ಐಪಿಎಲ್ 2025ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮುನ್ನಡೆಸುವ ಆಟಗಾರರ ಹೆಸರನ್ನು ಪ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್‌ ಜಿಂದಾಲ್ ಅಂತಿಮಗೊಳಿಸಿದ್ದಾರೆ. 14 ಕೋಟಿ ರೂ.ಗೆ ಹರಾಜಾದ ಕೆ ಎಲ್ ರಾಹುಲ್‌ ಹಾಗೂ ಅಕ್ಷರ್‌ ಪಟೇಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ನ.24 ರಂದು ನಡೆದ ಬಿಡ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೆ ಎಲ್ ರಾಹುಲ್ ಅವರನ್ನು ಖರೀದಿಸಿತ್ತು.    

- Advertisement -

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರ್ಥ್‌ ಜಿಂದಾಲ್, ಇಬ್ಬರೂ ಆಟಗಾರರು ತಂಡದ ಕಿರಿಯ ಸದಸ್ಯರಿಗೆ ಮಾರ್ಗದರ್ಶನ ನೀಡಲಿದ್ದಾರೆ. ನಾಯಕನ ಹೆಸರನ್ನು ಮುಂದಿನ ಋತುವಿನಲ್ಲಿಯೇ ತಿಳಿಸಲಾಗುವುದು. ನಾವು ಆರಂಭಿಕರಾಗಿ ಆಡುವವರ ಸಾಮರ್ಥ್ಯವನ್ನು ಎದುರು ನೋಡುತ್ತಿದ್ದು, ಅನುಭವದೊಂದಿಗೆ ಇನಿಂಗ್ಸ್ ಕಟ್ಟುವ ಕೆಲವರಿದ್ದಾರೆ. ಕೆ ಎಲ್‌ ರಾಹುಲ್‌ ಐಪಿಎಲ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ಕೆಲವು ಆಟಗಾರರಂತೆ ಪ್ರತಿ ಋತುವಿನಲ್ಲಿಯೂ 400ಕ್ಕೂ ಅಧಿಕ ರನ್‌ ಪೇರಿಸಿದ್ದಾರೆ. ದೆಹಲಿಯ ಪಿಚ್‌ ಇವರ ಆಟಕ್ಕೆ ಸರಿ ಹೊಂದುತ್ತದೆ ಎಂದು ಭಾವಿಸಿದ್ದೇನೆ. ನಾವು ಅವರನ್ನು ಹೊಂದಿರುವುದಕ್ಕೆ ಹರ್ಷಗೊಂಡಿದ್ದೇನೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಈ ಸುದ್ದಿ ಓದಿದ್ದೀರಾ? ಮಾರ್ಚ್​ 14 ರಿಂದ 18ನೇ ಆವೃತ್ತಿಯ ಐಪಿಎಲ್ ಹಂಗಾಮ ಆರಂಭ, ಮೂರು ವರ್ಷದ ವೇಳಾಪಟ್ಟಿ ಪ್ರಕಟ

“ನಮ್ಮ ಬ್ಯಾಟಿಂಗ್‌ ಪಡೆಯಲ್ಲಿ ಯುವ ಆಟಗಾರರಿದ್ದಾರೆ. ಕೆ ಎಲ್‌ ರಾಹುಲ್ ಹಾಗೂ ಅಕ್ಷರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಕೆ ಎಲ್ ರಾಹುಲ್ ಅವರ ಬ್ಯಾಟಿಂಗ್‌ ಅನುಭವ ಈ ಋತುವಿನಲ್ಲಿ ಪ್ರಮುಖ ಆಕರ್ಷಣೆಯಾಗಿರುತ್ತದೆ. ನಾವು ಎರಡನೇ ದಿನದ ಹಾರಾಜಿನಲ್ಲೂ ಪ್ರಮುಖ ಸಾಮರ್ಥ್ಯವಿರುವ ಬೌಲರ್‌ಗಳನ್ನು ಖರೀದಿಸುತ್ತೇವೆ. ಎಲ್ಲ ವಿಭಾಗಗಳಲ್ಲಿ ನಮ್ಮ ತಂಡ ಅತ್ಯುತ್ತಮವಾಗಿರಲಿದೆ” ಎಂದು ಹೇಳಿದರು.

ದೆಹಲಿ ತಂಡ ಮೊದಲ ದಿನದ ಮೆಗಾ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸಿತ್ತು. ಮೆಗಾ ಹರಾಜಿನ ಡಿಸಿ ಸ್ವಾಧೀನಪಡಿಸಿಕೊಂಡ ಆಟಗಾರರು:

1. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – ಬೌಲರ್ – ರೂ 11.75 ಕೋಟಿ

2. ಕೆಎಲ್ ರಾಹುಲ್ (ಭಾರತ) – ಡಬ್ಲ್ಯುಕೆ-ಬ್ಯಾಟರ್ – ರೂ. 14 ಕೋಟಿ

3. ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ) – ಬ್ಯಾಟರ್ – ರೂ. 9 ಕೋಟಿ (ಆರ್‌ಟಿಎಂ – ಖರೀದಿಸಿದ ಆಟಗಾರರನ್ನು ಪುನಃ ಖರೀದಿಸುವುದು)

4. ಹ್ಯಾರಿ ಬ್ರೂಕ್ (ಇಂಗ್ಲೆಂಡ್) – ಬ್ಯಾಟರ್ – ರೂ. 6.25 ಕೋಟಿ

5. ಟಿ ನಟರಾಜನ್ (ಭಾರತ) – ಬೌಲರ್ – ರೂ. 10.75 ಕೋಟಿ

6. ಕರುಣ್ ನಾಯರ್ (ಭಾರತ) – ಬ್ಯಾಟರ್ – ರೂ. 50 ಲಕ್ಷ

7. ಸಮೀರ್ ರಿಜ್ವಿ (ಭಾರತ) – ಆಲ್‌ರೌಂಡರ್‌- ರೂ 95 ಲಕ್ಷ

8. ಅಶುತೋಷ್ ಶರ್ಮಾ (ಭಾರತ) – ಆಲ್‌ರೌಂಡರ್‌ – ರೂ 3.80 ಕೋಟಿ

9. ಮೋಹಿತ್ ಶರ್ಮಾ (ಭಾರತ) – ಬೌಲರ್ – ರೂ 2.20 ಕೋಟಿ   

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...