ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗೂಗಲ್ ಮ್ಯಾಪ್ ನಂಬಿ ಹೊರಟ ಕಾರೊಂದು ನಿರ್ಮಾಣ ಹಂತದ ಸೇತುವೆಯ ಮೇಲಿಂದ ನದಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ವಿವೇಕ್ ಮತ್ತು ಅಮಿತ್ ಎನ್ನಲಾಗಿದ್ದು ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.
ವಿವೇಕ್ ಹಾಗೂ ಅಮಿತ್ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಲು ಶನಿವಾರ ಬಾಡಿಗೆ ಕಾರೊಂದನ್ನು ಗೊತ್ತುಪಡಿಸಿ ಗುರುಗ್ರಾಮದಿಂದ ಉತ್ತರಪ್ರದೇಶದ ಬರೇಲಿಗೆ ಹೊರಟಿದ್ದರು. ಈ ವೇಳೆ ಮಾರ್ಗ ಸರಿಯಾಗಿ ಗೊತ್ತಿರದ ಕಾರಣ ಚಾಲಕ ಗೂಗಲ್ ಮ್ಯಾಪ್ ಮೊರೆ ಹೋಗಿದ್ದು ಅದರಂತೆ ಬರೇಲಿ ಸಮೀಪದ ನಿರ್ಮಾಣ ಹಂತದ ಸೇತುವೆಯ ದಾರಿ ತೋರಿಸಿದೆ ಅದರಂತೆ ಕಾರು ಚಾಲಕ ಅದೇ ಮಾರ್ಗವನ್ನು ಅನುಸರಿಸಿಕೊಂಡು ಹೋಗಿದ್ದಾನೆ. ಆದರೆ ಸೇತುವೆ ಅಪೂರ್ಣಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು ಐವತ್ತು ಅಡಿ ಆಳದ ರಾಮಗಂಗಾ ನದಿಗೆ ಬಿದ್ದಿದೆ ಅಷ್ಟೋತ್ತಿಗಾಗಲೇ ರಾತ್ರಿಯಾಗಿದ್ದ ಕಾರಣ ವಿಚಾರ ಯಾರಿಗೂ ಗೊತ್ತಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸುವ ಆಟಗಾರರ ಹೆಸರು ಘೋಷಣೆ
ಮರುದಿನ ಭಾನುವಾರ ಬೆಳಿಗ್ಗೆ ಅಲ್ಲಿನ ಸ್ಥಳೀಯರು ನದಿಗೆ ಬಿದ್ದಿರುವ ಕಾರೊಂದನ್ನು ಗಮನಿಸಿದ್ದಾರೆ ಬಳಿಕ ಕಾರಿನ ಬಳಿ ತೆರಳಿದ್ದಾರೆ ಈ ವೇಳೆ ಕಾರಿನಲ್ಲಿ ಮೂವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ನಡುವೆ ಅಮಿತ್ ಹಾಗೂ ವಿವೇಕ್ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ ಸೇತುವೆ ನಿರ್ಮಾಣ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆಗೆ ಬ್ಯಾರಿಕೇಡ್ ಇಡದೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇಂತಹ ದುರಂತಗಳಿಗೆ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕ. ಬಾರತದಲ್ಲಿ ನಡೆಯುವ ಕಾಮಗಾರಿಗಳಿಗೆ ಯಾವುದೇ ಸುರಕ್ಷಾ ಮಾನದಂಡ ಬಳಸದಿರುವುದು ದುರಂತ. ಇದರಲ್ಲಿ ಸರಕಾರಕ್ಕೂ ಪಾಲಿದೆ. ಕಾಮಗಾರಿಗಳಿಗೆ ಕಾಲಮಿತಿಯನ್ನೂ ನಿಗದಿಪಡಿಸುವುದಿಲ್ಲ. ಈ ದಿನ.ಕಾಮ್ ಈ ಕುರಿತಂತೆ ಸರಕಾರದ ಗಮನ ಸೆಳೆಯಬೇಕು.
Very sad incident
We should take strict action against responsible authority