ಅಕ್ರಮವಾಗಿ ಮದ್ಯಸಾಗಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.
ಚಳ್ಳಕೆರೆ ನಗರದ ಅಬಕಾರಿ ಉಪ ನಿರೀಕ್ಷಕರು ಹಾಗೂ ನಿರೀಕ್ಷಕರು ಚಳ್ಳಕೆರೆ ವಲಯ ಅಬಕಾರಿ ಸಿಬ್ಬಂದಿಯೊಂದಿಗೆ ಬಳ್ಳಾರಿ ಮುಖ್ಯ ರಸ್ತೆಯ ನಾಯಕನಹಟ್ಟಿ ಕ್ರಾಸ್ ಬಳಿ ಸರ್ವೀಸ್ ರಸ್ತೆಯಲ್ಲಿನ ಬಸ್ ನಿಲ್ದಾಣದ ಮುಂಭಾಗ ವಾಹನ ತಪಾಸಣೆ ಮಾಡುತ್ತಿದ್ದಾಗ ವ್ಯಕ್ತಿಯೋರ್ವನು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ತಕ್ಷಣ ವ್ಯಕ್ತಿ ಹಾಗೂ ದ್ವಿಚಕ್ರವಾಹನ ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ದೇವರಹಟ್ಟಿ ಚಿಕ್ಕಮ್ಮನಹಳ್ಳಿ ಗ್ರಾಮದ ಚೆನ್ನಯ್ಯ (60) ಎಂದು ತಿಳಿದು ಬಂದಿದೆ. ಅಲ್ಲದೆ ಟಿ.ವಿ.ಎಸ್ ಎಕ್ಸ್.ಎಲ್. ದ್ವಿಚಕ್ರ ವಾಹನದಲ್ಲಿ ಹೈವಾರ್ಡ್ಸ್ ವಿಸ್ಕಿ-90 ಮಿಲಿಯ 40 ಟೆಟ್ರಾ ಪ್ಯಾಕ್ ಗಳು ಒಟ್ಟು- 3.600 ಲೀಟರ್ ಮದ್ಯ ಕಂಡುಬಂದಿದ್ದು, ಮದ್ಯ ಹಾಗೂ ದ್ವಿಚಕ್ರ ವಾಹನವೂ ಸೇರಿದಂತೆ 40 ಸಾವಿರ ಮೌಲ್ಯದ ಸರಕನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಪಾಸಣೆ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ನಾಗರಾಜು ಸಿ, ಅಬಕಾರಿ ಮುಖ್ಯ ಪೇದೆ ಟಿ.ರಂಗಸ್ವಾಮಿ, ಎನ್.ನಾಗರಾಜ, ಟಿ.ಸೋಮಶೇಖರ್ ಅಬಕಾರಿ ಪೇದೆ ದರ್ಶನ್ ಕುಮಾರ್ ಇತರರು ಭಾಗವಹಿಸಿದ್ದರು.