ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆಇಬಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬ ಒಂದೂವರೆ ವರ್ಷದ ಹಿಂದೆ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದು, ಈಗ ಮಹಿಳೆಯಿಂದ ದೂರವಾಗಿದ್ದಾನೆ. ಅಧಿಕಾರಿ ತಮ್ಮ ತಪ್ಪನ್ನು ಅರಿತು ಮಹಿಳೆಯೊಂದಿಗೆ ಜೀವನ ನಡೆಸದಿದ್ದರೆ ಕಾನೂನು ರೀತಿಯ ಹೋರಾಟ ಮಾಡಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ಧ್ವನಿ ಮಹಿಳಾ ಮಕ್ಕಳ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷೆ ರಜಿನಿರಾಜ್ ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ರಾಜ್ಯದಲ್ಲಿ ಮಕ್ಕಳು ಹಾಗೂ ನೊಂದ ಮಹಿಳೆಯರು ಲೈಂಗಿಕ ಕಿರುಕುಳ ಸಮಸ್ಯೆ ಎದುರಿಸುತ್ತಿದ್ದರೆ, ಅದರ ವಿರುದ್ಧ ಕಾನೂನುತ್ಮಕ ಹೋರಾಟ ಮಾಡಿ ಬಗೆಹರಿಸುವಂತ ಕೆಲಸ ಮಾಡುತ್ತೇವೆ” ಎಂದರು.
“ನಮ್ಮ ಸಂಸ್ಥೆಯಿಂದ ಈಗಾಗಲೇ 33 ಪ್ರಕರಣಗಳನ್ನು ಬಗೆಹರಿಸಿದ್ದು, ನಮ್ಮ ಸಂಸ್ಥೆಯ ಸೇವೆಯನ್ನು ಗುರುತಿಸಿ ನ್ಯಾಯಾಧೀಶರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ಪತ್ರವನ್ನು ನೀಡಿ ಸನ್ಮಾನಿಸಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 200 ಎಕರೆ ಕಬ್ಬು ಬೆಂಕಿಗಾಹುತಿ
“ರಾಜ್ಯದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಯಾವುದೇ ರೀತಿ ಸಮಸ್ಯೆಯಾದರೆ ನಮ್ಮ ಸಂಸ್ಥೆ ಅವರ ಪರವಾಗಿ ನಿಂತು ಸಮಸ್ಯೆಯನ್ನು ನಿವಾರಿಸುವ ಕೆಲಸ ಮಾಡುತ್ತೇವೆ. ಮಕ್ಕಳ ಮತ್ತು ನೊಂದ ಮಹಿಳೆಯರ ಸಮಸ್ಯೆಗಳಿದ್ದರೆ 9986560974ಕ್ಕೆ ಸಂಪರ್ಕಿಸಬಹುದು” ಎಂದರು.
ಈ ಸಂದರ್ಭದಲ್ಲಿ ವಕೀಲೆ ರಶ್ಮಿ ಇದ್ದರು.
