ಯುವ ಶಕ್ತಿ ಯಾವುದೇ ಕಾರಣಕ್ಕೂ ಡ್ರಗ್ಸ್ ಸೇರಿದಂತೆ ಮಾರಕ ವ್ಯಸನಗಳಿಗೆ ಬಲಿಯಾಗಿ ದಾಸರಾಗಬೇಡಿ. ಅದರ ಬದಲು ಉತ್ತಮ ಹವ್ಯಾಸಗಳತ್ತ ಮನಸ್ಸು ಕೇಂದ್ರೀಕರಿಸಬೇಕು ಎಂದು ಚಿತ್ರನಟ ಡಾ. ಶಿವರಾಜ್ ಕುಮಾರ್ ಹೇಳಿದರು.
ಕೆಎಲ್‍ಇ ಟೆಕ್ನಲಾಜಿಕಲ್ ಯೂನಿವರ್ಸಿಟಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಜಂಟಿ ಸಹಯೋಗದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದ, ಮಾದಕ ವ್ಯಸನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಎಲ್ಲವನ್ನೂ ಮಾಡಲು ಪ್ರೇರೇಪಿಸುವ ವಯಸ್ಸಿನ ಉತ್ಸಾಹಕ್ಕೆ ಬಲಿಯಾಗಿ ಬದುಕು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಡ್ರಗ್ಸ್’ನಿಂದ ನಾವು ದೂರವಿರಬೇಕು. ಡ್ರಗ್ಸ್ ಗೆ ದಾಸರಾದರೆ ಜೀವನ ಹಾಳಾಗುತ್ತದೆ. ಯುವ ಶಕ್ತಿ ಯಾವುದೇ ಕಾರಣಕ್ಕೂ ಡ್ರಗ್ಸ್ ಸೇರಿದಂತೆ ಮಾರಕ ವ್ಯಸನಗಳಿಗೆ ಬಲಿ ಆಗುವ ಬದಲು ಉತ್ತಮ ಹವ್ಯಾಸಗಳತ್ತ ಮನಸ್ಸು ಕೇಂದ್ರೀಕರಿಸಬೇಕು.
ಈ ವೇಳೆ ಅವಳಿನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹಾಗೂ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.