ಶ್ರೀರಂಗಪಟ್ಟಣ | ಸಂವಿಧಾನ ಸಮರ್ಪಣಾ ದಿನ, ರಾಷ್ಟ್ರೀಯ ಕಾನೂನು ದಿನಾಚರಣೆ

Date:

Advertisements

ಸಂವಿಧಾನವನ್ನು ಪಾಲನೆ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಬೇಕು. ಆಗ ಭಾರತೀಯರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಆಗುತ್ತದೆ ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕರಾದ ಸಿ.ಎಸ್.ವೆಂಕಟೇಶ್ ಅಭಿಪ್ರಾಯ ಪಟ್ಟರು.

ಅವರು ಸಂವಿಧಾನ ಸಮರ್ಪಣಾ ದಿನ ಮತ್ತು ರಾಷ್ಟ್ರೀಯ ಕಾನೂನು ದಿನಾಚರಣೆ ಪ್ರಯುಕ್ತ ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಎದುರಿರುವ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಸಂವಿಧಾನ ಪ್ರಸ್ತಾವನೆಗೆ ‘ಸಮಾಜವಾದಿ’ ‘ಜಾತ್ಯಾತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸಿದ್ದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಇದು ಖುಷಿ ಪಡುವ ವಿಚಾರ ಎಂದರು.

Advertisements
IMG 20241126 WA0038

ನಂತರ ಪ್ರಜ್ಞಾವಂತರ ವೇದಿಕೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟ, ಶ್ರೀರಂಗಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಸಂವಿಧಾನ ಪೀಠಿಕೆಯ ಮೆರವಣಿಗೆಗೆ ಆಶಾ ಪುಟ್ಟೇಗೌಡ ಚಾಲನೆ ನೀಡಿದರು. ಕುವೆಂಪು ವೃತ್ತದಿಂದ ಹೊರಟ ಸಂವಿಧಾನ ಪೀಠಿಕೆಯ ಮೆರವಣಿಗೆ ಶ್ರೀರಂಗಪಟ್ಟಣದ ಪೇಟೆಯ ಮುಖ್ಯ ಬೀದಿಗಳ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ನಂತರ ಎಲ್ಲರಿಗೂ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.

ವಿಜಯ ಮಂಗಳೂರು ಮಾತನಾಡಿ, ಇವತ್ತು ಎಲ್ಲ ಭಾರತೀಯರಿಗೆ ಬಹಳ ಮುಖ್ಯವಾದ ದಿನ. ಇವತ್ತು ಸಂವಿಧಾನ ಅಂತಿಮಗೊಂಡ ದಿನ. ನಮ್ಮ ಸಂವಿಧಾನವು 1950ರ ಜನವರಿ 26 ರಿಂದ ಜಾರಿಗೆ ಬರಲಿದೆ ಎಂದು ತೀರ್ಮಾನಗೊಂಡ ದಿನ. ನಾವೆಲ್ಲರೂ ಸಂವಿಧಾನ ರಚನಾ ಸಭೆ ಹೇಗೆ ಕೆಲಸ ಮಾಡಿತು ಅಂತ ತಿಳಿಯಬೇಕು. ಯಾರು ಏನು ಮಾತನಾಡಿದರು, ಅದಕ್ಕೆ ಏನು ಉತ್ತರ ಕೊಟ್ಟರು, ಕೊಟ್ಟ ಉತ್ತರ ಎಲ್ಲರಿಗೂ ಸಮಾಧಾನ ತಂದಿತಾ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದರು.

IMG 20241126 WA0062

ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಒಂದೇ ಭಾಷೆ, ಧರ್ಮ ಮತ್ತು ಆಚರಣೆಗಳು ಇರುತ್ತವೆ. ಅಲ್ಲಿಗೆ ಸಂವಿಧಾನ ರಚಿಸುವುದು ಬಲು ಸುಲಭ. ಆದರೆ ಭಾರತ ಬಹಳ ದೊಡ್ಡ ಒಕ್ಕೂಟ. ಇಲ್ಲಿ ಅನೇಕ ರೀತಿಯ ಭಾಷೆ, ಧರ್ಮ ಹಾಗೂ ಪ್ರದೇಶಗಳಿವೆ. ಇಲ್ಲಿ ಎಲ್ಲರೂ ಒಪ್ಪುವ ಸಂವಿಧಾನ ರಚನೆ ಬಲು ಸಂಕೀರ್ಣ. ಇದನ್ನು ಸಾಧಿಸಿದವರು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಶ್ಲಾಘಿಸಿದರು.

ಸಂವಿಧಾನ ಇದೆ. ಸಂವಿಧಾನ ವಿಧಿ ವಿಧಾನಗಳ ಅಡಿಯಲ್ಲಿ ಆಡಳಿತ ನಡೆಯುತ್ತಿದೆ. ಆದರೂ, ನಮ್ಮಗಳ ಸ್ಥಿತಿ ಇನ್ನೂ ಸುಧಾರಿಸಬೇಕಿದೆ. ಇನ್ನೂ ಸಾಕಷ್ಟು ಸೌಲಭ್ಯಗಳು ತಲುಪಬೇಕಿದೆ. ಇನ್ನು ನ್ಯಾಯ ಸರಿಯಾಗಿ ಸಿಗುತ್ತಿಲ್ಲ. ಸಂವಿಧಾನ ಇದ್ದಾಗ ಈ ರೀತಿ ಆದರೆ ಇನ್ನೂ ಸಂವಿಧಾನ ಇಲ್ಲದಿದ್ದಾಗ ನಮ್ಮಗಳ ಬದುಕು ಹೇಗೆ ನೆನಪಿಸಿಕೊಳ್ಳಿ ಎಂದರು.

ಇದನ್ನು ಓದಿದ್ದೀರಾ? ಮಂಡ್ಯ | ಹೆಣ್ಣು ಭ್ರೂಣ ಹತ್ಯೆಯಾಗದಂತೆ ಎಚ್ಚರವಹಿಸಲು ಜಿಲ್ಲಾಧಿಕಾರಿ ಸೂಚನೆ

ನನಗೀಗ 75 ವರ್ಷ. ನಾನು ಚಿಕ್ಕವನಾಗಿದ್ದಾಗ ನಮ್ಮ ಗುಡಿಸಲು ಹಂದಿಗಳನ್ನು ಕೂಡಿ ಹಾಕಿದಂತಿತ್ತು. ನನಗೆ ಈಗಲೂ ನೆನಪಿದೆ ಅಲ್ಲೇ ಐದಾರು ಅಣ್ಣ-ತಮ್ಮಂದಿರ ಸಂಸಾರವೆಲ್ಲ ಇತ್ತು. ಈಗ ನಮ್ಮ ಪರಿಸ್ಥಿತಿ ಸಾಕಷ್ಟು ಬದಲಾವಣೆ ಕಂಡಿದೆ ಎಂದು ತಮ್ಮ ಬಾಲ್ಯ ಕಾಲವನ್ನು ನೆನಪಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಚಂದ್ರಣ್ಣ ಕ್ಯಾತನಹಳ್ಳಿ, ರೈತ ಸಂಘದ ಪಾಂಡು, ಜಯರಾಮೇಗೌಡ, ಚಿಕ್ಕತಮ್ಮೇಗೌಡ, ಸರ್ವೋದಯ ಪಕ್ಷದ ರಮೇಶ್, ಸವೆರ ಸ್ವಾಮಿ, ಡಿಎಸ್ಎಸ್‌ನ ಕುಬೇರಪ್ಪ, ಟಿಪ್ಪು ಚಂದ್ರು, ಸಂಜಯ ಪ್ರಕಾಶನದ ಶಿವಕುಮಾರ್, ಕಡತನಾಳು ಜಯಶಂಕರ್, ಪ್ರಿಯಾ ರಮೇಶ್, ಸೌಹಾರ್ದ ವೇದಿಕೆಯ ಅಕ್ಬರ್, ಪಾಂಡವಪುರ ವಿಜಯ್ ಕುಮಾರ್, ಕೃಷ್ಣಮೂರ್ತಿ ಇನ್ನೂ ಮುಂತಾದವರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X