ಬೀದರ್‌ | ಮನುಷ್ಯ ಮೂಲತಃ ರಾಜಕೀಯ ಜೀವಿ : ಡಾ.ಕಿರಣ ಗಾಜನೂರು

Date:

Advertisements

ಮನುಷ್ಯ ಮೂಲತಃ ರಾಜಕೀಯ ಜೀವಿ. ರಾಜಕಾರಣ ಇಲ್ಲವೆಂದಾದರೆ ಸಾಮುದಾಯಿಕ ಬದುಕು ನಡೆಸಲು ಸಾಧ್ಯವಿಲ್ಲ. ನಾವು ಸಾಮಾಜಿಕ ಸಂಘಟಿತರಾಗಿಲ್ಲ. ರಾಜಕೀಯವಾಗಿಯೂ ಸಂಘಟಿತರಾಗಿದ್ದೇವೆ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕಿರಣ್ ಗಾಜನೂರು ಹೇಳಿದರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ʼಸಂವಿಧಾನದ ಪ್ರಸ್ತುತತೆʼ ಕುರಿತು ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದ, ʼಸಾಮಾಜಿಕ ಹಾಗೂ ರಾಜಕೀಯವಾಗಿ ಸಂಘಟಿತರಾಗಿದ್ದೇವೆ ಎನ್ನುವುದು ಅರ್ಥವಾಗದಿದ್ದರೆ ನಮಗೆ ಸಂವಿಧಾನ ಅರ್ಥವಾಗುವುದಿಲ್ಲʼ ಎಂದರು.

ʼಉದಾರವಾದಿ ಸಂಕಥನದಲ್ಲಿ ಸಂವಿಧಾನ ಎಂಬ ಪದ ಬಂತು. ಸಾಮಾಜಿಕ ಬದುಕನ್ನು ಸಂರಕ್ಷಣೆ ಮಾಡುವುದು ಮತ್ತು ಅದಕ್ಕೊಂದು ರಾಜಕೀಯ ಸ್ವರೂಪ ಕೊಡಬೇಕು ಎಂಬುದೇ ಸಂವಿಧಾನದ ಉದ್ದೇಶವಾಗಿದೆ. ಮೊದಲ ತಲೆಮಾರಿನ ಮಹಿಳೆಯರು ಸಾಂವಿಧಾನಿಕ ಹುದ್ದೆಗೆ ಹೋಗಲು ಭಾರತೀಯ ಸಂವಿಧಾನದಿಂದ ಸಾಧ್ಯವಾಯಿತು. ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯ ಮಂತ್ರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತ್ರ ಸಂವಿಧಾನಿಕ ಹುದ್ದೆ ಹೊಂದಿರುತ್ತಾರೆ. ಘನತೆಯಿಂದ ಜೀವಿಸಲು ಸಂವಿಧಾನದ ಅಗತ್ಯʼ ಎಂದರು.

Advertisements

ʼಈ ದೇಶದ ಪ್ರತಿಯೊಬ್ಬರೂ ಘನತೆಯಿಂದ ಬದುಕು ನಡೆಸಲು ಸಂವಿಧಾನದ ಅಗತ್ಯವಿದೆ. ಶಿಕ್ಷಣ, ಆಹಾರ, ಆರೋಗ್ಯ ಮತ್ತು ಉದ್ಯೋಗಗಳು ನೀಡುವ ಮೂಲಕ ಈ ದೇಶದ ನಾಗರಿಕರಿಗೆ ಘನತೆಯ ಬದುಕು ನೀಡಬೇಕೆಂದು ಸರ್ಕಾರಗಳಿಗೆ ಸಂವಿಧಾನ ನಿರ್ದೇಶಿಸುತ್ತದೆ. ದೇಶ ಸ್ವಾತಂತ್ರ್ಯಗೊಂಡು ಇಷ್ಟು ವರ್ಷಗಳಾದರೂ ನಾವು ಎಷ್ಟು ಪ್ರಮಾಣದಲ್ಲಿ ಸಂವಿಧಾನವನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆʼ ಎಂದರು.

ʼಮೂಲಭೂತ ಹಕ್ಕುಗಳೇ ಸಿಗದಂತಹ ಸ್ಥಿತಿಯಾಗುವ ವ್ಯವಸ್ಥೆಯಿಂದ ಸಂವಿಧಾನ ಅಪಾಯದಲ್ಲಿದೆ. ಲಿಂಗಾಧಾರಿತವಾಗಿ ಮಹಿಳೆಯನ್ನೂ , ಜಾತಿ ಆಧಾರಿತವಾಗಿ ದಲಿತರನ್ನೂ ಉದ್ಯೋಗ, ಮಾರುಕಟ್ಟೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯ ಬಾಗವಾಗಿಸದಿದ್ದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ. ಎಲ್ಲರನ್ನೂ ಒಳಗೊಳ್ಳುವಿಕೆಯ ಪರಿಕಲ್ಪನೆ ೧೨ನೇ ಶತಮಾನದಲ್ಲಿಯೇ ಬಸವಾದಿ ಶರಣರು ಈ ದೇಶಕ್ಕೆ ನೀಡಿದ್ದರು. ಸಮಾಜದಲ್ಲಿನ ಎಲ್ಲ ವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ನೆರವಾಗುವ ರೀತಿಯಲ್ಲಿ ಒಳಗೊಳ್ಳುವಿಕೆಯ ತತ್ವ ಸಂವಿಧಾನ ಬಯಸುತ್ತದೆʼ ಎಂದರು.

ʼಸಂವಿಧಾವನ್ನು ಕೇವಲ ಪಠ್ಯವಾಗಿ ನೋಡದೇ ಅದು ನಮ್ಮ ಬದುಕಿನಲ್ಲಿ ಪಾತ್ರವಾಗಿ ಪರಿಗಣಿಸಿದಾಗ ಮಾತ್ರ ಸಂವಿಧಾನ ಅರ್ಥವಾಗುತ್ತದೆ. ಯುವ ಸಮುದಾಯ ತಮ್ಮ ಹಕ್ಕುಗಳ ಕುರಿತು ಮಾತನಾಡದೇ ಇರುವುದು ಸಂವಿಧಾನಕ್ಕೆ ದೊಡ್ಡ ಸಮಸ್ಯೆಯಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಅಂಶಗಳು ಎಲ್ಲರಿಗೂ ಒದಗಿಸಿದಾಗಲೇ ಸಂವಿಧಾನದ ಆಶಯ ಪೂರ್ಣಗೊಂಡತೆʼ ಎಂದರು.

WhatsApp Image 2024 11 26 at 9.58.57 PM

ʼಎಲ್ಲ ವಲಯಗಳ ಖಾಸಗೀಕರಣದಿಂದಾಗಿ ಘನತೆಯಿಂದ ಜೀವಿಸುವ ಅವಕಾಶ ಅಪಾಯದಲ್ಲಿದೆ. ಮಹಾನಗರಗಳ ಮಾಲ್‌ನಲ್ಲಿ ಯುವಕ, ಯುವತಿಯರು 11 ಗಂಟೆಗಳ ಕಾಲ ನಿಂತುಕೊಂಡೇ 5 ವರ್ಷ ಕೆಲಸ ಮಾಡಿದರೆ ಅವರಿಗೆ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಡಾ. ಬಿ.ಆರ್.ಅಂಬೇಡ್ಕರ ಅವರು ವ್ಯಕ್ತಿಯ ಒಂದು ದಿನದ ಸಮಯವನ್ನು ವೃತ್ತಿ, ಕುಟುಂಬ, ವಿಶ್ರಾಂತಿ ಮತ್ತು ಬೌದ್ಧಿಕ ಚಟುವಟಿಕೆಗಳಾಗಿ ಇಡೀ ದಿನದ 24 ಗಂಟೆಗಳನ್ನು ವರ್ಗಿಕರಿಸಿದ್ದಾರೆ. ವ್ಯಕ್ತಿಯ ಶ್ರಮ ಆ ಚೌಕಟ್ಟಿನಲ್ಲಿ ಇದ್ದರೇನೇ ಮನುಷ್ಯರಾಗಿ ಬದುಕುತ್ತೇವೆ. ಇಲ್ಲದಿದ್ದರೆ ಯಂತ್ರಗಳಾಗುತ್ತೇವೆ’ ಎಂದು ತಿಳಿಸಿದರು.

ʼದೇಶ ಕಟ್ಟಲು ಬಯಸುವ ನಾವು, ಎಲ್ಲ ಪ್ರಜೆಗಳಿಗೆ ಅಭಿವ್ಯಕ್ತಿಯ ಮತ್ತು ಜೀವಿಸುವ ಸ್ವಾತಂತ್ರ್ಯ, ನ್ಯಾಯದಲ್ಲಿ, ಶಿಕ್ಷಣದಲ್ಲಿ, ಉದ್ಯೋಗಗಳಲ್ಲಿ ಸಮಾನತೆ ಕೊಟ್ಟರೆ ಭ್ರಾತೃತ್ವ ಬೆಳೆಯುತ್ತದೆ. ಆ ಭ್ರಾತೃತ್ವದ ಮೂಲಕ ದೇಶವನ್ನು ಸದೃಢ ಮಾಡಬಹುದು ಎಂದು ನಮ್ಮ ಸಂವಿಧಾನದ ಪೀಠಿಕೆಯ ಸಾರವಾಗಿದೆʼ ಎಂದರು.

ಕಲಬುರ್ಗಿ ಎನ್. ವಿ.ಕಾಲೇಜು ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಅವರು ಮಾತನಾಡಿ, ʼಸಂವಿಧಾನದ ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳವ ಮೂಲಕ ಸಂವಿಧಾನಕ್ಕೆ ಗೌರವಿಸಬೇಕುʼ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಅವರು ಮಾತನಾಡಿ, ʼಸಂವಿಧಾನದ ಅಧ್ಯಯನದಿಂದ ಪ್ರತಿಯೊಬ್ಬರು ಸಂವಿಧಾನದ ಮಹತ್ವ ಅರಿಯಬೇಕು. ಅದು ನೀಡಿದ ಕರ್ತವ್ಯಗಳ ಪಾಲನೆ ಚಾಚು ತಪ್ಪದೇ ನಿರ್ವಹಿಸುವುದು ಅಗತ್ಯವಿದೆʼ ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಂವಿಧಾನದ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಅಧ್ಯಯನದಿಂದ ನಮ್ಮ ಅರಿವು ಹೆಚ್ಚಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿನದಿದೆ. ಸಂವಿಧಾನವನ್ನು ಅರ್ಥೈಸಿಕೊಳ್ಳಲು, ಅನುಸರಿಸಿಕೊಳ್ಳುವಲ್ಲಿ ನಾವು ವಿಫಲರಾದರೆ, ಸಂವಿಧಾನಕ್ಕೆ ಅಪಾಯ ಎದುರಾದಂತೆ. ಶರಣರ ಕನಸಿನ ಲೋಕ, ಸಮ ಸಮಾಜದ ಆಶಯ ಭಾರತೀಯ ಸಂವಿಧಾನದ ತಾತ್ವಿಕತೆಯಾಗಿದೆʼ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ ಅವರು ಬರೆದ ‘ಸಂವಿಧಾನ ಓದು’ ಕೃತಿಗಳನ್ನು ಡಾ.ಕಿರಣ್ ಎಂ ಗಾಜನೂರು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಅರಿವಿಲ್ಲದ ಪುಢಾರಿಯಂತೆ ಮಾತನಾಡುವ ಯತ್ನಾಳ ಹೇಳಿಕೆ ಖಂಡನೀಯ : ಬಸವರಾಜ ಧನ್ನೂರ

ಮಾಧವಮೂರ್ತಿ, ರಮ್ಯಾ ಕೆ.ಗಾಜನೂರು, ವಿವೇಕಾನಂದ ಶಿಂಧೆ, ನಾಗವೇಣಿ ವಟಗೆ, ಅಶೋಕರೆಡ್ಡಿ ಗದಲೆಗಾಂವ, ಬಸವರಾಜ ಗುಂಗೆ, ಪ್ರಭಾಕರ ನವಗಿರೆ, ಕೃಷ್ಣ ಸಸ್ತಾಪುರ ಇದ್ದರು. ಡಾ.ಶಾಂತಲಾ ಪಾಟೀಲ ಸ್ವಾಗತಿಸಿದರು. ಚನ್ನಬಸಪ್ಪ ಗೌರ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X