ವಿಜಯಪುರ ಕೃಷಿ ಇಲಾಖೆ ಮೂಲಕ ಕಳಪೆ ತೊಗರಿ ಬೀಜ ವಿತರಣೆ ಮಾಡಿರುವ ಪರಿಣಾಮ ಗಿಡಗಳಲ್ಲಿ ಒಂದು ತೊಗರಿಕಾಯಿ ಸಹಿತ ಇಲ್ಲದೆ ರೈತರು ಆತಂಕಕ್ಕೀಡಾಗಿದ್ದಾರೆ. ಬಿತ್ತಿದ ತೊಗರಿ ಬೆಳೆ ನೋಡಲು ಅಬ್ಬರವಾಗಿದೆ ಆದರೆ ಪ್ರಯೋಜನವಿಲ್ಲ. ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದ್ದಾರೆ.
ಈ ಕುರಿತು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಹೆಣ್ಣೂರು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಪರಿಶೀಲನೆ ಮಾಡದೆ ಕೃಷಿ ಇಲಾಖೆಯಿಂದ ಬೀಜ ಬಿತ್ತರಿಸಿರುವುದರಲ್ಲಿ ಜಿಲ್ಲಾಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಆದ್ದರಿಂದ ಕಳಪೆ ಬೀಜ ವಿತರಿಸಿದ ಕಂಪನಿ ಮೇಲೆ ಕ್ರಮಕೈಗೊಳ್ಳಬೇಕು. ರೈತರಿಗೆ ಸುಳ್ಳು ಹೇಳಿ ಬೀಜ ವಿತರಿಸಿದ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿಜಯಪುರ ಜಿಲ್ಲೆಯದಂತ ತೊಗರಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಇಡೀ ಜಿಲ್ಲೆಯಲ್ಲಿ ಜಿ ಆರ್ ಜಿ 122 ಹಾಗೂ ಜಿ.ಆರ್.ಜಿ 811 ತೊಗರಿ ಬೀಜ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯವರು ಬೀಜ ತೆಗೆದುಕೊಳ್ಳುವ ಸಂದರ್ಭದಲ್ಲೇ ತೊಗರಿ ಗುಣಮಟ್ಟದ ಯಾವ ತಳಿ ಬೀಜ ರೈತರು ಬಿತ್ತನೆ ಮಾಡಬೇಕು ಇದಕ್ಕೆ ಅನುಸರಿಸಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದುವರೆಯಬೇಕು. ಈ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದುಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳಪೆ ತೊಗರಿ ಬೀಜದ ವಿಷಯವನ್ನು ಮರೆಮಾಚಲು ಅಧಿಕಾರಿಗಳು, ಡೀಲರ್ಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು. ತೊಗರಿ ಬೀಜ ಕಳಪೆ ಮಟ್ಟದ್ದಾಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಿ ರೈತರಿಗೆ ಪರಿಹಾರ ಒದಗಿಸಲು ಜಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವರದಿ ಓದಿದ್ದೀರಾ? ವಿಜಯಪುರ | ಮಹಿಳೆಯ ಮಡಿಲಲ್ಲಿಯೇ ಜಾನಪದ ಸಾಹಿತ್ಯ ಹುಟ್ಟಿಕೊಂಡಿದ್ದು: ಶಿವಲೀಲಾ ಮಧುರಾ
ಈ ಸಂದರ್ಭದಲ್ಲಿ ರೈತ ಮುಖಂಡ ಹೋನಕೆರಪ್ಪ ತೆಲಗಿ, ಬಸನಗೌಡ ಚೌದರಿ, ವಿಠ್ಠಲ ಹುಂದಗನೂರ, ದತ್ತಾತ್ರೆಯ ಕುಲಕರಣಿ, ಶ್ರೀಶೈಲ್ ಚೌದರಿ ಇತರರಿದ್ದರು.