ಮಂಗಳೂರು | ಮುನೀರ್ ಕಾಟಿಪಳ್ಳ ಮೇಲೆ ಮತ್ತೊಂದು FIR ಹಾಕಿದ ಮಂಗಳೂರು ನಗರ ಪೊಲೀಸ್ ಕಮಿಷನರ್

Date:

Advertisements

ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಮಂಗಳೂರು, ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಂತಿಯುತ ಧರಣಿ ನಡೆಸಿದ್ದು ಅಪರಾಧ ಎಂದು ಹೇಳಿ ಮೊಕದ್ದಮೆ ಹೂಡಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ “ಮುನೀರ್ ಕಾಟಿಪಳ್ಳ” ಎಂದು ಒಂದು ಹೆಸರನ್ನು ಮಾತ್ರ ಉಲ್ಲೇಖಿಸಿ ಸ್ವಯಂಪ್ರೇರಿತ FIR ಹಾಕಿದ್ದಾರೆ. ಇದರ ಉದ್ದೇಶ ಸ್ಪಷ್ಟ, ಮುನೀರ್ ಕಾಟಿಪಳ್ಳ ಈಗ ಮಂಗಳೂರು ಕಮೀಷನರ್ ಅವರಿಗೆ ಟಾರ್ಗೆಟ್, ಆ ಮೂಲಕ ಮಂಗಳೂರಿನ ಜನಪರ ಚಳವಳಿಗಳನ್ನು ಬೆದರಿಸುವ, ಬಾಯಿ ಮುಚ್ಚಿಸುವ ಯತ್ನ ನಡೆಸುತ್ತಿದ್ದಾರೆ‌. ಇದು ಬಿಜೆಪಿ ಶಾಸಕರುಗಳ ನಿರ್ದೇಶನದಂತೆ ನಡೆಯುತ್ತಿದೆ ಎಂಬುದರಲ್ಲಿ ಅನುಮಾನ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಂಗಳೂರು ಪೊಲೀಸ್ ಕಮೀಷನರ್ ಹೆದ್ದಾರಿ ಸಮಸ್ಯೆಗಳ ಕುರಿತು ಸಾಮೂಹಿಕ ಧರಣಿಯಲ್ಲಿ ಧ್ಚನಿವರ್ಧಕ ಬಳಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಈ ರೀತಿ ತಿರಸ್ಕರಿಸಲು ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪ್ರತಿಭಟನೆ ನಡೆಸುವುದು ನಾಗರಿಕರ ಸಂವಿಧಾನ ಬದ್ದ ಹಕ್ಕು. ಅದನ್ನು ನಿರಾಕರಿಸುವುದು ಅಪರಾಧವೇ ಹೊರತು, ಧರಣಿ ನಡೆಸುವುದಲ್ಲ‌. ವಿನಾ ಕಾರಣ ಅನುಮತಿ ನಿರಾಕರಿಸುವ ಮೂಲಕ ಕಮೀಷನರ್ ತಪ್ಪೆಸಗಿದ್ದಾರೆ ಎಂದಿದ್ದಾರೆ.

ಅನುಮತಿ ನಿರಾಕರಿಸಿದ ಕಾರಣ ನಾವು ಧ್ವನಿ ವರ್ಧಕ ಬಳಸಲಿಲ್ಲ, ಶಾಮಿಯಾನ ಹಾಕಲಿಲ್ಲ. ಪೊಲೀಸರಿಗೆ ತಿಳಿಸಿಯೇ ಹೆದ್ದಾರಿ ಬದಿಯ ವಿಶಾಲವಾದ ಖಾಲಿ ಜಾಗದಲ್ಲಿ ಉರಿ ಬಿಸಿಲಿನಲ್ಲಿ ಕೂತು ಧರಣಿ ನಡೆಸಿದ್ದೇವೆ. ಅದು ಹೇಗೆ ಅಪರಾಧ ಆಗುತ್ತದೆ ? ಸ್ಥಳದಲ್ಲಿ ನಿಷೇಧಾಜ್ಞೆ ಇರಲಿಲ್ಲ, ಪ್ರತಿಭಟನೆಗಳಿಗೆ ನಿಷೇಧಿಸಲ್ಪಟ್ಟ ಸ್ಥಳಗಳ ಪಟ್ಟಿಯಲ್ಲೂ ಧರಣಿ ನಡೆಸಿದ ಪ್ರದೇಶ ಇರಲಿಲ್ಲ. ಧರಣಿಯಿಂದ ತೊಂದರೆ ಆಗಿದೆ ಅಂತ ಯಾರೂ ಪೊಲೀಸರಲ್ಲಿ ದೂರು ನೀಡಿಲ್ಲ. ಹಾಗಿರುತ್ತಾ FIR ಹಾಕಿರುವುವುದು ಹೇಗೆ ? ನಮ್ಮ ಘೋಷಣೆ, ಬೇಡಿಕೆಗಳನ್ನು ಪೊಲೀಸರು FIR ಹಾಳೆಯಲ್ಲಿ ಹಾಕಿದ್ದಾರೆ. ಅದರಲ್ಲಿ ಅಪರಾಧದ ಅಂಶಗಳು ಯಾವುದಿದೆ ?

Advertisements

ಜನ ಸಾಮಾನ್ಯರ ಬದುಕಿನ ಪ್ರಶ್ನೆಗಳ ಮೇಲೆ ಹೋರಾಟ, ಪ್ರತಿಭಟನೆಗಳು ನಡೆಯಲು ಅವಕಾಶ ಕೊಡುವುದಿಲ್ಲ, ಬಿಜೆಪಿ ಶಾಸಕ, ಸಂಸದರ ವಿರುದ್ಧ ಧ್ವನಿ ಎತ್ತಲು ಅವಕಾಶ ಕೊಡುವುದಿಲ್ಲ ಎಂದು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ನಿರ್ಧರಿಸಿದಂತಿದೆ. ಅದಕ್ಕಾಗಿ ಹೋರಾಟ ಸಮಿತಿಯ ಸಂಚಾಲಕನಾದ ನನ್ನೊಬ್ಬನನ್ನು (ಮುನೀರ್ ಕಾಟಿಪಳ್ಳ) ಆರೋಪಿಯಾಗಿಸಿ FIR ಹಾಕಿದ್ದಾರೆ. FIR ಗಳಿಗೆ ಹೆದರುವ ಪ್ರಶ್ನೆ ಇಲ್ಲ. ಜನರ ಪರವಾದ ಹೋರಾಟಗಳು ಮುಂದುವರಿಯುತ್ತದೆ. ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕಾಗಿಯೂ ಹೋರಾಟ ಮುಂದುವರಿಯಲಿದೆ. ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಡ.

ಮಂಗಳೂರಿನ ಜನ ಚಳವಳಿಗಳ ಇತಿಹಾಸ ಗೊತ್ತಿಲ್ಲದವರು, ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳ ಕುರಿತು ಕುರುಡಾಗಿರುವವರು ಮಾತ್ರ ಕಮೀಷನರ್ ಅಗರ್ ವಾಲ್ ತರ ನಡೆದುಕೊಳ್ಳಲು ಸಾಧ್ಯ‌. ಅಗರ್ ವಾಲ್ ಅವರಿಗೆ ಕಾನೂನು, ಸಂವಿಧಾನದ ಕುರಿತು ಅರಿವಿನ ಕೊರತೆ ಇದೆ. ಅಥವಾ ನಾನು ಅದನ್ನು ಮೀರಿದವನು ಎಂಬ ಅಹಂ ಇದೆ. ಪೊಲೀಸ್ ಕಮೀಷನರ್ ಅವರ ಈ ಅತಿರೇಕದ ನಡವಳಿಕೆಯ ವಿರುಧ್ಧವೂ ಹೋರಾಟ ನಡೆಯಲಿದೆ‌. ತಡೆಯುವುದಾದರೆ ತಡೆಯಲಿ. ಸರಕಾರ ಇಂತಹ ಜನವಿರೋಧಿ ಅಧಿಕಾರಿಯನ್ನು ತಕ್ಷಣ ವರ್ಗಾಯಿಸಬೇಕು ಎಂದೂ ನಾವು ಆಗ್ರಹಿಸುತ್ತೇವೆ.

ಕಮೀಷನರ್ ಅಗರವಾಲ್ ಅವರೆ, ಹದಿನೈದು ದಿನದಲ್ಲಿ ಎರಡು FIR ಹಾಕಿದ್ದೀರಿ. ಯಾವಾಗ ಬಂಧಿಸುತ್ತೀರಿ ಹೇಳಿ, ನಿಮ್ಮ ಮುಂದೆ ಹಾಜರಾಗುತ್ತೇವೆ ಸಮಾಜಿಕ ತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೆ ನಾಳೆ ಜನಪರ ಪ್ರತಿಭಟನೆಗಳನ್ನು ನಿರಾಕರಿಸಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ದಮನಿಸುತ್ತಿರುವ ಪೊಲೀಸ್ ಕಮೀಷನರ್ ಅಗ್ರವಾಲ್ ವರ್ಗಾವಣೆಗೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಾಳೆ ಸಂಜೆ ಮಂಗಳೂರು ನಗರದ ರಾವ್ ಆಂಡ್ ರಾವ್ ಸರ್ಕಲ್ ಬಳಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ‌.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

Download Eedina App Android / iOS

X