ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್‌ನಲ್ಲಿ ಹಿಂದಿ ಖಾತೆಯನ್ನು ಪ್ರಾರಂಭಿಸಿದ್ದು ಇದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಐಪಿಎಲ್ ಫ್ರಾಂಚೈಸಿ ಕನ್ನಡ ಮಾತನಾಡುವವರ ಮೇಲೆ ಹಿಂದಿಯನ್ನು ಹೇರುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿದ್ದಾರೆ.
ಆದರೆ ಕೆಲವು ಅಭಿಮಾನಿಗಳು ಆರ್‌ಸಿಬಿಯ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆರ್‌ಸಿಬಿ ಜಾಗತಿಕವಾಗಿ ಅಭಿಮಾನಿಗಳನ್ನು ಹೊಂದಿದೆ. ಹಾಗಾಗಿ ಹಿಂದಿ ಖಾತೆಯು ಆ ಭಾಷೆಯ ಬೆಂಬಲಿಗರಿಗೆ ಮಾಹಿತಿ ನೀಡುತ್ತದೆ ಎಂದು ಹೇಳಿದ್ದಾರೆ.
ಎಕ್ಸ್‌ನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಖಾತೆಗಳನ್ನು ಹೊಂದಿರುವ ಆರ್ ಸಿಬಿ ಭಾನುವಾರ ಹಿಂದಿ ಖಾತೆ ಆರಂಭಿಸಿದೆ. ಈ ಖಾತೆ ಪ್ರಸ್ತುತ 2,600ಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದೆ. ಈ ಖಾತೆಯ ಮೊದಲ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ವಿಡಿಯೋವಿದೆ.
ಇದನ್ನು ಓದಿದ್ದೀರಾ? ಆರ್‌ಸಿಬಿ ತಂಡಕ್ಕೆ ಬಂದ ಹೊಡಿ ಬಡಿ ಆಟಗಾರ ಲಿಯಾಮ್ ಲಿವಿಂಗ್ಸ್ಟೋನ್, ಇವರ ಬ್ಯಾಟಿಂಗ್ ಅಬ್ಬರ ಹೇಗಿದೆ ಗೊತ್ತಾ?
ಆದರೆ ಆರ್‌ಸಿಬಿಐ ಈ ನಡೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. “ಇದು ಕನ್ನಡ ಸಂಸ್ಕೃತಿಗೆ ಅಗೌರವ ತಂದಿದೆ” ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಆರ್‌ಸಿಬಿಯನ್ನು ಉತ್ತರ ಭಾರತಕ್ಕೆ ತೆರಳಲು ಹೇಳಿದ್ದಾರೆ. ಇನ್ನು ಕೆಲವರು ಆರ್‌ಸಿಬಿ ಹೆಸರಿಂದ ಬೆಂಗಳೂರು ಎಂಬ ಪದವನ್ನು ತೆಗೆದುಹಾಕಬೇಕು ಎಂದಿದ್ದಾರೆ. ಇನ್ನು ಕೆಲವರು ಇತರರಿಗೆ ಯಾಕೆ ಹಿಂದಿ ಖಾತೆ ಬೇಕು ಎಂದು ಪ್ರಶ್ನಿಸಿದ್ದಾರೆ.
अपने प्रिय खिलाड़ी विराट कोहली को सुनिए अपनी प्रिय हिन्दी भाषा में, जहाँ उन्होंने आरसीबी से सालों से जुड़े रहने की खुशी और ऑक्शन पर अपनी बातें साझा की। 🤩
— Royal Challengers Bengaluru Hindi (@RCBinHindi) November 24, 2024
अब आरसीबी के सभी वीडियो आपकी पसंदीदा हिन्दी में भी उपलब्ध है! 🎥@RCBTweets @imVkohli | #PlayBold #Hindi pic.twitter.com/LeGJ6HhQzA
ಇನ್ನೊಂದೆಡೆ ಕೆಲವು ಆರ್‌ಸಿಬಿಯ ಕ್ರಮವನ್ನು ಸ್ವಾಗತಿಸಿದ್ದಾರೆ. ಕೆಲವರು ಅಭಿಮಾನಿಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ರಾಜ್ಯದಲ್ಲಿ ಹಿಂದಿ ಮಾತನಾಡಲಾಗುತ್ತದೆ. ಹಾಗಾಗಿ ಈ ಕ್ರಮವು ಹಿಂದಿ ಮಾತನಾಡುವ ಅಭಿಮಾನಿಗಳಿಗೆ ಆರ್‌ಸಿಬಿಯನ್ನು ಹತ್ತಿರಕ್ಕೆ ತರುತ್ತದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ.
