ಕೃಷಿ ತ್ಯಾಜ್ಯ ಸುಡುವ ರೈತರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ವಿಫಲವಾಗಿದ್ದು, ಸಮಸ್ಯೆಗೆ ದೀರ್ಘಕಾಲೀನ ಪರಿಹಾರಕ್ಕಾಗಿ ಕಾರ್ಯವಿಧಾನವನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ನ್ಯಾಯಪೀಠವು, “ವಾರದಲ್ಲಿ ದಿನದ 24 ಗಂಟೆಯೂ(24/7) ಡೇಟಾ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಯಂತ್ರವನ್ನು ಪ್ರಾರಂಭಿಸಬೇಕಾಗಿದೆ” ಎಂದು ಹೇಳಿದರು.
“ನಾವು ಎಲ್ಲ ಪಕ್ಷಗಳನ್ನು ಸಮಗ್ರವಾಗಿ ಆಲಿಸಲು ಪ್ರಸ್ತಾಪಿಸುತ್ತೇವೆ. ತಡವಾಗಿ ಬಿತ್ತನೆ ಮಾಡಿದ್ದರಿಂದ ಈ ಎಲ್ಲ ಸಮಸ್ಯೆಗಳು ಸಂಭವಿಸುತ್ತಿವೆ. ನಾವು ವಿಷಯದ ಮೂಲಕ್ಕೆ ಹೋಗಿ ನಿರ್ದೇಶನಗಳನ್ನು ನೀಡಲು ಬಯಸುತ್ತೇವೆ. ಏನಾದರೂ ಮಾಡಲೇಬೇಕು. ಪ್ರತಿವರ್ಷ ಈ ಸಮಸ್ಯೆ ಉದ್ಭವಿಸುವುದಿಲ್ಲ. ಲಭ್ಯವಿರುವ ದತ್ತಾಂಶದ ಪ್ರಕಾರ, ರೈತರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಎರಡೂ ರಾಜ್ಯಗಳು ತುಂಬಾ ನಿಧಾನವಾಗಿವೆಯೆಂದು ಹೇಳಬಹುದು” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
“ಯಾವ ಸಮಯದಲ್ಲಿ ದತ್ತಾಂಶವನ್ನು ಸಂಗ್ರಹಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಂತಹ ಬುದ್ಧಿವಂತರು ರೈತರು. ಹಾಗಾಗಿ ಅವರು ಆ ಸಮಯದಲ್ಲಿ ಕೃಷಿ ತ್ಯಾಜ್ಯವನ್ನು ಸುಡಲಿಲ್ಲ. ಮತ್ತೊಂದೆಡೆ, ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಇಸ್ರೋ ಪ್ರೋಟೋಕಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ಹೇಳಿದರು.
ಭೂ ದಾಖಲೆ ಅಧಿಕಾರಿ ಮತ್ತು ಸಂಗ್ರೂರ್ ಬ್ಲಾಕ್ ಪಟ್ವಾರಿ ಯೂನಿಯನ್ ಅಧ್ಯಕ್ಷರು ಉಪಗ್ರಹ ಪತ್ತೆಯಾಗುವುದನ್ನು ತಪ್ಪಿಸಲು ಸಂಜೆ 4ರ ನಂತರ ಕಸವನ್ನು ಸುಡಲು ರೈತರಿಗೆ ಸಲಹೆ ನೀಡಿದ್ದಾಗಿ ಒಪ್ಪಿಕೊಂಡಿರುವ ಪಂಜಾಬ್ ಸಂಬಂಧಿತ ಮಾಧ್ಯಮದ ವರದಿಯನ್ನು ನ್ಯಾಯಪೀಠ ಗಮನಿಸಿದೆ.
ಮಾಧ್ಯಮದ ವರದಿಯನ್ನು ನಂಬಬೇಕಾದರೆ ಇದನ್ನು “ತುಂಬಾ ಗಂಭೀರ” ಎಂದು ಕರೆದ ನ್ಯಾಯಾಲಯ, “ದಿನದ ನಿರ್ದಿಷ್ಟ ಕೆಲವು ಗಂಟೆಗಳಲ್ಲಿ ಚಟುವಟಿಕೆಗಳು ಪತ್ತೆಯಾಗುತ್ತಿವೆ ಎಂಬ ಅಂಶದ ಲಾಭ ಪಡೆಯಲು ರೈತರಿಗೆ ಅವಕಾಶ ನೀಡಬಾರದು. ಇಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗದಂತೆ ಪಂಜಾಬ್ ಸರ್ಕಾರ ಕೂಡಲೇ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಬೇಕು” ಎಂದು ಪಂಜಾಬ್ ರಾಜ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿತು.
ದೆಹಲಿ-ಎನ್‌ಸಿಆರ್‌ನ ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುವ ಕಸ ಸುಡುವುದನ್ನು ನಿಗ್ರಹಿಸುವ ಕ್ರಮಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರ ಸಮಿತಿಯನ್ನು ರಚಿಸುವ ಪ್ರಸ್ತಾಪವನ್ನು ಕೇಂದ್ರವು ಈ ಹಿಂದೆ ಉನ್ನತ ನ್ಯಾಯಾಲಯದಲ್ಲಿ ವಿರೋಧಿಸಿತ್ತು.
ಈ ಸುದ್ದಿ ಓದಿದ್ದೀರಾ? ಎಎಸ್ಐ ಸಮೀಕ್ಷೆ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಂಭಾಲ್ ಮಸೀದಿ ಸಮಿತಿ; ನ.29ರಂದು ಅರ್ಜಿ ವಿಚಾರಣೆ
ನವೆಂಬರ್ 18ರಂದು ನೀಡಿದ ಆದೇಶದಲ್ಲಿ, ನೈಜ ಸಮಯದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ನಾಸಾದ ಧ್ರುವ-ಕಕ್ಷೆಯ ಉಪಗ್ರಹಗಳಿಗೆ ವಿರುದ್ಧವಾಗಿ ಭೂಸ್ಥಾಯೀ ಉಪಗ್ರಹಗಳನ್ನು ಬಳಸಿಕೊಂಡು ಕೃಷಿ ಬೆಂಕಿಯ ಡೇಟಾವನ್ನು ಸಂಗ್ರಹಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ಸಿಎಕ್ಯೂಎಂಗೆ ನಿರ್ದೇಶನ ನೀಡಿತು.
ನಾಸಾ ಉಪಗ್ರಹಗಳಿಂದ ಅಸ್ತಿತ್ವದಲ್ಲಿರುವ ದತ್ತಾಂಶವು ನಿರ್ದಿಷ್ಟ ಸಮಯದ ವಿಂಡೋಗಳಿಗೆ ಸೀಮಿತವಾಗಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿದ್ದು, ಸಮಗ್ರ ದಿನದ ಮೇಲ್ವಿಚಾರಣೆಗಾಗಿ ಸ್ಥಿರ ಉಪಗ್ರಹಗಳನ್ನು ಬಳಸುವಲ್ಲಿ ಇಸ್ರೋದ ಪಾಲ್ಗೊಳ್ಳುವಿಕೆಗೆ ನಿರ್ದೇಶನ ನೀಡಿದೆ.