ಸಂವಿಧಾನ ನಮ್ಮ ಬದುಕು, ಸಂವಿಧಾನವಿಲ್ಲದೆ ನಾವು ಬದುಕುವುದಕ್ಕೆ ಸಾಧ್ಯವಿಲ್ಲ. ಭಾರತೀಯರು ಸಂವಿಧಾನದ ಆಶಯದಂತೆ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಂತ ಸಂವಿಧಾನವನ್ನು ಪ್ರತಿಯೊಬ್ಬ ಭಾರತೀಯ ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಶುಕ್ರವಾರ ಪರಿವರ್ತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಮಂಡ್ಯ ಪ್ರಗತಿಪರ ಸಂಘಟನೆಗಳ ಸಹಕಾರದಲ್ಲಿ ಆಯೋಜಿಸಿದ್ದ 75ನೇ ವರ್ಷದ ಸಂವಿಧಾನ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನ ಮತ್ತು ಬೃಹತ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವದಲ್ಲಿಯೇ ಲಿಖಿತ ಸಂವಿಧಾನ ಹೊಂದಿದರುವ ಭಾರತ ಒಕ್ಕೂಟ ಮಾದರಿಯಾಗಿದೆ. 1949ರಲ್ಲಿ ಬಹುತೇಕ ರಾಷ್ಟ್ರಗಳಲ್ಲಿ ಅಲಿಖಿತ ಸಂವಿಧಾನವಿತ್ತು. ಭಾರತ ಲಿಖಿತ ಸಂವಿಧಾನವನ್ನು ಅಂಗೀಕರಿಸಿದ ವೇಳೆ ಸಾಕಷ್ಟು ಸಮಸ್ಯೆಗಳು ಇದ್ದವು. ಬಡತನ, ಅನಕ್ಷರತೆ, ಮೂಢನಂಭಿಕೆ, ಮೌಢ್ಯತೆ ಇದ್ದವು. ಇವುಗಳಿಗೆ ಸಂವಿಧಾನ ಹೊಂದಿಕೊಳ್ಳುತ್ತದೆ ಎಂಬ ಭಾವನೆ ಬೇರೆ ರಾಷ್ಟ್ರಗಳಾದ್ದಾಗಿತ್ತು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಮನಗರ | ನವಜಾತ ಶಿಶುವನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್, ಆಸ್ಪತ್ರೆ ಸಿಬ್ಬಂದಿ ಶಾಕ್ – ಈ ದಿನ.ಕಾಮ್

ಸಂವಿಧಾನ ಸರಾಸರಿ 20-25 ವರ್ಷಗಳು ಮಾತ್ರ ಜಾರಿಯಲ್ಲಿರಬಹುದು. ನಂತರ ಬದಲಾವಣೆ ಮಾಡಲಿಕ್ಕೆ ಸಾಧ್ಯವಾಗಬಹುದು ಎಂದು ವಿದೇಶಿ ರಾಷ್ಟ್ರಗಳು ಮಾತನಾಡಿಕೊಳ್ಳುತ್ತಿದ್ದವು. ಆದರೆ 75 ವರ್ಷಗಳು ತುಂಬಿವೆ. ಬದುಕಿನೊಂದಿಗೆ ಸಾಗಿ ಬಂದಿದೆ. ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಬೇಕಿದೆ ಎಂದು ಹೇಳಿದರು.
ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಭಾರತ ಒಕ್ಕೂಟದ ಸಂವಿಧಾನ ಲಿಖತವಾಗಿದೆ. ಪ್ರಪಂಚದಲ್ಲಿಯೇ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಗೆ ಇದೆ. ಸಂವಿಧಾನ ಎಂದರೆ ಕಾನೂನು ಗ್ರಂಥವಾಗಿದೆ. ಇದರ ಮೂಲಕವೇ ಎಲ್ಲರಿಗೂ ಎಲ್ಲಾ ಹಕ್ಕು ಸೌಲಭ್ಯಗಳು ದೊರೆಯುತ್ತಿರುವುದು ಎಂದು ನುಡಿದರು.
ಕಳೆದ 15 ವರ್ಷಗಳ ಹಿಂದೆ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. ಬಳಿಕ ಸಂವಿಧಾನ ದಿನಾಚರಣೆ ಎಂದು ಆಚರಣೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮನ್ನಾಳುವ ಸರ್ಕಾರಗಳು ಸಂವಿಧಾನ ಸಮರ್ಪಣೆ ದಿನ ಮತ್ತು ಸಂವಿಧಾನ ಜಾರಿಯಾದ ದಿನಗಳನ್ನು ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತಿದೆ ಎಂದು ಎಚ್ಚರಿಸಿದರು.
ಜನವರಿ 26ರಂದು ಸಂವಿಧಾನ ಜಾರಿಯಾದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸುತ್ತಿರುವುದು ಎಷ್ಟು ಸರಿ, ಸಂವಿಧಾನ ಜಾರಿ ದಿನ ಎಂದು ಏಕೆ ಆಚರಿಸುತ್ತಿಲ್ಲ, ಇದರ ಹುನ್ನಾರವೇನು ಎಂಬ ಪ್ರಶ್ನೆಗಳನ್ನು ಹಾಕಿಕೊಂಡು 20 ವರ್ಷಗಳ ಹಿಂದೆ ಬಿವಿಎಸ್ ಸಂಘಟನೆಯು ಹೋರಾಟದ ಮೂಲಕ ಜಾಗೃತಿ ಮೂಡಿಸಿತ್ತು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸ್ವಿಲ್ವರ್‌ಜ್ಯೂಬ್ಲಿ ಪಾರ್ಕ್‌ನಿಂದ ಹೊರಟ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜ ಚಾಲನೆ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಭಾರತೀಯ ಜನತಾ ಪಕ್ಷಕ್ಕೆ ನೀತಿಯೂ ಇಲ್ಲ, ರೀತಿಯೂ ಇಲ್ಲ
ಅಶ್ವರೂಢ ಬೆಳ್ಳಿರಥದಲ್ಲಿ ಸಂವಿಧಾನ ಪೀಠಿಕೆಯನ್ನು ತಮಟೆ, ನಗಾರಿ, ಕಹಳೆ, ಪೂಜಾ ಕುಣಿತ, ಡೊಳ್ಳು, ಗೊಂಬೆ ಮುಂತಾದ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಜಾಗೃತಿ ಮೂಡಿಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಶೇಕ್ ತನ್ವೀರ್ ಆಸಿಫ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾಧಿಕಾರಿ ಕೆ.ಮಂಜುಳ, ಮೈ ಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ ಗಂಗಾಧರ್, ಪತ್ರಕರ್ತ ಬಿ.ಪಿ ಪ್ರಕಾಶ್, ಪ್ರಗತಿಪರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ತಗ್ಗಹಳ್ಳಿ ವೆಂಕಟೇಶ್, ಹೋರಾಟಗಾರರಾದ ಸುನಂದ ಜಯರಾಮ್, ಸಿ ಕುಮಾರಿ, ಎಲ್ ಸಂದೇಶ್, ಎಸ್ ನಾರಾಯಣ್, ನಗರಸಭಾ ಸದಸ್ಯರಾದ ಶ್ರೀಧರ್, ಗೀತಾ, ಶಿವಪ್ರಕಾಶ್, ಹರೀಶ. ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಪರಿವರ್ತನ ಸಂಸ್ಥೆಯ ಕಾರ್ಯದರ್ಶಿ ಟಿ.ಡಿ ನಾಗರಾಜು, ನಿರ್ದೇಶಕ ಮುಕುಂದ ಹಾಲಹಳ್ಳಿ, ನರಸಿಂಹಮೂರ್ತಿ, ಲಂಕೇಶ್ ಮಂಗಲ, ದಸಂಸ ಮುಖಂಡ ಎಂ.ವಿ.ಕೃಷ್ಣ, ಅಂಹಿದ ಶಿವರುದ್ರಯ್ಯ ಮತ್ತಿತರರಿದ್ದರು.