ಚಿಂತಾಮಣಿ | ಮಾಡಿಕೆರೆ ಡೈರಿ ಅಧ್ಯಕ್ಷರಾಗಿ ಎಂ ವೀರಪ್ಪ ರೆಡ್ಡಿ ಅವಿರೋಧ ಆಯ್ಕೆ

Date:

Advertisements

ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ ವೀರಪ್ಪ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೇವರಾಜು ಸಿ ಅವಿರೋಧ ಆಯ್ಕೆಯಾದರು.

ಅಧ್ಯಕ್ಷರ ಸ್ಥಾನಕ್ಕೆ ಎಂ ವೀರಪ್ಪ ರೆಡ್ಡಿ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ದೇವರಾಜು ಸಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಧಿಕಾರಿ ವನಿತಾ ಅಧಿಕೃತ ಆಯ್ಕೆಯನ್ನು ಘೋಷಿಸಿದರು.

ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಎಂ ವೀರಪ್ಪರೆಡ್ಡಿ ಮಾತನಾಡಿ, ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ರೈತರ ಸಹಕಾರದೊಂದಿಗೆ ಹಾಲು ಉತ್ಪಾದಕರ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

Advertisements
dairy 1

ಎಸ್ಟಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಮಣಿಕಂಠ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಮತ್ತು ಕೋಚಿಮುಲ್ ನಿರ್ದೇಶಕ ಅಶ್ವಥ್ ನಾರಾಯಣ್ ಬಾಬು ಅವರ ಮಾರ್ಗದರ್ಶನದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಕ್ರಿಯೆ ನಡೆದಿದ್ದು, ಅವರ ಸೂಚನೆಯಂತೆ ಡೈರಿ ಅಭಿವೃದ್ಧಿಗೆ ಎಲ್ಲರೂ ಸಹಕರಿಸುವುದಾಗಿ ಹೇಳಿದರು.

ಇದನ್ನೂ ಓದಿ : ಚಿಂತಾಮಣಿ | ಅಧಿಕ ಬೆಲೆಗೆ ಔಷಧಿ ಮಾರಾಟ; ಮೆಡಿಕಲ್ ಶಾಪ್‌ಗೆ ಬೀಗ

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಿ ಅಪ್ಪಾಜಿ ರೆಡ್ಡಿ, ಲಕ್ಷ್ಮಣ್ ರೆಡ್ಡಿ, ವಿ ಸುರೇಶ, ವಿ ಗೋವಿಂದ್ ಗೌಡ, ಎಸ್ ನಾಗೇಶ್, ರಾಧಕೃಷ್ಣ, ಆರ್ ಶಂಕರಪ್ಪ, ಲಕ್ಷ್ಮಮ್ಮ, ಶಾಂತಮ್ಮ ಹೆಚ್ಎಸ್, ನಾಗರಾಜ್ ಎಂ ಎಸ್, ಶಂಕರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ನರಸಿಂಹಪ್ಪ, ಪ್ರಮುಖ ಮುಖಂಡರಾದ ಶಿವಾರೆಡ್ಡಿ, ಆರ್ ಚೌಡರೆಡ್ಡಿ, ನಾರಾಯಣಸ್ವಾಮಿ ಆರ್‌ಎಂ‌ಪಿ, ಮೇಸ್ತ್ರಿ ವೆಂಕಟೇಶಪ್ಪ, ಚೆನ್ನಪ್ಪ, ಡೈರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಜಿ ನಾಗೇಶ್, ಸಿಬ್ಬಂದಿ ವರ್ಗದವರಾದ ಶಿವರಾಜ್, ಶ್ರೀನಿವಾಸಪ್ಪ, ಚೇತನ್ ಕುಮಾರ್, ರಾಮಪ್ಪ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X