ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬಾಲಿವುಡ್ ನಟ ಶರದ್ ಕಪೂರ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನ್ನನ್ನು ಮನೆಗೆ ಕರೆಸಿಕೊಂಡು ಅನುಚಿತವಾಗಿ ವರ್ತಿಸಿದ್ದಾರೆ ಎಂದು 32 ವರ್ಷದ ಸಂತ್ರಸ್ತೆ ಆರೋಪಿಸಿದ್ದಾರೆ.
ಬಿಎನ್ಎಸ್ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ನಟ ಶರದ್ ಕಪೂರ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಶರದ್ ಕಪೂರ್ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂವಹನ ನಡೆಸುತ್ತಿದ್ದರು. ಫೇಸ್ಬುಕ್ನಲ್ಲಿ ಮೆಸೇಜ್ ಮಾಡುತ್ತಿದ್ದ ಇಬ್ಬರೂ ವಿಡಿಯೋ ಕರೆ ಮೂಲಕವೂ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್, ರೌಡಿ ಶೀಟರ್ ತೆರೆಯುವ ಬಗ್ಗೆ ನೋಟಿಸ್
ಮಹಿಳೆಯನ್ನು ನಟ ಕಚೇರಿಗೆ ಬರುವಂತೆ ಆಹ್ವಾನಿಸಿದ್ದರು. ಆದರೆ ಮಹಿಳೆ ಕಳುಹಿಸಿದ ವಿಳಾಸಕ್ಕೆ ಹೋದ ಬಳಿಕ ಅದು ನಟನ ಕಚೇರಿಯಲ್ಲ, ಮನೆ ಎಂದು ತಿಳಿದುಬಂದಿದೆ. ಶರದ್ ಅನುಚಿತವಾಗಿ ವರ್ತಿಸಿರುವುದು ಮಾತ್ರವಲ್ಲದೇ ಬಲವಂತವಾಗಿ ಸ್ಪರ್ಶಿಸಿ ಕೋಣೆಗೆ ಕರೆದಿದ್ದಾರೆ ಎಂದು ಸಂತ್ರಸ್ತೆಯು ದೂರಿನಲ್ಲಿ ಹೇಳಿದ್ದಾರೆ.
“ಶರದ್ ನನ್ನ ಮೇಲೆ ದೌರ್ಜನ್ಯ ಎಸಗಲು ಪ್ರಯತ್ನಿಸಿದರು. ಈ ಘಟನೆ ನಡೆದ ಬಳಿಕ ಶರದ್ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
ಜೋಶ್, ಕಾರ್ಗಿಲ್ ಎಲ್ಒಸಿ, ಲಕ್ಷ್ಯ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶರದ್ ಮೊದಲು 1994ರಲ್ಲಿ ಮೇರಾ ಪ್ಯಾರಾ ಭಾರತ್ ಸಿನಿಮಾದ ಮೂಲಕ ತನ್ನ ವೃತ್ತಿ ಜೀವನ ಆರಂಭಿಸಿದರು. ಇತ್ತೀಚೆಗೆ 2022ರಲ್ಲಿ ‘ನೋ ಮೀನ್ಸ್ ನೋ’ ಮತ್ತು ‘ದಿ ಗುಡ್ ಮಹಾರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ.
