ಪಾಕಿಸ್ತಾನದ ಉತ್ತರ ಭಾಗದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಬುಡಕಟ್ಟು ಸಮುದಾಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಯುದ್ಧ ವಿರಾಮವನ್ನೂ ಮೀರಿ ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಗುಂಡಿನ ಕಾಳಗ ನಡೆದಿದೆ.
ಕಳೆದ 10 ದಿನಗಳಲ್ಲಿ ನಡೆದ ಹಿಂಸಾಚಾರದಲ್ಲಿ 170ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಾಚಿನರ್ ಬಳಿ ಪ್ರಯಾಣಿಕರ ವ್ಯಾನ್‌ಗಳ ಮೇಲೆ ದಾಳಿ ಬಳಿಕ ನವೆಂಬರ್ 22ರಂದು ಜಿಲ್ಲೆಯಲ್ಲಿ ಅಲಿಜೈ ಮತ್ತು ಬಗಾನ್ ಬುಡಕಟ್ಟು ಜನಾಂಗದವರ ನಡುವೆ ಘರ್ಷಣೆ ಆರಂಭವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 1991ರ ಕಾನೂನನ್ನು ಕಡೆಗಣಿಸುತ್ತವೆ ಧಾರ್ಮಿಕ ಸ್ಥಳಗಳ ಸಮೀಕ್ಷೆ ಮತ್ತು ದಾವೆಗಳು
ಕಳೆದ ಎರಡು ದಿನಗಳಿಂದ ಬಗನ್ ಬಜಾರ್‌ನಲ್ಲಿ ಭುಗಿಲೆದ್ದ ಹಿಂಸಾಚಾರ ಬಲಿಶ್ಖೇಲ್, ಖರ್, ಕಾಲಿ, ಜುಂಜ್ ಅಲಿಜೈ , ಮಕ್ಬಲ್ ಪ್ರದೇಶಗಳಿಗೂ ಹರಡಿದ್ದು 37 ಮಂದಿ ಮೃತಪಟ್ಟಿದ್ದಾರೆ.
ಕಳೆದ ಭಾನುವಾರ ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಮಾತುಕತೆ ನಡೆಸಿ 7 ದಿನಗಳ ಯುದ್ಧ ವಿರಾಮ ಘೋಷಿಸಿದ್ದ ಸರ್ಕಾರ, ಅದನ್ನು 19 ದಿನಗಳಿಗೆ ವಿಸ್ತರಿಸಿತ್ತು.
ಪೇಶಾವರ-ಪರಾಚಿನರ್ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು, ಇಂಟರ್‌ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಬಂದ್ ಮಾಡಲಾಗಿದೆ.
