ಗಿನಿ ದೇಶದ ಎರಡನೇ ಅತಿದೊಡ್ಡ ನಗರವಾದ ಎನ್‌ಜೆರೆಕೋರ್‌ನಲ್ಲಿ ಫುಟ್ಬಾಲ್ ಪಂದ್ಯವೊಂದು ನಡೆಯುತ್ತಿದ್ದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ ಸಂಭವಿಸಿ ಸುಮಾರು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಪಂದ್ಯ ನಡೆದ ಸ್ಥಳದ ಹೊರಗೆ ಜನರು ಓಡುವ ಮತ್ತು ಮೈದಾನದಲ್ಲಿಯೂ ಹಲವು ಮಂದಿಯ ಮೃತದೇಹಗಳಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇನ್ನು ಪ್ರತಿಭಟನಾಕಾರರು ಎನ್‌ಜೆರೆಕೋರ್‌ನಲ್ಲಿನ ಪೊಲೀಸ್ ಠಾಣೆಯನ್ನು ಕೂಡಾ ಹಾನಿಗೊಳಿಸಿ, ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ.
“ರೆಫರಿಯ ವಿವಾದಿತ ನಿರ್ಧಾರದಿಂದ ಈ ಘರ್ಷಣೆ ಶುರುವಾಯಿತು. ಆಕ್ರೋಶಗೊಂಡ ಅಭಿಮಾನಿಗಳು ಮೈದಾನಕ್ಕೆ ಇಳಿದರು” ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಪಾಕಿಸ್ತಾನದಲ್ಲಿ ಹಿಂಸಾಚಾರ: 124 ಸಾವು
ಫುಟ್ಬಾಲ್ ಪಂದ್ಯವು 2021ರ ದಂಗೆಯ ಮೂಲಕ ಅಧಿಕಾರವನ್ನು ವಹಿಸಿಕೊಂಡ ಮತ್ತು ತನ್ನನ್ನು ತಾನು ಅಧ್ಯಕ್ಷ ಎಂದು ಘೋಷಿಸಿಕೊಂಡ ಗಿನಿಯ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾಗಿದೆ ಎಂದು ವರದಿಯಾಗಿದೆ.
#Alerte/N’zérékoré : La finale du tournoi doté du trophée « Général Mamadi Doumbouya » vire au dr.ame… pic.twitter.com/fjTvdxoe0v
— Guineeinfos.com (@guineeinfos_com) December 1, 2024
2021ರ ಸೆಪ್ಟೆಂಬರ್‌ನಲ್ಲಿ ಡೌಂಬೌಯಾ ಬಲವಂತವಾಗಿ ದೇಶದ ನಿಯಂತ್ರಣ ಪಡೆದರು. ಹಾಗೆಯೇ ಇಂತಹ ಸ್ವಾಧೀನವನ್ನು ತಪ್ಪಿಸಲು ಕರ್ನಲ್ ಅನ್ನು ನೇಮಿಸಿದ್ದ ಅಧ್ಯಕ್ಷ ಆಲ್ಫಾ ಕಾಂಡೆ ಅವರನ್ನು ಪದಚ್ಯುತಗೊಳಿಸಿದರು.
