ಯುವಕನೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣ ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಪ್ರದೀಪ್ ಗುಂಟಿ ಮಾತನಾಡಿ, ‘ನ.29 ರಂದು ನಗರದ ಹಳೆ ಆದರ್ಶ ಕಾಲೋನಿಯ ನಿವಾಸಿ ಅಂಬರೀಶ್ (28) ಎಂಬ ಯುವಕನನ್ನು ನಗರದ ಗಣೇಶ ಮೈದಾನ ಎದುರು ಇರುವ ವೈನ್ ಶಾಪ್ ಬಳಿ ಬರ್ಬರವಾಗಿ ಕೊಲೆ ನಡೆದಿತ್ತು’ ಎಂದು ತಿಳಿಸಿದ್ದಾರೆ.
ಬೀದರ್ | ಬಸವಣ್ಣ ಕುರಿತು ಅವಹೇಳನಕಾರಿ ಹೇಳಿಕೆಗೆ ಆಕ್ರೋಶ
— eedina.com ಈ ದಿನ.ಕಾಮ್ (@eedinanews) December 2, 2024
ಮುಂದಿನ ಚುನಾವಣೆಯಲ್ಲಿ ಯತ್ನಾಳ ಸೋಲದೆ ಹೋದಲ್ಲಿ ಪೀಠ ತ್ಯಾಗಕ್ಕೆ ಸಿದ್ಧ
ಶಾಸಕ ಬಸನಗೌಡ ವಿರುದ್ಧ ಹುಲಸೂರ ಮಠದ ಶಿವಾನಂದ ಸ್ವಾಮೀಜಿ ವಾಗ್ದಾಳಿ #BasanagoudaPatilYatnal #eedina #lingayat #basavanna #vijayapur #bidar pic.twitter.com/xgx4UI4pi0
ನಗರ ಪೊಲೀಸರು ಕೊಲೆ ಆರೋಪಿಗಳ ಶೋಧ ಕಾರ್ಯ ನಡೆಸಿ, ರಾಜಕುಮಾರ (30), ಅನಿಲ್ (28) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅನುಭವ ಮಂಟಪ ವಚನ ವಿಶ್ವವಿದ್ಯಾಲಯದ ಕೇಂದ್ರವಾಗಲಿ : ಗೊ.ರು. ಚನ್ನಬಸಪ್ಪ
ಆಟೊ ಚಾಲಕನಾಗಿದ್ದ ಅಂಬರೀಶ್ ಎಂಬಾತನು ಮದ್ಯ ಕುಡಿದು ನಮ್ಮ ಜೊತೆ ಯಾವಾಗಲೂ ಜಗಳ ಮಾಡುತಿದ್ದ, ಹಾಗಾಗಿ ಅವನನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.