ನಮ್ಮ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಕೇರಳ ಮಾದರಿಯಲ್ಲಿ ಅನುದಾನ ನೀಡಬೇಕು ಹಾಗೂ ಈ ಹಿಂದೆ ತಾವು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಅನುದಾನ ಹೆಚ್ಚಿಗೆ ಮಾಡುವಲ್ಲಿ ಶ್ರಮಪಟ್ಟಿದ್ದೇನೆ. ಎಲ್ಲ ಸದಸ್ಯರು ಲಿಖಿತ ರೂಪದಲ್ಲಿ ತಮ್ಮ ಅಹವಾಲನ್ನು ಕೊಟ್ಟರೆ, ಆಯಾ ತಾಲೂಕಿನ ಶಾಸಕರ ಜತೆಗೆ ವಿಚಾರಿಸಿ ಸಮಸ್ಯೆ ನಿವಾರಿಸುವಲ್ಲಿ ಶ್ರಮಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಗೌಡ ಪಾಟೀಲ್ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿಕ್ಷಣಾಧಿಕಾರಿಗಳ ಆವರಣದಲ್ಲಿರುವ ಗುರುಭವನದಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಆಡಳಿತಾತ್ಮಕ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.
ಶಾಸಕ ಯಶವಂತರಾಯ ಗೌಡ ಪಾಟೀಲ ಮಾತನಾಡಿ, “ಸುನೀಲ್ ಗೌಡ ಪಾಟೀಲ್ ಕ್ರಿಯಾಶೀಲರಾಗಿದ್ದಾರೆ. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಉದ್ದಾರವಾಗುತ್ತೆ. ನಮ್ಮ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಸೌಲಭ್ಯ ಒದಗಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರು ಮೊ.ಸಂ. 7619287771ಕ್ಕೆ ತಮ್ಮ ಆಹವಾಲುಗಳನ್ನು ಕಳಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಗದಗ | ವಕ್ಫ್ ತಿದ್ದುಪಡಿ, ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ರೈತರ ಒತ್ತಾಯ
ಪುರಸಭೆ ಅಧ್ಯಕ್ಷ ಶ್ರೀ ಲಿಂಬಾಜಿ ರಾಠೋಡ್, ತಾ. ಪಂ ಅಧಿಕಾರಿ ನಂದೀಪ್ ರಾಠೋಡ್, ಉಪವಿಭಗಾಧಿಕಾರಿ ಅಬಿದ್ ಗದ್ಯಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಾವಿದ್ ಮೊಮೀನ್, ಬೋರಾಮಣಿ ಹಾಗೂ ಕಾಂಗ್ರೆಸ್ ಮುಖಂಡ ಪ್ರಶಾಂತ ಕಾಳೆ ಸೇರಿದಂತೆ ಹಲವು ಮುಖಂಡರು, ಇಂಡಿ ತಾಲೂಕಿನ ಎಲ್ಲ ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಭಾಗಿಯಾಗಿದ್ದರು.