ಕರ್ನಾಟಕ ಪೌರಾಡಳಿತ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಮಂಡ್ಯ ನಗರಸಭೆ ವತಿಯಿಂದ ಇ-ಖಾತಾ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಮಂಡ್ಯ ನಗರ ವ್ಯಾಪ್ತಿಯ ಆಸ್ತಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್(ನಾಗೇಶ್) ಕರೆ ನೀಡಿದರು.
“ಮಂಡ್ಯ ನಗರದ ಒಂದನೇ ವಾರ್ಡ್‌ನಲ್ಲಿ ಚಾಲನೆ ನೀಡಿದ ಆಂದೋಲನ, ಡಿಸೆಂಬರ್ 2ರಿಂದ 15ರವರೆಗೆ ಮಂಡ್ಯ ನಗರಸಭೆಯ 35 ವಾರ್ಡ್‌ಗಳಲ್ಲಿ ಇ-ಆಸ್ತಿ ಖಾತಾ ಆಂದೋಲನ ಜರುಗಲಿದ್ದು, ಆಸ್ತಿದಾರರು ತಮ್ಮ ಆಸ್ತಿಗಳಿಗೆ ಕಂದಾಯವನ್ನು ಪಾವತಿಸಿ ಹಾಗೂ ಸೂಕ್ತ ದಾಖಲಾತಿಗಳನ್ನು ನೀಡಿ ಈ ಆಸ್ತಿ ನಮೂನೆ-3ನ್ನು ಪಡೆಯಬಹುದು” ಎಂದು ತಿಳಿಸಿದರು.
ಇದನ್ನು ನೋಡಿದ್ದೀರಾ? ಮಂಡ್ಯ | ಕನ್ನಂಬಾಡಿ ಕಟ್ಟಿದ ತಮಿಳರ ಎತ್ತಂಗಡಿ?
ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ರಾಜಶೇಖರ ಎಚ್ ಎಸ್, ಕಂದಾಯ ನಿರೀಕ್ಷಕ ಪುನೀತ್ ಮತ್ತು ಕರ ವಸೂಲಿಗಾರರಾದ ಮಂಜು ಮತ್ತು ಮಹದೇವ್ ಇದ್ದರು.