ಗ್ರಾಹಕನಿಗೆ ಕಳಪೆ ಗುಣಮಟ್ಟದ ಫರ್ನಿಚರ್ ತಯಾರಿಸಿ ಕೊಟ್ಟು ವಂಚಿಸಿದ ವಿಟ್ಲ ಸಮೀಪದ ಕಲ್ಲಂಗಲದ ಪ್ರೀತಿ ಫರ್ನಿಚರ್ ಮಾಲಕ ಸಂಜಯ್ ಕುಮಾರ್‌ಗೆ ₹2೦,೦೦೦ ದಂಡ ವಿಧಿಸಿ ದಕ್ಷಿಣ ಕನ್ನಡದ ಮಂಗಳೂರು ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.
ಕಲ್ಲಂಗಳ ನಿವಾಸಿ ಹೈದರ್ ಅಲಿ ಅವರು ₹5೦,೦೦೦ ಮುಂಗಡ ನೀಡಿ ಉತ್ತಮ ಗುಣಮಟ್ಟದ ತೇಗದ ಮರದಿಂದ ಮನೆಗೆ ಪೀಠೋಪಕರಣವನ್ನು ತಯಾರಿಸಲು ಬೇಡಿಕೆ ನೀಡಿದ್ದರು. ನಿಗದಿತ ಸಮಯಕ್ಕೆ ಪೀಠೋಪರಕಣ ತಯಾರಿಸದೆ ಸತಾಯಿಸಿ ಕೊನೆಗೆ ಕಳಪೆ ಗುಣಮಟ್ಟದ ಪೀಠೋಪಕರಣಗಳನ್ನು ಪೂರೈಸಿದ ಬಗ್ಗೆ ಗ್ರಾಹಕರು ನ್ಯಾಯಾಲಯದಲ್ಲಿ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ಗಾಂಜಾ ಮಾರಾಟ : 9 ಮಂದಿ ಆರೋಪಿಗಳ ಬಂಧನ
ಗ್ರಾಹಕರ ದೂರಿನನ್ವಯ ಪ್ರಕರಣವನ್ನು ದಾಖಲಿಸಿದ ನ್ಯಾಯಾಲಯವು ವಿಚಾರಣೆ ನಡೆಸಿ ಮುಂಗಡ ಪಡೆದ ಹಣವನ್ನು ಗ್ರಾಹಕನಿಗೆ ಹಿಂದಿರುಗಿಸಿ ಪೀಠೋಪಕರಣವನ್ನು ಮರಳಿ ಪಡೆಯಲು ಆದೇಶ ನೀಡಿದೆ. ಸೇವೆಯಲ್ಲಿ ಕೊರತೆ ಮಾಡಿದಕ್ಕೆ ನಷ್ಟಪರಿಹಾರವಾಗಿ ₹20,000 ಮತ್ತು ದಾವೆಯ ಖರ್ಚು ₹10,000ವನ್ನು ಗ್ರಾಹಕನಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ.