ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಸೌಹಾರ್ದತಾಣ ಬಾಬಾಬುಡನ್‌ಗಿರಿ ದರ್ಗಾಯನ್ನು ದತ್ತಪೀಠ ಮಾಡಬೇಕು. ಹಿಂದುಪೀಠವಾಗಿ ಬದಲಿಸಬೇಕೆಂದು ಆಗ್ರಹಿಸಿ ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ದತ್ತ ಜಯಂತಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ವಾರಗಳ ವಾರಾಂತ್ಯದಲ್ಲಿ ಚಂದ್ರದ್ರೋಣ ಪರ್ವತದಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಡಿಸೆಂಬರ್ 6ರಿಂದ ಡಿಸೆಂಬರ್ 15ರ ನಡುವಿನ ಎರಡು (ಶನಿವಾರ+ಭಾನುವಾರ) ವಾರಾಂತ್ಯಗಳಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಗಾಳಿಕೆರೆ, ಬಾಬಾಬುಡನ್ ಗಿರಿ ದರ್ಗಾಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಿ ಜಿಲ್ಲಾಡಳಿತದ ಆದೇಶಿಸಿದೆ.
ಬಾಬಾಬುಡನ್‌ಗಿರಿಯಲ್ಲಿ 25 ವರ್ಷಗಳಿಂದ ವಿವಾದದ ತಾಣವಾಗಿಸಿರುವ ಬಜರಂಗದಳ ಮತ್ತು ವಿಎಚ್‌ಪಿ ಡಿಸೆಂಬರ್ 6ರಿಂದ 14ರವರೆಗೆ 25ನೇ ವರ್ಷದ ದತ್ತಜಯಂತಿ ನಡೆಸುತ್ತಿವೆ. ಡಿಸೆಂಬರ್ 6ರಂದು ದತ್ತಮಾಲಾ ಧಾರಣೆ ನಡೆಯಲಿದ್ದು, ನಂತರದ ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ನಡೆಯಲಿದೆ. ಬಾಬಾಬುಡನ್‌ಗಿರಿಯಾಗಿ ಹಿಂದುತ್ವದ ಕೋಮುವಾದಿ ತಾಣವಾಗಿಸಲು ಬಾಬಾಬುಡನ್‌ಗಿರಿಯಲ್ಲಿ ಹೋಮವನ್ನೂ ನಡೆಸಲು ಮುಂದಾಗಿವೆ. ಕೋಮುವಾದಿ ಕಾರ್ಯಕರ್ತರು ಕೋಮುವಾದಿ ಘೋಷಣೆಗಳು, ದ್ವೇಷ ಭಾಷಣಗಳನ್ನು ಮಾಡುವ ಸಾಧ್ಯತೆ ಇದೆ.
ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಜಿಲ್ಲೆಯ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ, ಮುಂದಿನ ಎರಡು ವಾರಗಳ ವಾರಾಂತ್ಯದಲ್ಲಿ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
Boot licker, you can do anything for money
Whoever worte this article is a hypocrite and thinks they can turn our Dattapeta into their terrorism breeding ground which can never happen.