ದೆಹಲಿಗೆ ತೆರಳುತ್ತಿದ್ದ ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಬುಧವಾರ ಅಲಿಗಢದಲ್ಲಿ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನ್ನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಕೇಶ್ ಟಿಕಾಯತ್, “ನಮ್ಮನ್ನು ಅವರು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆ ಎಂಬುದು ನಮಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
VIDEO | UP Police detains farmer leader Rakesh Tikait in Aligarh.
— Press Trust of India (@PTI_News) December 4, 2024
“We don’t know where they are taking us. If they won’t come out with a solution then we will start a tractor rally from here to Lucknow. We will wait for the government’s reply till today evening,” he says.
(Full… pic.twitter.com/NWZesJuedJ
ಇದನ್ನು ಓದಿದ್ದೀರಾ? ಕನ್ವರ್ ಯಾತ್ರೆ ಬಳಿಕ ರೈತರ ಬೃಹತ್ ಪ್ರತಿಭಟನೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ
ಹಾಗೆಯೇ, “ನಮ್ಮ ಬೇಡಿಕೆಯನ್ನು ಈಡೇರಿಸಿದ್ದರೆ, ಪರಿಹಾರ ಕಂಡುಕೊಳ್ಳದಿದ್ದರೆ ನಾವು ಲಕ್ನೋನಿಂದ ಟ್ರಾಕ್ಟರ್ ರ‍್ಯಾಲಿ ನಡೆಸಲಿದ್ದೇವೆ. ಇಂದು ಸಂಜೆಯವರೆಗೆ ಸರ್ಕಾರದ ಪ್ರತಿಕ್ರಿಯೆಗೆ ನಾವು ಕಾಯುತ್ತೇವೆ” ಎಂದೂ ಈ ವೇಳೆಯೇ ತಿಳಿಸಿದ್ದಾರೆ.
ಮಂಗಳವಾರ ನೂರಾರು ಪ್ರತಿಭಟನಾನಿರತ ರೈತರ ಬಂಧನ ಮಾಡಲಾಗಿದೆ. ಇದನ್ನು ಖಂಡಿಸಿದ್ದ ಟಿಕಾಯತ್ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯನ್ನು ಇನ್ನಷ್ಟು ವಿಸ್ತರಿಸುವುದಾಗಿ ಹೇಳಿದ್ದರು.
