ಶಾಲಾ ವಿದ್ಯಾರ್ಥಿಗಳ ಮೇಲೆ ಕೋತಿ ದಾಳಿಗೈದ ಪರಿಣಾಮ ಓರ್ವ ಬಾಲಕನಿಗೆ ಗಂಭಿರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಧಾರವಾಡದ ಮದಾರಮಡ್ಡಿ ಬಡಾವಣೆಯಲ್ಲಿ ನಡೆದಿದೆ.
ಬೆಳಿಗ್ಗೆ ಶಾಲೆಗೆ ಹೊರಟಿದ್ದ ಮಕ್ಕಳ ಮೇಲೆ ಕೋತಿ ದಾಳಿ ಮಾಡಿದ್ದು, ಈ ಕಾರಣದಿಂದ ಅಂಗನವಾಡಿ ಹಾಗೂ ಒಂದನೇ ತರಗತಿಗೆ ಮಕ್ಕಳಿಗೆ ರಜೆ ನೀಡಲಾಗಿದೆ.
ಗಂಭಿರವಾಗಿ ಗಾಯಗೊಂಡ ಓರ್ವ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ (ಸಿವಿಲ್) ದಾಖಲಿಸಲಿದ್ದಾರೆ.