ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಮೋಹಿತ್ ನರಸಿಂಹ ಮೂರ್ತಿ ವಿರುದ್ಧ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆಯಲ್ಲಿ ಜಾತಿ ದೌರ್ಜನ್ಯ ತಡೆ(ಅಟ್ರಾಸಿಟಿ) ಕೇಸ್ ದಾಖಲಾಗಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಪೇಜ್‌ನಲ್ಲಿ ಮೋಹಿತ್ ನರಸಿಂಹ ಸತೀಶ್ ಜಾರಕಿಹೊಳಿ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸದಲ್ಲದೆ, ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ದೂರುದಾರ ಗೋವಿಂದ್ ರಾಜ್ ನಾಯಕ ಮಾತನಾಡಿ, “ಮೋಹಿತ್ ನರಸಿಂಹ ಮೂರ್ತಿ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಸೇರಿ ಇನ್ನೂ ಕೆಲವರಿಗೆ ತುಂಬಾ ಕೆಟ್ಟ ಪದಗಳಿಂದ ನಿಂದಿಸಿ ಅವಮಾನ ಮಾತನಾಡಿದ್ದಾನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಬಾಬಾ ಸಾಹೇಬರನ್ನು ಕಳೆದುಕೊಂಡ ಭಾರತ ಅನಾಥವಾಗಿದೆ: ಮಂಜು ಬುರುಡಿ
“ಸತೀಶ್ ಜಾರಕಿಹೊಳಿಯವರು ದಲಿತ ಸಮುದಾಯಕ್ಕೆ ಸೇರಿದ್ದಾರೆಂಬ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಮಾತನಾಡಿದ್ದಾನೆಂದು ಎದ್ದು ಕಾಣುತ್ತಿದೆ. ವಿಡಿಯೊ ಮೂಲಕ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದರು.
ಕವಿತಾಳ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ್ ಅವರು ಅಟ್ರಾಸಿಟಿ ದಾಖಲಿಸಿಕೊಂಡು ಆರೋಪಿಗೆ ತನಿಖೆ ನಡೆಸುತ್ತಿದ್ದಾರೆ.
