ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಅನುಪಮ ಕೊಡುಗೆ ನೀಡಿದ ಭಾರತೀಯ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಳೆದುಕೊಂಡ ಭಾರತ ಅನಾಥವಾಗಿದೆ ಎಂದು ಡಾ ಬಾಬು ಜಗಜೀವನರ ಆದಿಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗ ಸಂಚಾಲಕ ಮಂಜು ಬುರಡಿ ಬೇಸರ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ರೋಣ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪರಿವೀಕ್ಷಣಾ ಮಂದಿರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಪುಣ್ಯ ಸ್ಮರಣೆಯ ನಿಮಿತ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಮೇಣದ ಬತ್ತಿ ಹಚ್ಚುವುದರ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
“ಶಿಕ್ಷಣ ಸಂಘಟನೆ ಹೋರಾಟದ ಮಾರ್ಗದಲ್ಲಿ ಸಮಾಜದ ಕಟ್ಟಕಡೆ ವ್ಯಕ್ತಿಗೂ ನ್ಯಾಯ ಒದಗಿಸಿದ ಮಹಾತ್ಮ ಯಾರಾದರೂ ಇದ್ದರೆ, ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಅವರು ಬರೆದ ಸಂವಿಧಾನವು ‘ಸರ್ವ ಧರ್ಮಗಳಿಗೂ ಸಮಭಾವ’ ಎಂಬ ಸಂದೇಶ ಸಂವಿಧಾನದ ಮುಖ್ಯ ಧ್ಯೇಯವಾಗಿದೆ. ಸಮಾನತೆ ಸ್ವಾತಂತ್ರ್ಯಕ್ಕಾಗಿ ಅನೇಕ ನೋವುಗಳನ್ನು ಸಹಿಸಿಕೊಂಡು ಭಾರತ ದೇಶಕ್ಕೆ ಉತ್ತಮವಾದ ಸಂವಿಧಾನ ಬರೆದುಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಳೆದುಕೊಂಡ ಭಾರತ ಅನಾಥವಾಗಿದೆ” ಎಂದರು.
“ಸಮಾಜದಲ್ಲಿ ಎಲ್ಲ ಯುವಕರು ಡಾ. ಬಿ ಆರ್ ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ”
ಎಂದು ಮಂಜು ಬುರುಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮನರೇಗಾ ಮಾನವ ದಿನ 200ಕ್ಕೆ ಹೆಚ್ಚಿಸಲು ಗ್ರಾಕೂಸ್ ಆಗ್ರಹ
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಯಲ್ಲಪ್ಪ ಹಿರೇಮನಿ, ಪ್ರಕಾಶ ಜಗಳೂರು, ಶರಣಪ್ಪ ಮಾದರ, ಭೀಮಪ್ಪ ಮಾದರ, ಮಂಜುನಾಥ ಮಾದರ, ಅನಿಲ ದಂಡಿನ, ಎಲ್ಲಪ್ಪ ಪೂಜಾರ, ಶಿವು ಪೂಜಾರ, ಶರಣು ಮಾದರ, ಅರುಣ್ ಕುಮಾರ ಚೆನ್ನದಾಸರ ಸೇರಿದಂತೆ ಅನೇಕರು ಇದ್ದರು.