ವಿಶ್ವಶ್ರೇಷ್ಠ ಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ನವ ಭಾರತದ ನಿರ್ಮಾತೃ, ತನ್ನ ಅಗಾದ ಜ್ಞಾನ ಸಂಪತ್ತಿನಿಂದ, ಶೋಷಿತರು, ಮಹಿಳೆಯರು, ಸೇರಿದಂತೆ ಕೋಟ್ಯಾನುಕೋಟಿ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಬಜಗೂರು ಮಂಜುನಾಥ್ ತಿಳಿಸಿದರು.
ತಿಪಟೂರಿನ ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆಗಳು ಆಯೋಜಿಸಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತತ್ವ ಚಿಂತನೆಗಳನನ್ನ ರೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಭಿಮಾನದಿಂದ ಬದುಕಿದಾಗ ಅದು ಅಂಬೇಡ್ಕರ್ ರವರಿಗೆ ಸಲ್ಲಿಸುವ ಗೌರವ,ವಿಶ್ವ ಜ್ಞಾನಿ ಅಂಬೇಡ್ಕರ್ ರವರು ತಮ್ಮ ಜೀವಿತಾವಧಿಯನ್ನ ಅಧ್ಯಯನದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ್ದಾರೆ,ಸಾವಿರಾರು ವರ್ಷಗಳಿಂದ ವರ್ಣಾಶ್ರಮದ ಕತ್ತಲೆ ಕೂಪದಲ್ಲಿ ಬೇಯುತ್ತಿದ ಭಾರತಕ್ಕೆ ಸಂವಿಧಾನದ ಮೂಲಕ ಬೆಳಕು ನೀಡಿದ ಮಹಾಜ್ಯೋತಿ, ಡಿಸೆಂಬರ್ 6ರಂದು ಪರಿನಿಬ್ಬಣಗೊಂಡು ವಿಶ್ವಚೈತನ್ಯವಾಗಿದ್ದೆ ಎಂದು ತಿಳಿಸಿದರು.
ಡಿ.ಎಸ್.ಎಸ್ ಮುಖಂಡ ಹರೀಶ್ ಗೌಡ ಮಾತನಾಡಿ ಅಂಬೇಡ್ಕರ್ ವಿಶ್ವದ ಮಹಾ ಚೇತನ, ತಮ್ಮ ಜೀವನ ಪೂರ್ತಿ ಬಡವರು,ನೊಂದವರು, ಶೋಷಿತರ ಹೇಳಿಗೆಗಾಗಿ ವ್ಯಯಿಸಿದ್ದಾರೆ, ಎಂದು ತಿಳಿಸಿದರು
ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್ ಮಾತನಾಡಿ ಅಂಬೇಡ್ಕರ್ ಒಂದು ಜಾತಿ ಧರ್ಮಕ್ಕೆ ಸೀಮಿತರಾದ ವ್ಯಕ್ತಿಯಲ್ಲ, ವಿಶ್ವಕ್ಕೆ ಬೆಳಕು ನೀಡಿದ ಮಹಾನ್ ಚೇತನ ,ಅವರು ಹಾಕಿಕೊಟ್ಟದಾರಿಯಲ್ಲಿ ನಡೆದರೆ ಮನುಕುಲದ ಉದ್ದಾರ ಸಾಧ್ಯವಾಗುತ್ತದೆ,ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಸವಿತ ಸಮಾಜದ ಮುಖಂಡ ಗೋವಿಂದರಾಜು, ದೀಲಿಪ್ ಕುಮಾರ್, ತಡಸೂರು ರೇಣು, ಕೊರಚ ಸಮಾಜದ ಅಧ್ಯಕ್ಷ ಸತೀಶ್, ದಲಿತ ಮುಖಂಡರಾದ ಬಿ.ಟಿ ಕುಮಾರ್, ಮಂಜುನಾಥ್ ಹಾಲ್ಕುರಿಕೆ, ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.