ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸ್ವಾಭಿಮಾನ ಮತ್ತು ತ್ಯಾಗದ ಸಂಕೇತ ತನ್ನ ಸ್ವಂತ ಮಗ ತೀರಿಕೊಂಡಾಗಲೂ ಮಗನ ಮುಖ ನೋಡಲಾಗದೇ ದುಖಃವನ್ನು ನುಂಗಿಕೊಂಡು ತನ್ನ ಶೋಷಿತ ಸಮುದಾಯದವರಿಗಾಗಿ ತನ್ನ ಇಡೀ ಜೀವನನ್ನೇ ಮುಡಿಪಾಗಿಟ್ಟವರು ಅಂಬೇಡ್ಕರ್ ರವರು. ಸತತ ಎರಡು ವರ್ಷಕ್ಕೂ ಹೆಚ್ಚು ಕಾಲ ವಿಶ್ರಾಂತಿ ತೆಗೆದುಕೊಳ್ಳದೇ, ಯಾರು ಗೈರಾದರೂ ಛಲಬಿಡದೇ, ಶ್ರಮವಹಿಸಿ ಸಂವಿಧಾನ ರಚಿಸಿ ಈ ದೇಶಕ್ಕೆ ನೀಡಿದವರು ಬಾಬಾಸಾಹೇಬರು.
ನೀರೇ ಮುಟ್ಟುವ ಹಾಗಿರದ ಸಂದರ್ಭದಲ್ಲಿ ಚೌಧಾರ್ ಕೆರೆಯ ನೀರು ಕುಡಿದು ಪ್ರತಿಭಟಿಸಿದರು. ಶೋಷಿತರಿಗೆ ದೇವಸ್ಥಾನ ಪ್ರವೇಶ ನಿಷಿಧ್ಧ ಇದ್ದ ಸಂಧರ್ಭದಲ್ಲಿ ಕಾಳಾರಾಮ ದೇವಸ್ಥಾನ ಪ್ರವೇಶ ಮಾಡಿ ಈ ದೇಶದಲ್ಲಿ ನಮಗೂ ದೇವಸ್ಥಾನ ಪ್ರವೇಶಿಸುವ ಹಕ್ಕು ಇದೇ ಎಂದು ತೋರಿಸಿಕೊಟ್ಟವರು. ಬಾಬಾಸಾಹೇಬರು ಕೊಟ್ಟ ಸಂವಿಧಾನದಿಂದಲೇ ನಾನಿಂದು ಒಬ್ಬ ಅಧಿಕಾರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರು.
ಅವರು ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಉಡುಪಿ ವತಿಯಿಂದ , ಮಣಿಪಾಲದ ಪ್ರಗತಿನಗರದಲ್ಲಿ ಹಮ್ಮಿಕೊಂಡಿದ್ದ ಬಾಬಾಸಾಹೇಬ್ ಅಂಬೇಡ್ಕರ್ ರವರ 68 ನೇ ಪರಿನಿಬ್ಬಾಣದ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ದ.ಸಂ.ಸ.ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮಾತನಾಡಿ ಇಲ್ಲಿನ ಲೇಬರ್ ಕಾಲೋನಿಯಲ್ಲಿ ನಿಮಗೆ ಮನೆ ಕಟ್ಟಿ ಕೊಟ್ಟಿದ್ದು, ರಸ್ತೆ ಮಾಡಿದ್ದು, ಚರಂಡಿ ಮಾಡಿದ್ದು ಯಾವುದೇ ರಾಜಕೀಯ ಪಕ್ಷದವರಲ್ಲಾ, ಇದು ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದತ್ತವಾಗಿ ಕೊಟ್ಟ ಅನುದಾನದ ಆನುಸಾರ ಸಮಾಜದ ಅಭಿವೃದ್ಧಿ ಕೆಲಸ ಮಾಡಿದ್ದಾರಷ್ಟೇ. ಅದು ಅವರ ಕರ್ತವ್ಯ, ಇಲ್ಲಿರುವ ಎಲ್ಲಾ ಅಕ್ಕ ತಂಗಿಯವರು ಅಣ್ಣ ತಮ್ಮಂದಿರು ತಮ್ಮಂತೆ ಮಕ್ಕಳನ್ನು ಕೂಲಿ ಕೆಲಸಕ್ಕೆ ತಯಾರು ಮಾಡದೇ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಮಾಡಿ ಸರಕಾರಿ ಅಧಿಕಾರಿಗಳಾಗುವಂತೆ ನೋಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ರವರು ಇಲ್ಲಿನ ಎಲ್ಲಾ ಅಕ್ಕ ತಂಗಿಯರು ಸ್ವಸಹಾಯ ಸಂಘವನ್ನು ಕಟ್ಟಿ ಸಂಘಟಿತರಾಗಿ ಮುಂದೆ ನಾವು ಆರಂಭಿಸುವ ಬ್ಯಾಂಕ್ ಗೆ ಆಧಾರ ಸ್ಥಂಭವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಸುರೇಶ ಹಕ್ಲಾಡಿ, ಮಂಜುನಾಥ್ ನಾಗೂರು, ಶ್ಯಾಮಸುಂದರ್ ತೆಕ್ಕಟ್ಟೆ, ರಾಜೇಂದ್ರ ಮಾಸ್ಟರ್ ಬೆಳ್ಳೆ, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಪದಾಧಿಕಾರಿಗಳಾದ ಕುಮಾರ್ ಕೋಟ, ರಾಜು ಬೆಟ್ಟಿನಮನೆ, ಶ್ರೀಧರ ಕುಂಜಿಬೆಟ್ಟು , ಮಂಜುನಾಥ್ ಬಾಳ್ಕುದ್ರು ಭಾಸ್ಕರ ಕೆರ್ಗಾಲ್, ಸುರೇಶ ಬಾರ್ಕೂರು, ಶಂಕರ್ ದಾಸ್ ಚೆಂಡ್ಕಳ, ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು, ಹರೀಶ್ಚಂದ್ರ ಬಿರ್ತಿ, ಪ್ರಶಾಂತ್ ಬಿರ್ತಿ, ಶಿವಾನಂದ ಬಿರ್ತಿ, ರಾಘವೇಂದ್ರ ಬೆಳ್ಳೆ, ಶಿವಾನಂದ ಮೂಡುಬೆಟ್ಟು ಸುರೇಶ್ ಬೆಳ್ಳೆ, ಭೀಮಪ್ಪ ಪ್ರಗತಿ ನಗರ, ಮಂಜು ಅಂಬೇಡ್ಕರ್ ಪ್ರಗತಿ ನಗರ, ಲೋಹಿತ್ ಪ್ರಗತಿನಗರ ಉಪಸ್ಥಿತರಿದ್ದರು.
