ಗುಬ್ಬಿ ತಾಲೂಕಿನ ಮುಸ್ ಕೊಂಡ್ಲಿ ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಹರಿಕಥಾ ವಿದ್ವಾನ್ ಎಂ.ಎನ್.ಮೂರ್ತಿ ಅವರಿಗೆ ಕುಂದಾನಗರಿ ಬೆಳಗಾವಿ ತುಳಸಿ ಅಭಿವೃದ್ಧಿ ಸಂಸ್ಥೆಯಿಂದ ಕರ್ನಾಟಕ ನೆಲ ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿಕ, ಕಲೆ ಸಾಮಾಜಿಕ ಹಾಗೂ ಜನಪರ ಕಾಳಜಿ ಇಟ್ಟು ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಡಿಸೆಂಬರ್ 8ರಂದು ಸುವರ್ಣ ಕರ್ನಾಟಕ ಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವೃತ್ತಿಯಲ್ಲಿ ಕೃಷಿಕರಾದ ಇವರು18 ನೇ ವಯಸ್ಸಿನಲ್ಲಿ ರಂಗಭೂಮಿ ಪ್ರವೇಶಿಸಿ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ಕಾರೆಹಳ್ಳಿ ಶ್ರೀ ಚಿಕ್ಕಮ್ಮ ದೊಡ್ಡಮ್ಮ ದೇವಿ ಕೃಪಾಪೋಷಿತ ನಾಟಕ ಮಂಡಳಿಯವರು ಕಲಾ ಸಾಮ್ರಾಟ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈಗ ಸುವರ್ಣ ಕರ್ನಾಟಕ ಕಲಾ ರತ್ನ ಪ್ರಶಸ್ತಿಗೆ ಭಾಜನರಾಗಳಿದ್ದಾರೆ.
