ಉಡುಪಿ | ರುಂಡ ಮುಂಡ ಬೇರ್ಪಟ್ಟಿರುವ ಕೊಳೆತ ಶವ‌ ಪತ್ತೆ

Date:

ಗುರುತು ಹಿಡಿಯಲಾಗದಷ್ಟು ಕೊಳೆತಿರುವ‌ ಅಪರಿಚಿತ ಪುರಷನ ಶವವೊಂದು, ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು ಕಲಾಭೂಮಿ ಕಟ್ಟಡದ ಹಿಂಬಾಗದ ಹಾಡಿಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದಿದೆ. ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿ ಮೃತಪಟ್ಟು 20 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಶವ ಕೊಳೆತಿರುವುದರಿಂದ‌ ನೇಣುಕುಣಿಕೆಯಲ್ಲಿ ಭಾರ‌ ತಡೆಯಲಾಗದೆ, ದೇಹದ ರುಂಡ ಬೆರ್ಪಟ್ಟಿದೆ.

- Advertisement -

ಘಟನಾ ಸ್ಥಳದಲ್ಲಿ ಹಾಜರಿದ್ದು ಮಣಿಪಾಲದ ಪೋಲಿಸಠಾಣೆಯ ಎ.ಎಸ್.ಐ ನಾಗೇಶ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಸುಧಾಕರ್, ಸಿಬ್ಬಂದಿ ಸಂಗೀತ ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ಶವ ಪರೀಕ್ಷಾ ಘಟಕಕ್ಕೆ ಸಾಗಿಸಲು, ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ಇಲಾಖೆಗೆ ನೆರವಾದರು. ಮೃತ ವ್ಯಕ್ತಿಯ ವಾರಸುದಾರರು ಮಣಿಪಾಲ ಪೋಲಿಸ್ ಠಾಣೆಯ‌ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಗೋಕರ್ಣ | ಕುಡ್ಲೆ ಕಡಲತೀರದಲ್ಲಿ ಸಮುದ್ರ ಸುಳಿಗೆ ಸಿಲುಕಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಪಾಯಕಾರಿ ಸುಳಿಗೆ ಸಿಲುಕಿದ ಬೆಂಗಳೂರಿನ ಇಬ್ಬರು...